ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಾರತೀಯ ಸೇನೆ ಬಲಿಷ್ಠವಾಗಿದೆ. ಜಾಗತಿಕವಾಗಿ ಬರುವ ಯಾವುದೇ ಅಪಾಯಗಳನ್ನು ಎದುರಿಸಿ ದೇಶವನ್ನು ಶತ್ರುಗಳಿಂದ ಸಂರಕ್ಷಿಸುವ ತಾಕತ್ತು ಹೊಂದಿದೆ ಎಂದು ತಹಸೀಲ್ದಾರ್ ಹಾಗೂ ಭಾರತೀಯ ಸೇನೆ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಡಾ.ಎಸ್.ಯು.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ಸೇನೆ ಪಾಕಿಸ್ಥಾನದ ವಿರುದ್ಧ ನಡೆಸುತ್ತಿರುವ ಆಪರೇಷನ್ ಸಿಂದೂರ ಕುರಿತು ಪ್ರತ್ರಿಕ್ರಿಯಿಸಿದ ಅವರು, ಪಾಕಿಸ್ತಾನ್ ಕೇವಲ ಭಾರತಕ್ಕೆ ಮಾತ್ರವಲ್ಲ ಜಗತ್ತಿನ ಶಾಂತಿಗೆ ಬಹುದೊಡ್ಡ ಶಾಪವಾಗಿ ನಿಂತಿದೆ. ಭಯೋತ್ಪಾದಕರನ್ನು ಪೋಷಿಸಿ ಬೆಳೆಸುತ್ತಿರುವ ನೆರೆಯ ರಾಷ್ಟ್ರಕ್ಕೆ ಭಾರತೀಯ ಸೇನೆ ಮುಟ್ಟಿ ನೋಡಿಕೊಳ್ಳುವ ಉತ್ತರ ನೀಡುತ್ತಿದೆ ಎಂದರು.ಭಾರತೀಯ ಸೇನೆ ಸಂಪೂರ್ಣ ಸ್ವಾತ್ಯಂತ್ರ್ಯ ನೀಡಿದ ಕೇಂದ್ರ ಸರ್ಕಾರದ ನಡೆ ಇದಕ್ಕೆ ಬಹುಮುಖ್ಯ ಕಾರಣ. ಕೇಂದ್ರ ಸರ್ಕಾರ ಭಾರತೀಯ ಸೈನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಅಂತರ ರಾಷ್ಟ್ರೀಯ ನೀತಿಗಳ ಮೂಲಕ ಸರ್ವ ಜಗತ್ತು ಜಾಗತಿಕ ಭಯೋತ್ಪಾದನೆಯ ವಿರುದ್ಧ ನಿಲ್ಲುವಂತೆ ಮಾಡಿದೆ ಎಂದರು.
ಕೇಂದ್ರ ಸರ್ಕಾರದ ರಾಜ ತಾಂತ್ರಿಕ ನಡೆ ಅಭಿನಂದನೀಯ. ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ದೇಶದ ಸರ್ವ ಪಕ್ಷಗಳು ಒಗ್ಗಟು ತೋರಿಸಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ. ಆಪರೇಷನ್ ಸಿಂದೂರ ಕಾರ್ಯಾಚರಣೆಯ ಫಲವಾಗಿ ಇನ್ನು ಮುಂದೆ ಜಗತ್ತು ಭಾರತವನ್ನು ನೋಡುವ ದೃಷ್ಟಿ ಬದಲಾಗಲಿದೆ ಎಂದರು.ಜಾಗತಿಕವಾಗಿ ಇಂದು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಅಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಮ್ಮ ಸೈನಿಕ ಶಕ್ತಿಯನ್ನು ಬಲಿಷ್ಠಗೊಳಿಸುವ ಮೂಲಕ ಕೇಂದ್ರ ಸರ್ಕಾರ ಭಾರತೀಯ ಸೈನ್ಯ ಪಡೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಹೊಸ ಹೊಸ ತಂತ್ರಜ್ಞಾನದ ಫಲವಾಗಿ ದೊರೆತ ಶಸ್ತ್ರಾಶ್ರಗಳನ್ನು ಬಳಕೆ ಮಾಡಿ ಭಾರತೀಯ ಸೇನೆ ತನ್ನ ನೆಲದಲ್ಲಿಯೇ ನಿಂತು ಶತ್ರು ರಾಷ್ಟ್ರದ ಒಳಗೆ ನುಗ್ಗಿ ದಾಳಿ ಮಾಡುತ್ತಿದೆ. ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು.
ಯುದ್ಧದ ಪ್ರತಿಕ್ರಿಯೆಗಳು...ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಯುತ್ತಿರುವ ಎದುರಾಳಿ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಯುದ್ಧದಿಂದ ಆ ದೇಶದ ಭಯೋತ್ಪಾದಕರಿಗೆ ಪಾಠ ಕಲಿಸಬೇಕು. ಭಯೋತ್ಪಾದನೆ ಬೆಂಬಲಿಸುತ್ತಾ ಬಂದಿರುವ ಪಾಕಿಸ್ತಾನಕ್ಕೂ ಇದರ ಅರಿವು ಬರಬೇಕು. ಯುದ್ಧದಲ್ಲಿ ಭಾರತ ಗೆಲುವು ಸಾಧಿಸಲಿದೆ.
- ಮಧುಸೂದನ್, ಯಡಗನಹಳ್ಳಿ, ಮದ್ದೂರು ತಾಲೂಕುಭಾರತಕ್ಕೆ ಹೊರಗಿನ ಭಯೋತ್ಪಾದಕರಿಗಿಂತ ಒಳಗಿರುವ ಭಯೋತ್ಪಾದಕರಿಂದ ಅಪಾಯ ಹೆಚ್ಚಾಗಿದೆ. ಆಗಾಗ್ಗೆ ದೇಶದೊಳಗೆ ಇದ್ದು ಪಾಕಿಸ್ತಾನ ಪರ ಘೋಷಣೆ ಕೂಗುವವರಿಗೆ ತಕ್ಕಪಾಠ ಕಲಿಸಿದಾಗ ಮಾತ್ರ ಭಯೋತ್ಪಾದನೆ ನಿಯಂತ್ರಿಸಲು, ಪಾಕಿಸ್ತಾನದಲ್ಲಿರುವ ಭಯೋತ್ಪಾದಕರಿಗೆ ಪಾಠ ಕಲಿಸಲು ಸಾಧ್ಯ.-ಕೃಷ್ಣ, ಗುನ್ನಾಯಕನಹಳ್ಳಿ, ಮಂಡ್ಯ ತಾಲೂಕುಕೇಂದ್ರ ಸರ್ಕಾರ ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಪಿ ಪಾಕಿಸ್ತಾನದ ವಿರುದ್ಧ ಯುದ್ಧ ಕೈಗೊಂಡು ಪಹಲ್ಗಾಂನಲ್ಲಿ ಉಗ್ರರಿಂದ ಬಲಿಯಾದ ಅಮಾಯಕ ಭಾರತೀಯರ ಮೃತರಿಗೆ ಶಾಂತಿ ಸಿಗುವಂತೆ ಮಾಡಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದನೆ ನಿರ್ಮೂಲನೆಗೆ ಕೈಗೊಂಡಿರುವ ಎಲ್ಲಾ ಕ್ರಮಗಳಿಗೆ ನಮ್ಮ ಬೆಂಬಲವಿದೆ.
-ಆರ್.ರಶಿಪ್ರಕಾಶ್ , ರಾಮಂದೂರು, ಮಳವಳ್ಳಿ ತಾಲೂಕು