ಸಾರಾಂಶ
ಹಜ್‌ಯಾತ್ರೆ ಹೊರಟಿರುವ ಖತೀಬ್ ಉಸ್ತಾದ್ ರಫೀಕ್ ಬಾಹಸನಿ ಹಾಗೂ ಅಜ್ಮೀರ್ ಯಾತ್ರೆ ಹೊರಟಿರುವ ಸದರ್ ಮುಅಲ್ಲಿಂ ಮಹ್ಮೂದ್ ಸಖಾಫಿ ಅವರನ್ನು ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ಸುಳ್ಯ
ಬೆಳ್ಳಾರೆ ಸಮೀಪದ ಪಳ್ಳಿಮಜಲು ಎಸ್‌ಬಿಎಸ್ ವತಿಯಿಂದ ಹಜ್ ಹಾಗೂ ಅಜ್ಮೀರ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಎಸ್‌ಬಿಎಸ್ ಅಧ್ಯಕ್ಷ ಹಫೀಝ್ ಸ್ವಾಗತಿಸಿದರು. ಹಾಲಿ ಖತೀಬರಾದ ಸಿದ್ದೀಕ್ ಸಖಾಫಿ ಅಲ್ ಅಶ್-ಅರಿ ಕಾರ್ಯಕ್ರಮ ಉದ್ಘಾಟಿಸಿದರು. ಹಜ್‌ಯಾತ್ರೆ ಹೊರಟಿರುವ ಖತೀಬ್ ಉಸ್ತಾದ್ ರಫೀಕ್ ಬಾಹಸನಿ ಹಾಗೂ ಅಜ್ಮೀರ್ ಯಾತ್ರೆ ಹೊರಟಿರುವ ಸದರ್ ಮುಅಲ್ಲಿಂ ಮಹ್ಮೂದ್ ಸಖಾಫಿ ಅವರನ್ನು ಬೀಳ್ಕೊಡಲಾಯಿತು. ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ, ಮದರಸ ಸಮಿತಿ ಅಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಹನೀಫ್ ಸಲಾಲ, ಕೋಶಾಧಿಕಾರಿ ಸೂಫಿ ಬೀಡು, ಸದಸ್ಯರು ಯಾತ್ರಾರ್ಥಿಗಳನ್ನು ಸನ್ಮಾನಿಸಿದರು.
ಇದೇ ವೇಳೆ ತಮ್ಮ ಊರಿನಿಂದ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ಮದರಸ ಹಾಗೂ ಮಸೀದಿ ಆಡಳಿತ ಸಮಿತಿಗೆ ಅರ್ಜಿ ಸಲ್ಲಿಸಲಾಯಿತು. ಎಸ್‌ಬಿಎಸ್ ಕಾರ್ಯದರ್ಶಿ ರಾಶಿದಾ ವಂದಿಸಿದರು.