ಪಾಲಿಬೆಟ್ಟ: ಇಂದಿನಿಂದ ಇತಿಹಾಸ ಪ್ರಸಿದ್ಧ ಉರೂಸ್ ಪ್ರಾರಂಭ

| Published : Feb 09 2024, 01:47 AM IST / Updated: Feb 09 2024, 03:34 PM IST

urus

ಸಾರಾಂಶ

ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಫೆ.9ರಿಂದ 12ರ ವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. 

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಫೆ.9ರಿಂದ 12ರ ವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ.

ಫೆ.9ರಂದು ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ.

ಧಾರ್ಮಿಕ ಪಂಡಿತ ಸಯ್ಯದ್‌ ಜಾಫರ್ ಸಾಧಿಕ್ ತಂಗಳ್ ಕೊಂಬೋಳ್ ದುಃವಾ ನೇತೃತ್ವ ವಹಿಸಲಿದ್ದಾರೆ. ರಾತ್ರಿ ಮತ ಪ್ರಭಾಷಣ ಮತ್ತು ದಿಕ್ರ್ ದುಃವಾ ಮಜ್ಲೀಸ್ ನೇತೃತ್ವವನ್ನು ಸಯ್ಯದ್ ಮೊಹಸ್ಸಿನ್ ಆಲವಿಕೋಯ ತಂಗಳ್ ಕೇರಳ ವಹಿಸಲಿದ್ದಾರೆ. 

ಫೆ.10ರಂದು ರಾತ್ರಿ ಧಾರ್ಮಿಕ ಪಂಡಿತ ಶಾಕಿರ್ ದಾರಿಮಿ ಕೇರಳ ಮತ ಪ್ರಭಾಷಣ ಮಾಡಲಿದ್ದಾರೆ. ಫೆ.11ರಂದು ರಾತ್ರಿ ಲುಖುಮಾನುಲ್ ಹಕೀಮ್ ಸಖಾಫಿ ಅವರಿಂದ ಮತ ಪ್ರವಚನ ಹಾಗೂ ಫೆ.12ರಂದು ಸಂಜೆ 7 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ.

ಕನ್ನಡ ಮಠದ ಶ್ರೀ ಚನ್ನಬಸವ ದೇಸೀ ಕೇಂದ್ರ ಸ್ವಾಮಿ, ಪಾಲಿಬೆಟ್ಟ ಲೂರ್ಡ್ಸ್ ಚರ್ಚ್ ಫಾ.ಶಶಿ ಕುಮಾರ್, ಶೈಖುನ ಎಂ.ಎಂ. ಅಬ್ದುಲ್ಲ ಫೈಜಿ ಸಮಸ್ತ ಕೇಂದ್ರ ಮುಶಾವರ ಸದಸ್ಯರು, ಸಮೀರ್ ಎ.ಎಚ್. ಜಂಟಿ ಕಾರ್ಯದರ್ಶಿ ಜುಮಾ ಮಸ್ಜಿದ್ ಪಾಲಿಬೆಟ್ಟ, ಅಶ್ರಫ್ ಅಪ್‌ಸನಿ ಪ್ರಧಾನ ಕಾರ್ಯದರ್ಶಿ, ಅನ್ವಾರಲ್ ಹುದಾ ವಿರಾಜಪೇಟೆ.

ಶಾಫಿ ಸಹದಿ ಮಾಜಿ ವಕ್ಫ್‌ ಬೋರ್ಡ್ ಅಧ್ಯಕ್ಷರು, ಶಾಸಕ ಎ.ಎಸ್. ಪೊನ್ನಣ್ಣ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್‌, ಟಾಟಾ ಕಾಫಿ ಸಂಸ್ಥೆ ಉಪಾಧ್ಯಕ್ಷ ಎಂ.ಬಿ. ಗಣಪತಿ, ಪಾಲಿಬೆಟ್ಟ ಕಾಯಂಬೆಟ್ಟ ಎಸ್ಟೇಟ್‌ ಮಾಲೀಕ ಕಾರ್ತಿ ಪಿ. ಚಿದಂಬರಂ ಸೇರಿದಂತೆ ಧಾರ್ಮಿಕ ಪಂಡಿತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಫೆ.12ರಂದು ಸಂಜೆ 6.30ಗಂಟೆಯಿಂದ ಎಲ್ಲ ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯ ನಡೆಯಲಿದೆ.