ಸಾರಾಂಶ
ದಸರಾ ಕುಸ್ತಿಯು ಸೆ.22 ರಿಂದ 28 ರವರೆಗೆ ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 4 ರಿಂದ ನಾಡಕುಸ್ತಿ ಹಣಾಹಣಿ ನಡೆಯಲಿದ್ದು ಒಟ್ಟು 250 ಜೋಡಿಗಳು ಸೆಣೆಸಲಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಾಡಕುಸ್ತಿಯಲ್ಲಿ ಪಾಲ್ಗೊಳ್ಳುವ ಜೋಡಿಗಳಿಗೆ ಜೊತೆ ಕಟ್ಟುವ ಕಾರ್ಯ ಭಾನುವಾರ ನಡೆಯಿತು. ರಾಜ್ಯ, ಹೊರ ರಾಜ್ಯಗಳಿಂದಲೂ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸುವ ಆಸೆ ಹೊತ್ತು ಬಂದಿದ್ದರು. ಇವರಲ್ಲಿ ಅರ್ಹ ಕ್ರೀಡಾಪಟುಗಳನ್ನು ಗುರುತಿಸಿ ಕುಸ್ತಿಗೆ ಅವಕಾಶ ನೀಡಲಾಯಿತು.ದಸರಾ ಕುಸ್ತಿಯು ಸೆ.22 ರಿಂದ 28 ರವರೆಗೆ ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 4 ರಿಂದ ನಾಡಕುಸ್ತಿ ಹಣಾಹಣಿ ನಡೆಯಲಿದ್ದು ಒಟ್ಟು 250 ಜೋಡಿಗಳು ಸೆಣೆಸಲಿವೆ.
ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿಯಾದ ಹೆಚ್ಚುವರಿ ಎಸ್ಪಿ ಎಲ್. ನಾಗೇಶ್, ಕಾರ್ಯಾಧ್ಯಕ್ಷ ಎಚ್.ಸಿ. ನಾಗೇಂದ್ರಪ್ಪ ಅವರು, ಕುಸ್ತಿಪಟುಗಳ ಬೆನ್ನು ತಟ್ಟುವ ಮೂಲಕ ಜೊತೆ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿದರು. ಇದೇ ವೇಳೆ ನಾಡ ಕುಸ್ತಿ, ಪಾಯಿಂಟ್ ಕುಸ್ತಿ, ಪಂಜಕುಸ್ತಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.ಉಪಸಮಿತಿ ಕಾರ್ಯದರ್ಶಿ ಜಿ.ಎಸ್. ರಘು, ರಾಜ್ಯ ಪಂಜ ಕುಸ್ತಿ ಸಂಘದ ಅಧ್ಯಕ್ಷ ನವೀನ್ ಚಂದ್ರ, ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಕೆ. ವಿಶ್ವನಾಥ್, ಖಜಾಂಚಿ ದಯಾನಂದ ಕದಂಬ, ಸಂಯೋಜಕ ಎಂ. ರಾಜು, ಮೊಹಮ್ಮದ್ ನಾಸಿರ್, ಪೈಲ್ವಾನ್ ಗಳಾದ ಚಂದ್ರಶೇಖರ್, ಶ್ರೀನಿವಾಸ್ ಗೌಡ ಮೊದಲಾದವರು ಇದ್ದರು.