ಸಾರಾಂಶ
ಪ್ರಯಾಣಿಕ ರೈಲಿನಿಂದ 964.19 ಕೋಟಿ ರು., ವಿಶೇಷ ರೈಲು ಸಂಚಾರ, ವಿಶೇಷ ಶೂಟಿಂಗ್, ಫ್ಲ್ಯಾಟ್‌ಫಾರಂ ಟಿಕೆಟ್‌ಗಳಿಂದ 65.96 ಕೋಟಿ ರು., ಸರಕು ಸಾಗಾಟದಿಂದ 481.36 ಕೋಟಿ ರು. ಹಾಗೂ ಪಾರ್ಸೆಲ್ ಸರ್ವೀಸ್, ಜಾಹಿರಾತು, ಪಾರ್ಕಿಂಗ್ ಶುಲ್ಕ, ರೈಲ್ವೆ ಸೊತ್ತುಗಳ ಲೀಸ್ ಸೇರಿದಂತೆ ವಿವಿಧ ಮೂಲಗಳಿಂದ 64.66 ಕೋಟಿ ರು. ಆದಾಯ ಲಭಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕೇರಳ ಮತ್ತು ಕರ್ನಾಟಕದ ದ.ಕ.ಜಿಲ್ಲಾ ಕೇಂದ್ರ ಮಂಗಳೂರು ವರೆಗೆ ರೇಲ್ವೆ ಜಾಲ ಹೊಂದಿರುವ ಪಾಲ್ಘಾಟ್ ವಿಭಾಗ 2023-24ನೇ ಸಾಲಿನಲ್ಲಿ ಗಣನೀಯ ಆದಾಯ ಗಳಿಸಿದೆ.ಪ್ರಯಾಣಿಕ ರೈಲಿನಿಂದ 964.19 ಕೋಟಿ ರು., ವಿಶೇಷ ರೈಲು ಸಂಚಾರ, ವಿಶೇಷ ಶೂಟಿಂಗ್, ಫ್ಲ್ಯಾಟ್‌ಫಾರಂ ಟಿಕೆಟ್‌ಗಳಿಂದ 65.96 ಕೋಟಿ ರು., ಸರಕು ಸಾಗಾಟದಿಂದ 481.36 ಕೋಟಿ ರು. ಹಾಗೂ ಪಾರ್ಸೆಲ್ ಸರ್ವೀಸ್, ಜಾಹಿರಾತು, ಪಾರ್ಕಿಂಗ್ ಶುಲ್ಕ, ರೈಲ್ವೆ ಸೊತ್ತುಗಳ ಲೀಸ್ ಸೇರಿದಂತೆ ವಿವಿಧ ಮೂಲಗಳಿಂದ 64.66 ಕೋಟಿ ರು. ಆದಾಯ ಲಭಿಸಿದೆ.
ಈ ಎಲ್ಲ ಆದಾಯ ಹೆಚ್ಚಳಕ್ಕೆ ತ್ವರಿಗತಗತಿಯಲ್ಲಿ ರೈಲ್ವೆ ಸೌಲಭ್ಯ, ಯೋಜನೆಗಳನ್ನು ಪೂರೈಸಿರುವುದು ಪ್ರಮುಖ ಕಾರಣ. ಮುಖ್ಯವಾಗಿ ಅಮೃತ್ ಭಾರತ್ ರೈಲು ನಿಲ್ದಾಣಗಳ ಅಭಿವೃದ್ಧಿ, ಉಳ್ಳಾಲದಲ್ಲಿ ಹೊಸ ಗೂಡ್ಸ್ ಯಾರ್ಡ್, ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಫ್ಲ್ಯಾಟ್‌ಫಾರಂ ರಚನೆ, ಇತರೆ ರೈಲು ನಿಲ್ದಾಣಗಳಲ್ಲಿ ಫ್ಲ್ಯಾಟ್‌ಫಾರಂ ಮತ್ತು ಪ್ರಯಾಣಿಕ ಸೌಲಭ್ಯಗಳನ್ನು ಮೇಲ್ದರ್ಜೇರಿಸಿರುವುದು, ಯೋಜನೆಗಳ ಕಾರ್ಯಗತ, ಸರಕು ಹಾಗೂ ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಸೌಲಭ್ಯ ಕಲ್ಪಿಸಿರುವುದು ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಭಾಗೀಯ ಅಧಿಕಾರಿ ಅರುಣ್ ಕುಮಾರ್ ಚತುರ್ವೇದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.