ಬಾರ ಎತ್ತಿ ಕಸರತ್ತು ಪ್ರದರ್ಶಿಸಿದ ಪೈಲ್ವಾನರು

| Published : Aug 29 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಮೂರನೇ ದಿನವಾದ ಬುಧವಾರ ಸಿಬಿಎಸ್‌ಸಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾರ ಎತ್ತುವ ಸ್ಪರ್ಧೆಗಳು ಜನರ ಮೈಮನ ರೋಮಾಂಚನಗೊಳಿಸಿದವು. ೯೫ ಕೆಜಿ, ೧ ಕ್ವಿಂಟಾಲ್, ೧ ಕ್ವಿಂಟಾಲ್‌ಕ್ಕಿಂತಲೂ ಹೆಚ್ಚಿನ ಬಾರದ ಗುಂಡುಗಲ್ಲು, ಸಂಗ್ರಾಣಿ ಕಲ್ಲು ಎತ್ತುವ ಮೂಲಕ ಪೈಲ್ವಾನರು ತಮ್ಮ ಶಕ್ತಿ ಪ್ರದರ್ಶಿಸಿದರು. ಜನರು ಸುಡು ಬಿಸಿಲನ್ನು ಲೆಕ್ಕಿಸದೇ ಘೋಷಣೆಗಳನ್ನು ಕೂಗಿ ಹುರಿದುಂಬಿಸಿದರು. ವಿಜೇತರಾದವರಿಗೆ ಬಸವೇಶ್ವರ ಜಾತ್ರಾ ಉತ್ಸವ ಸಮಿತಿಯಿಂದ ಬೆಳ್ಳಿ ಕಡಗ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಮೂರನೇ ದಿನವಾದ ಬುಧವಾರ ಸಿಬಿಎಸ್‌ಸಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾರ ಎತ್ತುವ ಸ್ಪರ್ಧೆಗಳು ಜನರ ಮೈಮನ ರೋಮಾಂಚನಗೊಳಿಸಿದವು. ೯೫ ಕೆಜಿ, ೧ ಕ್ವಿಂಟಾಲ್, ೧ ಕ್ವಿಂಟಾಲ್‌ಕ್ಕಿಂತಲೂ ಹೆಚ್ಚಿನ ಬಾರದ ಗುಂಡುಗಲ್ಲು, ಸಂಗ್ರಾಣಿ ಕಲ್ಲು ಎತ್ತುವ ಮೂಲಕ ಪೈಲ್ವಾನರು ತಮ್ಮ ಶಕ್ತಿ ಪ್ರದರ್ಶಿಸಿದರು. ಜನರು ಸುಡು ಬಿಸಿಲನ್ನು ಲೆಕ್ಕಿಸದೇ ಘೋಷಣೆಗಳನ್ನು ಕೂಗಿ ಹುರಿದುಂಬಿಸಿದರು. ವಿಜೇತರಾದವರಿಗೆ ಬಸವೇಶ್ವರ ಜಾತ್ರಾ ಉತ್ಸವ ಸಮಿತಿಯಿಂದ ಬೆಳ್ಳಿ ಕಡಗ ನೀಡಿ ಸನ್ಮಾನಿಸಲಾಯಿತು.

