ಎಳವೆಯಲ್ಲೇ ಸಂಸ್ಕಾರ ರೂಢಿಸಿ: ಫಲಿಮಾರುಶ್ರೀ

| Published : May 16 2024, 12:46 AM IST

ಸಾರಾಂಶ

ನೂರಕ್ಕೂ ಹೆಚ್ಚು ಬಾಲಕ ಬಾಲಕಿಯರು ವಸಂತ ವೇದ ಶಿಬಿರದಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಶಿವಳ್ಳಿ ಸ್ಪಂದನ ವತಿಯಿಂದ ಕಾವೂರು ವಲಯದ ಸಹಯೋಗದಲ್ಲಿ ಅಂಬಿಕಾ ನಗರ ಕಾವೂರಿನ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆಯೋಜಿಸಲಾದ ವಸಂತ ವೇದ ಶಿಬಿರವನ್ನು ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ಉದ್ಘಾಟಿಸಿದರು.

ಎಲ್ಲರೂ ಎಳವೆಯಿಂದಲೇ ಸಂಸ್ಕಾರವನ್ನು ರೂಢಿಸಿಕೊಂಡು ಬಲವರ್ಧಿತವಾಗಬೇಕು ಎಂದು ಸ್ವಾಮೀಜಿ ಹೇಳಿದರು. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್, ವಿದ್ವಾನ್ ಶ್ರೀಕರ ಭಟ್, ನವೀನ್ ಚಂದ್ರ ಭಟ್ ಕೊಂಚಾಡಿ, ಸುದರ್ಶನ ಬನ್ನಿಂತಾಯ, ವಿದ್ವಾನ್ ಶೇಷಗಿರಿ ಆಚಾರ್ಯ, ಶಿವಳ್ಳಿ ಸ್ಪಂದನದ ಅಧ್ಯಕ್ಷ ಕೃಷ್ಣ ಭಟ್, ಕಾರ್ಯದರ್ಶಿ ಉದಯಶಂಕರ, ಉಪಾಧ್ಯಕ್ಷ ವಾಸುದೇವ ಭಟ್, ಸಂಘಟನಾ ಕಾರ್ಯದರ್ಶಿಗಳಾದ ರವೀಶ್ ನಾರ್ಶ, ಪ್ರದೀಪ್ ಕುಮಾರ್, ಜತೆ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಇದ್ದರು‌. ಕಾವೂರು ವಲಯದ ಅಧ್ಯಕ್ಷ ಅರವಿಂದ ಹೆಬ್ಬಾರ್ ಸ್ವಾಗತಿಸಿದರು. ಚಂದ್ರಿಕಾ ಸುರೇಶ್ ವಂದಿಸಿದರು. ಕಾವೂರು ವಲಯದ ಕೋಶಾಧಿಕಾರಿ ದಾಮೋದರ ಆಚಾರ್ಯ ಮತ್ತು ರಂಗನಾಥ ಅಂಗಿತ್ತಾಯ ನಿರೂಪಿಸಿದರು.ನೂರಕ್ಕೂ ಹೆಚ್ಚು ಬಾಲಕ ಬಾಲಕಿಯರು ಈ ಶಿಬಿರದಲ್ಲಿ ಭಾಗವಹಿಸಿದ್ದರು.