ಸಾರಾಂಶ
ಚಿಕ್ಕಮಗಳೂರು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಪ್ರತಿ ನಾಗರಿಕರಿಗೂ ತಲುಪಿಸಿ ಕುಟುಂಬವನ್ನು ಆರ್ಥಿಕ ಸಬಲರಾಗಿಸುವ ಜೊತೆಗೆ ಶ್ರೀ ರಕ್ಷೆಯಾಗಿ ಕಾಪಾಡುತ್ತಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ. ಮಲ್ಲೇಶ್ ಹೇಳಿದರು.
ಗ್ಯಾರಂಟಿ ಪ್ರಾಧಿಕಾರದ ಪ್ರಥಮ ಚಿಕ್ಕಮಗಳೂರು ತಾಲೂಕು ಮಟ್ಟದ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಪ್ರತಿ ನಾಗರಿಕರಿಗೂ ತಲುಪಿಸಿ ಕುಟುಂಬವನ್ನು ಆರ್ಥಿಕ ಸಬಲರಾಗಿಸುವ ಜೊತೆಗೆ ಶ್ರೀ ರಕ್ಷೆಯಾಗಿ ಕಾಪಾಡುತ್ತಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ. ಮಲ್ಲೇಶ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಪ್ರಾಧಿಕಾರದ ಪ್ರಥಮ ತಾಲೂಕು ಮಟ್ಟದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ಬಡವರು, ಮಧ್ಯಮ, ಹಿಂದುಳಿದ ವರ್ಗ, ದಲಿತರು ಸೇರಿದಂತೆ ಪ್ರತಿ ಯೊಬ್ಬರಿಗೂ ಸದೃಢ ಜೀವನದ ದೃಷ್ಟಿಯಿಂದ ರಾಜ್ಯ ಸರ್ಕಾರ ಅಭೂತಪೂರ್ವ ಯೋಜನೆಗಳನ್ನು ಜಾರಿಗೆ ತಂದಿರುವುದಲ್ಲದೇ ಕೆಲವೇ ತಿಂಗಳಲ್ಲಿ ಸಂಪೂರ್ಣ ಜಾರಿಗೊಳಿಸಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ತಿಳಿಸಿದರು.ಪ್ರಸ್ತುತ ತಾಲೂಕಿನಲ್ಲಿ 73458 ಬಿಪಿಎಲ್ ಕಾರ್ಡ್‌ದಾರರಲ್ಲಿ 69706 ಗೃಹಲಕ್ಷ್ಮೀ ಯೋಜನೆ ನೋಂದಾಯಿಸಿದ್ದು ಈ ಪೈಕಿ 68740 ಕುಟುಂಬದ ಯಜಮಾನಿಗೆ ಗೃಹಲಕ್ಷ್ಮೀ ಸೌಲಭ್ಯ ಒದಗಿಸುವ ಮೂಲಕ ಮಾಹೆಯಾನ ಸರ್ಕಾರ 13.74 ಕೋಟಿ ರು. ಖಾತೆಗೆ ಜಮಾ ಮಾಡಿದೆ. ಕೆಲವರಿಗೆ ವಿವಿಧ ಕಾರಣಗಳಿಂದ ಸಮಸ್ಯೆ ಇರುವುದರಿಂದ ಸದ್ಯದಲ್ಲೇ ಬಗೆಹರಿಸ ಲಾಗುವುದು ಎಂದರು.ಶಕ್ತಿ ಯೋಜನೆಯಲ್ಲಿ ಗ್ರಾಮಾಂತರ ಹೊರತುಪಡಿಸಿ 159 ಬಸ್‌ಗಳ ವ್ಯವಸ್ಥೆಯಿದೆ. ಈ ಯೋಜನೆಯಿಂದ ದಿನಕ್ಕೆ 31542 ಮಹಿಳೆಯರು ಪ್ರಯಾಣಿಸಿದ್ದು ಈವರೆಗೆ ಒಟ್ಟು 3 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ ಎಂದರು.ಮನೆಗೆ ಉಚಿತ ವಿದ್ಯುತ್ ಸಂಬಂಧ ಗೃಹಜ್ಯೋತಿಯಡಿ 32756 ಮನೆಗಳು ನೋಂದಣಿಯಾಗಿವೆ. ಈ ಪೈಕಿ 25334 ಮನೆಗಳಿಗೆ ಶೂನ್ಯ ವಿದ್ಯುತ್ ಶುಲ್ಕವಾಗಿದೆ. ಒಟ್ಟು 12 ತಿಂಗಳಿನಿಂದ 6.3 ಕೋಟಿ ರು ಅನುದಾನವನ್ನು ಸರ್ಕಾರ ಇಲಾಖೆಗೆ ಬಿಡುಗಡೆಗೊಳಿಸಿದೆ. ಯುವ ನಿಧಿಯಡಿ 1142 ಯುವಕರಿಗೆ ನೇರವಾಗಿ ಹಣ ಖಾತೆಗೆ ವರ್ಗಾಯಿಸಲಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಸದಸ್ಯರಾದ ಕೆ.ಪಿ.ನಾಗೇಶ್, ಅನ್ಸರ್ ಆಲಿ, ಪುನೀತ್, ಎಲ್.ಎಂ.ನಾಗರಾಜ್, ನರೇಂದ್ರ, ಗೌಸ್‌ಮೊಹಿಯುದ್ದಿನ್, ಎಚ್.ನವರಾಜ್, ರೋಹಿತ್, ವಿಂದ್ಯಾ, ಜಯಂತಿ, ಧರ್ಮಯ್ಯ, ಡಿ.ಆರ್.ತಿಮ್ಮೇಗೌಡ, ಕೃಷ್ಣ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತಾರಾನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 6 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಪ್ರಾಧಿಕಾರದ ಪ್ರಥಮ ತಾಲೂಕು ಮಟ್ಟದ ಸಭೆ ಅಧ್ಯಕ್ಷ ಮಲ್ಲೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಶಿವಾನಂದಸ್ವಾಮಿ, ತಾರಾನಾಥ್ ಇದ್ದರು.