ಮತಗಟ್ಟೆ ಕೇಂದ್ರ ಗೋಡೆಗಳಲ್ಲಿ ಚಿತ್ರಗಳ ಚಿತ್ತಾರ

| Published : Apr 01 2024, 12:47 AM IST

ಸಾರಾಂಶ

ಪುತ್ತೂರು ತಾಲೂಕು ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಆಕರ್ಷಿಸುಂತೆ ಮಾಡಲು ೯ ವಿಶೇಷ ಮಾದರಿ ಮತಗಟ್ಟೆಗಳನ್ನು ಚಿತ್ರ ಚಿತ್ತಾರಗಳೊಂದಿಗೆ ಸುಂದರಗೊಳಿಸಲಾಗುತ್ತಿದೆ.

ಕನ್ನಡಪ್ರಭವಾರ್ತೆ ಪುತ್ತೂರು

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾರರನ್ನು ಸೆಳೆಯಲಿರುವ ಸಖಿ, ಸಾಂಪ್ರದಾಯಿಕ, ವಿಶೇಷ ಚೇತನರ, ಯುವ, ಧ್ಯೇಯ ಆಧಾರಿತ ಮತಗಟ್ಟೆಗಳು ದಕ್ಷಿಣ ಕನ್ನಡ ಜಿ.ಪಂ. ಮೂಲಕ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪುತ್ತೂರು ತಾಲೂಕು ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಆಕರ್ಷಿಸುಂತೆ ಮಾಡಲು ೯ ವಿಶೇಷ ಮಾದರಿ ಮತಗಟ್ಟೆಗಳನ್ನು ಚಿತ್ರ ಚಿತ್ತಾರಗಳೊಂದಿಗೆ ಸುಂದರಗೊಳಿಸಲಾಗುತ್ತಿದೆ.* ಮಾದರಿ ಮತಗಟ್ಟೆಗಳು ವರ್ಣಮಯಒಟ್ಟು ೫ ವಿಷಯಗಳಲ್ಲಿ ಮತಗಟ್ಟೆಗಳನ್ನು ವಿಭಾಗಿಸಲಾಗಿದ್ದು, ಆಯಾಯ ವಿಷಯಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಸಖಿ ಮತಗಟ್ಟೆಗಳಾಗಿ ಸ.ಹಿ.ಪ್ರಾ ಶಾಲೆ ಕಬಕ, ಸ.ಹಿ.ಪ್ರಾ. ಶಾಲೆ ಕೈಕಾರ, ಸ.ಹಿ.ಪ್ರಾ.ಶಾಲೆ ಹಿರೇಬಂಡಾಡಿ, ಸ.ಹಿ.ಪ್ರಾ.ಶಾಲೆ ಬಜತ್ತೂರು, ಸ.ಹಿ.ಪ್ರಾ.ಶಾಲೆ ಸಾಮೆತ್ತಡ್ಕ, ಸಾಂಪ್ರದಾಯಿಕ ಮತಗಟ್ಟೆಯಾಗಿ (ಕಂಬಳ) ಸ.ಹಿ.ಪ್ರಾ.ಶಾಲೆ ಕೋಡಿಂಬಾಡಿ, ಧ್ಯೇಯ ಆಧಾರಿತ ಮತಗಟ್ಟೆಯಾಗಿ ಸ.ಉ.ಹಿ.ಪ್ರಾ.ಶಾಲೆ ಕಾವು, ಯುವಜನ ನಿರ್ವಹಣೆ ಮತಗಟ್ಟೆಯಾಗಿ ಸರ್ವೆ ಸ.ಹಿ.ಪ್ರಾ.ಶಾಲೆ ವರ್ಣಮಯವಾಗಿ ಕಾಣಲಿದೆ. * ಕಲಾಚಿತ್ರಗಳ ಚಿತ್ತಾರಜನರಿಗೆ ಮತಕೇಂದ್ರಕ್ಕೆ ಆಗಮಿಸುವಾಗ ಕಂಬಳ ಇನ್ನಿತರ ಚಿತ್ತಾರಗಳು ಎದುರುಗೊಳ್ಳಲಿವೆ. ಮಹಿಳಾ ಸಾಧಕಿಯರ ಚಿತ್ರಗಳು, ಪರಿಸರ ರಕ್ಷಣೆಯ ಅರಿವು, ವಿಶೇಷಚೇತನರ ಸಾಧನೆಗಳ ಅವತರಣಿಕೆ ಹೀಗೆ ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಮತದಾರರು ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲದೇ ಮತದಾನದ ವಿಷಯಾಧಾರಿತ ಭಿತ್ತಿಚಿತ್ರಗಳು ನೋಡುಗರ ಕಣ್ಮನಗಳನ್ನು ಸೆಳೆಯಲಿವೆ.ವಿಧಾನಸಭಾ ಕ್ಷೇತ್ರದ ಸ್ವೀಪ್ ಕಾರ್ಯಕ್ರಗಳ ಮುಖ್ಯಸ್ಥರಾಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಅವರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರ ಮಾರ್ಗದರ್ಶನದಲ್ಲಿ ನುರಿತ ಚಿತ್ರಕಲಾ ಶಿಕ್ಷಕರ ತಂಡ ಚಿತ್ರಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿತ್ರ ಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಶಾಲೆಯ ಚಿತ್ರ ಕಲಾ ಶಿಕ್ಷಕ ಪ್ರಕಾಶ್ ವಿಟ್ಲ, ನರಿಮೊಗ್ರು ಸಾಂದೀಪನಿ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕ ಸುಚೇತ್ ಎಂ. ಅವರು ಮಾದರಿ ಮತಗಟ್ಟೆಗಳನ್ನು ವರ್ಣಮಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.--------------ಮತಗಟ್ಟೆಗಳ ಗೋಡೆಗಳು ನೈಜ ಚಿತ್ರಗಳಿಂದ ಮೊದಲ್ಗೊಂಡು, ಮಧುಬನಿ ಕಲಾ ಶೈಲಿ, ವರ್ಲಿ ಕಲಾ ಶೈಲಿ, ಕಾರ್ಟೂನ್ ಚಿತ್ರಗಳು, ಅಲಂಕಾರಿಕ ಚಿತ್ರಗಳ ಮೂಲಕ ಕಂಗೊಳಿಸುವ ಕಾರ್ಯವನ್ನು ಚಿತ್ರಕಲಾ ಶಿಕ್ಷಕರು ಮಾಡುತ್ತಿದ್ದಾರೆ. । ಹನಮ ರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ. ಪುತ್ತೂರು