ಕಾಮನ್ ಪುಟಕ್ಕೆಸೈನಿಕರ ಕಟೌಟಿಗೆ ಈಡುಗಾಯಿ ಹೊಡೆದು ವಾಟಾಳ್

| Published : May 12 2025, 12:25 AM IST

ಕಾಮನ್ ಪುಟಕ್ಕೆಸೈನಿಕರ ಕಟೌಟಿಗೆ ಈಡುಗಾಯಿ ಹೊಡೆದು ವಾಟಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಯೋಧರ ಹೋರಾಟ ಅಗಾಧವಾದದ್ದು, ಕೇಂದ್ರ ಸರ್ಕಾರ, ವಿರೋಧ ಪಕ್ಷ ಒಂದೇ ಧ್ವನಿಯಲ್ಲಿ ಇದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಭಾರತ- ಪಾಕಿಸ್ತಾನ ಯುದ್ದ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರಿಗೆ ಗೌರವಾರ್ಥವಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದ ಹಾರ್ಡಿಂಜ್ ವೃತ್ತದಲ್ಲಿ ಸೈನಿಕರ ಕಟೌಟಿಗೆ ಈಡುಗಾಯಿ ಒಡೆದು ಸೈನ್ಯದ ಪರ ಜೈಕಾರ ಹಾಕಿದರು.

ನಂತರ ವಾಟಾಳ್ ನಾಗರಾಜ್ ಮಾತನಾಡಿ, ಪದೇ ಪದೇ ಕಾಲು ಕೆರೆದು ಬರುವ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನಮ್ಮ ಸೈನಿಕರು ಕೊಡುತ್ತಿದ್ದಾರೆ. ಕದನ ವಿರಾಮಕ್ಕೆ ಅಮೆರಿಕಾ ಮಧ್ಯಸ್ಥಿಕೆ ವಹಿಸಿ ಶಾಂತಿ ನೆಲೆಸಲು ಪ್ರಯತ್ನ ಮಾಡಿದೆ. ಆದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದೆ. ಭಾರತವು ಪಾಕಿಸ್ತಾನನಕ್ಕೆ ದಿಟ್ಟ ಪ್ರತ್ಯುತ್ತರ ಕೊಡುತ್ತಿದೆ. ನಮ್ಮ ಭಾರತೀಯ ಸೈನಿಕರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂಧಿಸುತ್ತೇನೆ ಎಂದರು.

ಯೋಧರ ಹೋರಾಟ ಅಗಾಧವಾದದ್ದು, ಕೇಂದ್ರ ಸರ್ಕಾರ, ವಿರೋಧ ಪಕ್ಷ ಒಂದೇ ಧ್ವನಿಯಲ್ಲಿ ಇದ್ದಾರೆ. ಪ್ರತಿಯೊಬ್ಬರೂ ದೇವರ ಜೊತೆಗೆ ಯೋಧರನ್ನು ನೆನೆಸಿಕೊಳ್ಳಬೇಕು. ಟ್ರಂಪ್ ಒಳ್ಳೆಯ ವಾತಾವರಣ ನಿರ್ಮಿಸಲು ಕದನ ವಿರಾಮ ಮನವಿ ಮಾಡಿದರು. ಈ ಮಾತನ್ನು ಗೌರವಿಸಿ ಭಾರತ ಯುದ್ಧ ನಿಲ್ಲಿಸಿದರು. ಪಾಕಿಸ್ತಾನದಲ್ಲಿ ಮಿಲಿಟರಿ ಜನರಲ್ ತನ್ನ ಇಚ್ಛೆಯಂತೆ ಹೋರಟಿದ್ದಾರೆ. ಪಾಕಿಸ್ತಾನದ ಜನರು ಸಹ ಯುದ್ಧ ಬೇಡ ಎಂದಿದ್ದಾರೆ. ಪಾರ್ಲಿಮೆಂಟ್‌ ನಲ್ಲಿ ಸಹ ವಿರೋಧ ಮಾಡಿದ್ದಾರೆ. ಕದನ ವಿರಾಮ ಉಲ್ಲಂಘನೆ ಮಾಡಿದರೆ ಯುದ್ಧಕ್ಕೆ ತಯಾರು ಮಾಡಬೇಕು ಎಂದು ಅವರು ಹೇಳಿದರು.

ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಬಿ.ಎಂ. ಶಿವಶಂಕರ್, ಪಾರ್ಥಸಾರಥಿ, ತೇಜೇಶ್ ಲೋಕೇಶ್ ಗೌಡ, ಶಿವರಾಂ, ರವಿ ನಾಯಕ್, ರವೀಶ್, ಕುಮಾರ್, ಸುಬ್ಬೇಗೌಡ ಮೊದಲಾದವರು ಇದ್ದರು.