ಸಾರಾಂಶ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಸುಳ್ಯ ನಗರದಲ್ಲಿ ಬಹುತೇಕ ವರ್ತಕರು ಬುಧವಾರ ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.
ಕನ್ನಡಪ್ರಭ ವಾರ್ತೆ ಸುಳ್ಯ
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಸುಳ್ಯ ನಗರದಲ್ಲಿ ಬಹುತೇಕ ವರ್ತಕರು ಬುಧವಾರ ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.ಬೆಳಗ್ಗೆ ೧೧ರಿಂದ ೧೨ ಗಂಟೆವರೆಗೆ ಸ್ವಯಂ ಪ್ರೇರಿತ ಬಂದ್ ನಡೆಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಜಮ್ಮುವಿನ ಘಟನೆ ಬೇಸರ ತರಿಸಿದೆ. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಎಲ್ಲರೂ ಒಗ್ಗಟ್ಟಾಗಬೇಕಿದೆ. ಉಗ್ರರಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದರು.ಭಯೋತ್ಪಾದಕ ಕೃತ್ಯ ಕೊನೆಗಾನಿಸಲು ಸೈನಿಕರಿಗೂ ನಾವು ಶಕ್ತಿ ನೀಡೋಣ ಎಂದು ಹೇಳಿದರು.ಜಿ.ಜಿ. ನಾಯಕ್ , ರಾಜೇಶ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಕಂದಡ್ಕ, ಸುಬೋದ್ ಶೆಟ್ಟಿ ಮೇನಾಲ ಮಾತನಾಡಿದರು.
ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ, ಡಾ.ಮನೋಜ್ ಅಡ್ಡಂತಡ್ಕ, ಹರೀಶ್ ಕಂಜಿಪಿಲಿ, ಸುಧಾಕರ ಕುರುಂಜಿಭಾಗ್, ಶಿವರಾಮ ಕೇರ್ಪಳ, ಅಶೋಕ್ ಪ್ರಭು, ಪೂಜಿತಾ ಕೆ.ಯು. , ಸುಶೀಲ ಕಲ್ಲುಮುಟ್ಲು, ಚಂದ್ರಶೇಖರ ಅಡ್ಪಂಗಾಯ, ಹೇಮಂತ್ ಮಠ, ಪ್ರಬೋದ್ ಶೆಟ್ಟಿ ಮೇನಾಲ, ಸುಧಾಕರ ಕಾಮತ್ ಅಡ್ಕಾರು, ಕೇಶವ ನಾಯಕ್,ದಯಾನಂದ ಕೇರ್ಪಳ, ಕರುಣಾಕರ ಹಾಸ್ಪಾರೆ, ದಾಮೋದರ ಮಂಚಿ, ಮಧು ಕೊಡಿಯಾಲಬೈಲು, ಜಗದೀಶ್ ಸರಳಿಕುಂಜ,ಮಧುಸೂದನ್ ಜಯನಗರ, ಹೇಮಂತ್ ಕಂದಡ್ಕ, ದಿನೇಶ್ ಶಾಂತಿಮಜಲು, ದೇವರಾಜ್ ಕುದ್ಪಾಜೆ, ಸುಳ್ಯ ನಗರದ ವರ್ತಕರು, ರಿಕ್ಷಾ ಚಾಲಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.
ಸುಳ್ಯ ತಾಲೂಕಿನ ಇತರ ಊರುಗಳಲ್ಲೂ ಕೂಡಾ ಒಂದು ಗಂಟೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಪ್ರತಿಭಟಿಸಿದರು.