ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಬ್ರ್ಯಾಂಡ್‌ಗಳಲ್ಲೊಂದು ಆಗಿರುವ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಳಗಾವಿಯಲ್ಲಿ ತನ್ನ 219ನೇ ಹೊಸ ಶೋರೂಮ್‌ನ್ನು ಶಹಾಪುರ ಶಾಸ್ತ್ರೀ ನಗರದ ಗೋವಾವೇಸ್ ಬಳಿ ಖಾನಾಪುರ ರಸ್ತೆಯಲ್ಲಿ ಆರಂಭಿಸಿದೆ.ಶನಿವಾರ ಈ ನೂತನ ಶೋರೂಮ್‌ನ್ನು ರಿಬ್ಬನ್ ಕತ್ತರಿಸುವ ಮೂಲಕ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಫೈನಾನ್ಷಿಯಲ್ ಡೈರೆಕ್ಟರ್ ಮೀನಾ ರಾಜಕುಮಾರ ಮತ್ತು ನಿರ್ದೇಶಕ ರಾಹುಲ್ ಆರ್ ಪೈ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ನಗರ ಸೇವಕ ಗಿರೀಶ ದೊಂಗಡಿ ಆಗಮಿಸಿದ್ದರು. ನಗರ ಹೃದಯಭಾಗದಲ್ಲೇ ಗ್ರಾಹಕರಿಗೆ ಸುಧಾರಿತ ಶಾಪಿಂಗ್ ಅನುಭವ ಮತ್ತು ವಿಭಿನ್ನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಆಯ್ಕೆಯನ್ನು ಒದಗಿಸುತ್ತದೆ.
9000 ಚದರ ಅಡಿ ವಿಸ್ತೀರ್ಣದ ಈ ಶೋರೂಮ್ ಆಧುನಿಕ ಮತ್ತು ಆಕರ್ಷಕ ವಿನ್ಯಾಸ ಹೊಂದಿದ್ದು, ಪೈ ಇಂಟರ್‌ನ್ಯಾಷನಲ್‌ನ ನವೀನತೆ, ಗುಣಮಟ್ಟ ಹಾಗೂ ಗ್ರಾಹಕ ತೃಪ್ತಿಯ ಬದ್ಧತೆಯ ಪ್ರತಿಬಿಂಬವಾಗಿದೆ. ಇಲ್ಲಿ ಗ್ರಾಹಕರು ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಸಾಧನಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಫರ್ನಿಚರ್ ಸೇರಿದಂತೆ ನವೀನ ಸಂಗ್ರಹವನ್ನು ನೇರವಾಗಿ ಅನುಭವಿಸಬಹುದು.ಹೊಸ ಶೋ ರೂಮ್ ಆರಂಭಿಸಿದ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ₹5,000 ಮೌಲ್ಯದ ಖರೀದಿಗೆ ಉಚಿತ ವಾಟರ್ ಬಾಟಲ್, ₹7,500 ಮೌಲ್ಯದ ಖರೀದಿಗೆ ಉಚಿತ ಮ್ಯಾಗ್ನಮ್ ಟಿಫಿನ್ ಬಾಕ್ಸ್, ₹10,000 ಮೌಲ್ಯದ ಖರೀದಿಗೆ ಉಚಿತ ಆರ್‌ಬಿ ಕಡಾಯಿ,
₹15,000 ಮೌಲ್ಯದ ಖರೀದಿಗೆ ಉಚಿತ ಪಿಲೋ ನೀಡಲಾಗುತ್ತಿದೆ. ಅಲ್ಲದೇ ಕೂಪನ್ ಆಫರ್ ಕೂಡ ಇದೆ. ಪ್ರತಿ ₹2,000 ಖರೀದಿಗೆ ಉಚಿತ ಕೂಪನ್ ನೀಡಲಾಗುತ್ತಿದೆ. 25 ಕಾರುಗಳನ್ನು ಗೆಲ್ಲುವ ಅವಕಾಶವಿದೆ. ಜೊತೆಗೆ ₹17 ಕೋಟಿ ಪೈ ಲಾಯಲ್ಟಿ ಪಾಯಿಂಟ್‌ಗಳನ್ನು ರಿಡೀಮ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಪೈ ಮೇಗಾ ಫೆಸ್ಟಿವಲ್ ಸೇಲ್ ಆಯೋಜಿಸಲಾಗಿದೆ.ಬೆಳಗಾವಿಯಲ್ಲಿ ನಮ್ಮ ಹೊಸ ಶೋರೂಮ್ ಆರಂಭಿಸುತ್ತಿರುವುದಕ್ಕೆ ನಾವು ಅತ್ಯಂತ ಉತ್ಸುಕರಾಗಿದ್ದೇವೆ. ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಅನುಭವಿಸುವ ಅವಕಾಶ ನೀಡುವುದು ನಮ್ಮ ಉದ್ದೇಶ ಎಂದು ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಪ್ರತಿನಿಧಿಗಳು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))