ಈ ಸ್ಪರ್ಧೆಯಲ್ಲಿ ೨೧೫ ಕೆಜಿ ಗುಂಡುಗಲ್ಲು ಎತ್ತುವ ಪೈಲ್ವಾನರಿಗೆ ದೇವರಹಿಪ್ಪರಗಿ ತಾಲೂಕಿನ ಹರನಾಳದ ಮಾಜಿ ಪೈಲ್ವಾನ್ ಆನಂದ ಗುಣಕಿ ಅವರು ೫೦ ತೊಲಿಯ ಬೆಳ್ಳಿ ಗದೆಯನ್ನು ಉಡುಗೊರೆ ನೀಡಲು ಮುಂದಾಗಿದ್ದರು. ಆದರೆ, ಯಾರು ಬಾರ ಎತ್ತದ ಹಿನ್ನಲೆಯಲ್ಲಿ ಗದೆಯನ್ನು ಜಾತ್ರಾ ಸಮಿತಿಗೆ ಸಿದ್ದಲಿಂಗಶ್ರೀ, ಶಿವಕುಮಾರಶ್ರೀ, ಈರಣ್ಣ ಪಟ್ಟಣಶೆಟ್ಟಿ ಅವರ ಮೂಲಕ ಹಸ್ತಾಂತರಿಸಿದರು. ಇಬ್ಬರು ಪೈಲ್ವಾನರು ಎತ್ತಲು ಪ್ರಯತ್ನಿಸಿ ವಿಫಲರಾದರು. ಇದರಿಂದಾಗಿ ಈ ಬೆಳ್ಳಿ ಗದೆ ಜಾತ್ರಾ ಉತ್ಸವ ಸಮಿತಿಯಲ್ಲಿಯೇ ಉಳಿಯಿತು. ಈ ಸ್ಪರ್ಧೆಯಲ್ಲಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಪೈಲ್ವಾನರು ಭಾಗವಹಿಸಿದ್ದರು.

ಸಿದ್ದಲಿಂಗ ಶ್ರೀ, ಶಿವಕುಮಾರ ಶ್ರೀ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಧುರೀಣರಾದ ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ಸಂಗಮೇಶ ಓಲೇಕಾರ, ಸಂಗಯ್ಯ ಒಡೆಯರ, ಸುಭಾಸ ಗಾಯಕವಾಡ, ಮೀರಾಸಾಬ ಕೊರಬು, ಸಂಗಪ್ಪ ಡಂಬಳ, ಮಹಾಂತೇಶ ಹಂಜಗಿ, ಪ್ರವೀಣ ಪೂಜಾರಿ, ಮುತ್ತು ಪತ್ತಾರ, ಬಸವರಾಜ ಅಳ್ಳಗಿ, ಎಂ.ಬಿ.ತೋಟದ, ದಯಾನಂದ ಜಾಲಗೇರಿ, ಬೀರಪ್ಪ ಪೂಜಾರಿ, ಕಾಂತು ರೆಡ್ಡರ, ಶ್ರೀಕಾಂತ ಬಾಡಗಿ, ಶಿವಪ್ಪ ಶೀಕಳವಾಡಿ, ಉಸ್ಮಾನ ಬೊಮ್ಮನಹಳ್ಳಿ, ನಾಗರಾಜ ಗುಂದಗಿ ಇದ್ದರು.ಬಾಕ್ಸ್‌

