ಮಗುವಿನಲ್ಲಿ ಸೃಜನಾತ್ಮಕತೆ ಬೆಳೆಯಲು ಚಿತ್ರಕಲೆ ಪ್ರಮುಖ ಪಾತ್ರ: ಡಿಡಿಪಿಐ ಬಿ.ಕೆ. ನಂದನೂರ್

| Published : Jan 02 2024, 02:15 AM IST

ಮಗುವಿನಲ್ಲಿ ಸೃಜನಾತ್ಮಕತೆ ಬೆಳೆಯಲು ಚಿತ್ರಕಲೆ ಪ್ರಮುಖ ಪಾತ್ರ: ಡಿಡಿಪಿಐ ಬಿ.ಕೆ. ನಂದನೂರ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ನಗರದ ಕಾಳಿದಾಸ ಶಿಕ್ಷಣ ಸಂಸ್ಥೆ0ುಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಡಿಡಿಪಿಐ ಬಿ.ಕೆ. ನಂದನೂರ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಕ್ಕಳ ಕಲಿಕೆ0ುಲ್ಲಿ ಚಿತ್ರಕಲಾ ಶಿಕ್ಷಣ ಅತ್ಯಂತ ಮಹತ್ವದ ಅಂಗವಾಗಿದೆ. ಮಗುವಿನಲ್ಲಿ ಸೃಜನಾತ್ಮಕತೆ ಬೆಳೆಯಲು ಚಿತ್ರಕಲಾ ಶಿಕ್ಷಕರ ಪಾತ್ರ ತೀರ ಮಹತ್ವದ್ದಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಕ್ಕಳ ಕಲಿಕೆ0ುಲ್ಲಿ ಚಿತ್ರಕಲಾ ಶಿಕ್ಷಣ ಅತ್ಯಂತ ಮಹತ್ವದ ಅಂಗವಾಗಿದೆ. ಮಗುವಿನಲ್ಲಿ ಸೃಜನಾತ್ಮಕತೆ ಬೆಳೆಯಲು ಚಿತ್ರಕಲಾ ಶಿಕ್ಷಕರ ಪಾತ್ರ ತೀರ ಮಹತ್ವದ್ದಾಗಿದೆ ಎಂದು ಡಿಡಿಪಿಐ ಬಿ.ಕೆ. ನಂದನೂರ್ ಹೇಳಿದರು.

ನಗರದ ಕಾಳಿದಾಸ ಶಿಕ್ಷಣ ಸಂಸ್ಥೆ0ುಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ದೊರೆ0ುುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ಆಸಕ್ತಿಯಿಂದ ಪಾಠ ಮಾಡಿದರೆ ಅಂತಹ ಶಿಕ್ಷಕರು ವಿದ್ಯಾರ್ಥಿಗಳ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದರು.

ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಚಿತ್ರಕಲಾ ವಿಷಯ ಪ್ರಶಿಕ್ಷಕ ಡಾ.ಮಂಜುನಾಥ ಮಾನೆ ಪ್ರಾಸ್ತಾವಿಕ ಮಾತನಾಡಿ, ಇಂತಹ ಕಾರ್ಯಾಗಾರ ಶಿಕ್ಷಕರನ್ನು ಕ್ರಿಯಾಶೀಲ ರನ್ನಾಗಿಸುತ್ತವೆ. ಚಿತ್ರಕಲೆ ಎಲ್ಲ ವಿಷಯಗಳ ತಾಯಿ ಇದ್ದಂತೆ ಎಂದು ಹೇಳಿದರು.

ಇಳಕಲ್ ಡಯಟ್‌ ನ ಹಿರಿಯ ಉಪನ್ಯಾಸಕ ಎಚ್.ಎಸ್. ಪಾಟೀಲ್, ಎಸ್.ಎಚ್. ಬಿರಾದಾರ್, ಉಪನಿರ್ದೇಶಕ ಕಾರ್ಯಾಲಯದ ವೃತ್ತಿ ಶಿಕ್ಷಣ ವಿಷ0ು ಪರಿವೀಕ್ಷಕ ಮಾಡಮಗೇರಿ ಮತ್ತು ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಎಸ್. ಮುದ್ದೇಬಿಹಾಳ ಭಾಗವಹಿಸಿದ್ದರು. ಚಿತ್ರಕಲಾ ಶಿಕ್ಷಕರಾದ ಕೆ.ಎಂ. ರಘುವೀರ್ ಪ್ರಾರ್ಥಿಸಿದರು. ಡಾ. ಉಮಾ ಕಾತರಕಿ ವಂದಿಸಿದರು. ಎ.ಎಲ್. ಬಡಿಗೇರ ನಿರೂಪಿಸಿದರು.