ಬಾರ ಎತ್ತುವ ಸ್ಪರ್ಧೆಯಲ್ಲಿ ಗೆದ್ದ ಪೈಲ್ವಾನರುಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ನರಗುಂದದ ಮುತ್ತು ನಂದಪ್ಪ ಬನಹಟ್ಟಿ ಪ್ರಥಮ, ಬೀಳಗಿಯ ರಿಯಾಜ್ ಜಮಾದಾರ ಬಿಸನಾಳ ದ್ವಿತೀಯ, ಜತ್ತ್‌ದ ಜಗನಾಥ ಪವಾರ ಆಸಂಗಿ, ಬನಹಟ್ಟಿಯ ರುದ್ರೇಶ ಮಂಜುನಾಥ ತಳವಾರ ತೃತೀಯ ಸ್ಥಾನ, ಸಂಗ್ರಾಣಿ ಕಲ್ಲುವತ್ತಿ ಎತ್ತುವ ಸ್ಪರ್ಧೆಯಲ್ಲಿ ಮೆಳ್ಳವಂಕಿಯ ಶಿವಾನಂದ ಜಾಡಣ್ಣನವರ ಪ್ರಥಮ, ಗುಳೇದಗುಡ್ಡದ ವಿಠ್ಠಲ ಮುತ್ತಪ್ಪ ಮನ್ನಿಕಟ್ಟಿ ದ್ವಿತೀಯ, ನಾಗೂರಿನ ಮುತ್ತಪ್ಪ ಶರಣಪ್ಪ ಕಡ್ಲಿಮಟ್ಟಿ ತೃತೀಯ ಸ್ಥಾನ. ಗುಂಡು ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪೂರಿನ ಶಿವಲಿಂಗಪ್ಪ ಶಿರೂರ ಪ್ರಥಮ, ಯಾಳವಾರದ ಮಾಳಪ್ಪ ಕೊಂಡಗುಳಿ ದ್ವಿತೀಯ, ಜತ್ತ ತಾಲೂಕಿನ ಶಿಡ್ಯಾಳದ ಬೀರಪ್ಪ ಗೊಗವಾಡ ತೃತೀಯ ಸ್ಥಾನ. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಗೋನಾಳದ ವಿಠ್ಠಲ ರಾಮಣ್ಣ ಹಡಗಲಿ ಪ್ರಥಮ, ಹೊನ್ನಾಕಟ್ಟಿಯ ಶಿವನಪ್ಪ ಮಾರುತಿ ನರಗುಂದ ದ್ವಿತೀಯ, ಗುನ್ನಾಪೂರಿನ ಪ್ರವೀಣ ಗುನ್ನಾಪುರ ತೃತೀಯ ಸ್ಥಾನ, ಹಲ್ಲಿನಿಂದ ಕಬ್ಬಿಣದ ಹಾರಿ ಎತ್ತುವ ಸ್ಪರ್ಧೆಯಲ್ಲಿ ಮುಳಸಾವಳಗಿಯ ರಮೇಶ ಪಾಟೀಲ ಪ್ರಥಮ,ಇಂಗಳಗಿಯ ಮಾಳಪ್ಪ ಪೂಜಾರಿ ದ್ವಿತೀಯ, ಮೆಟ್ಟ ಮೇಲೆ ಚೀಲ ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪೂರಿನ ಬೀರಪ್ಪ ಲೋಗಾವಿ ಪ್ರಥಮ, ಇಂಗಳಗೇರಿಯ ಕರೆಪ್ಪ ಪೂಜಾರಿ ದ್ವಿತೀಯ, ಉಸುಕಿನ ಕೊಡ ಎತ್ತುವ ಸ್ಪರ್ಧೆಯಲ್ಲಿ ಸುರಪುರದ ಭೀಮಣ್ಣ ನಗನೂರ ಪ್ರಥಮ, ಸುರಪುರದ ಅನಿಲ ನಗನೂರ ದ್ವಿತೀಯ, ತೆಕ್ಕಿ ಬಡೆದು ಹಾರಿ ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪೂರಿನ ಬೀರಪ್ಪ ಲೋಗಾವಿ ಪ್ರಥಮ, ಮಸಬಿನಾಳದ ಅಲಿತಾಪ ಬಾಗವಾನ ದ್ವಿತೀಯ ಸ್ಥಾನ ಪಡೆದರು.

ತೆಲಗಿಯ ಶಾಂತಪ್ಪ ಈರಗಾರ ಅವರು ಸಂಗ್ರಾಣಿ ಕಲ್ಲು ಹಗ್ಗ ಕಟ್ಟಿ ಬಾಯಿಂದ ಜಗ್ಗುವ ಮೂಲಕ ಗಮನ ಸೆಳೆದರೆ, ಮುತ್ತಗಿಯ ಪರಶುರಾಮ ಹೂಗಾರ ಅವರು ಮೀಸೆಯಿಂದ ಸಂಗ್ರಾಣಿ ಕಲ್ಲು ಎತ್ತಿ ಸೈ ಎನಿಸಿಕೊಂಡರು.