ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಕೃಷ್ಣಾ ನದಿ ತೀರದಲ್ಲಿರುವ ಮಹಿಷವಾಡಗಿ ಗ್ರಾಮದಲ್ಲಿ ಏ.28 ರಿಂದ ಮೇ.4ರವರೆಗೆ ಪಂಚ ಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮ ವಿಶೇಷ, ವಿನೂತನ ಕಾರ್ಯಕ್ರಮಗಳ ಮೂಲಕ ಜರಗುವುದು ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯರತ್ನ 108 ಕುಲರತ್ನ ಭೂಷಣ ಮುನಿ ಮಹಾರಾಜರು ನುಡಿದರು.ಇಲ್ಲಿನ ಪಂಚ್ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ವೇದಿಕೆ ಮತ್ತು ಮಂಟಪದ ಸಿದ್ಧತೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಈ ಬಾರಿ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಿದ್ದು, ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಭಕ್ತಿ ಭಾವದಿಂದ ಎಲ್ಲರೂ ಪಾಲ್ಗೊಂಡು ಪುನೀತರಾಗಬೇಕು. ವಿಶ್ವಶಾಂತಿ, ಆತ್ಮ ಶಾಂತಿ, ವಿಶ್ವ ಕಲ್ಯಾಣ ಮತ್ತು ಆತ್ಮಕಲ್ಯಾಣದ ಐತಿಹಾಸಿಕ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮ 7 ದಿನಗಳ ಕಾಲ ಅತ್ಯಂತ ಸಂಭ್ರಮದಿಂದ ಜರುಗಲಿದೆ ಎಂದು ತಿಳಿಸಿದರು.ಏ.28ರಂದು ಪಂಚ ಕಲ್ಯಾಣ ಮಹೋತ್ಸವ ಜರಗುವ ವೇದಿಕೆ ಮತ್ತು ಮಂಟಪದಲ್ಲಿ ಸುಪ್ರಭಾತ ಸ್ತೋತ್ರ, ಸಿದ್ಧಸಾಗರ ಸ್ಮಾರಕದ ಆಭರಣದಲ್ಲಿ ಮಂಟಪ ವೇದಿಶುದ್ಧಿ, ರಾತ್ರಿ ಸಂಸ್ಕೃತಿಕ ಮತ್ತು ಆರತಿ ಕಾರ್ಯಕ್ರಮ ಜರುಗಲಿದೆ. ಏ.29 ರಂದು ಗರ್ಭಕಲ್ಯಾಣ ಪೂರ್ವಾರ್ಧ ಕಾರ್ಯಕ್ರಮ ಜರುಗಲಿದೆ. ಏ.30 ರಂದು ಗರ್ಭಕಲ್ಯಾಣ ಉತ್ತರಾರ್ಧ ಕಾರ್ಯಕ್ರಮ ಜರುಗಲಿದೆ. ಮೇ.1 ರಂದು ಜನ್ಮ ಕಲ್ಯಾಣ ಕಾರ್ಯಕ್ರಮ ಜರುಗಲಿದೆ. ಏ.2 ರಂದು ರಾಜ್ಯಾಭಿಷೇಕ ಮತ್ತು ದೀಕ್ಷಾ ಕಲ್ಯಾಣ ಕಾರ್ಯಕ್ರಮ ಜರುಗಲಿದೆ. ಮೇ.3 ರಂದು ಕೇವಲ ಜ್ಞಾನ ಕಲ್ಯಾಣ ಕಾರ್ಯಕ್ರಮ ಜರಗಲಿದೆ. ಮೇ.4 ರಂದು ನಿರ್ವಹಣಾ ಕಲ್ಯಾಣ ಕಾರ್ಯಕ್ರಮ ಜರುಗಲಿದೆ ಎಂದರು.ಶ್ರೀ 108 ಉತ್ತಮಸಾಗರ ಮುನಿ ಮಹಾರಾಜರು ಮಾತನಾಡಿ, ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ₹40 ಲಕ್ಷ ವೆಚ್ಚದ ಬೃಹತ್ ಪೆಂಡಾಲ್ ಮತ್ತು ವೇದಿಕೆ ಸಿದ್ಧತೆ ಮಾಡಲಾಗಿದೆ. ಪ್ರತಿದಿನ ಈ ಕಾರ್ಯಕ್ರಮದಲ್ಲಿ 15 ರಿಂದ 20 ಸಾವಿರ ಶ್ರಾವಕ ಸ್ರಾವಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರಾದ ಅರುಣ ಯಲಗುದ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಭೀಮಪ್ಪ ಮುಗ್ಗನವರ, ರಾಯಪ್ಪ ಅಜ್ಜಪ್ಪಗೋಳ, ಬಾಬಾಸಾಹೇಬ ಪಾಟೀಲ, ವಿವೇಕಾನಂದ ಯಲಗುದ್ರಿ, ಬಸಗೊಂಡ ಮುಗ್ಗನವರ, ದೀಪಕ ಪಾಟೀಲ, ಅಶೋಕ ಮುಗ್ಗನವರ, ಭೂಪಾಲ ಜಿಂಜರವಾಡ, ಅಮರ ದುರ್ಗಣ್ಣವರ, ಅಭಯ ಮುಗ್ಗನವರ, ಮಲ್ಲು ಪಾಸಾಣಿ, ಕುಮಾರ ನಂದಗಾಂವ, ಮಹಾವೀರ ಶಿರಹಟ್ಟಿ, ಲಕ್ಷ್ಮಣ ಚಿಪ್ಪಾಡಿ, ಅಶೋಕ ಶಿರಹಟ್ಟಿ, ಕುಮಾರ ಪಾಸಾಣಿ, ಬಸಗೊಂಡ ಮುಗ್ಗನವರ, ಜಿನ್ನು ನಂದಗಾಂವ, ಬಾಹುಬಲಿ ಅಜ್ಜಪ್ಪಗೋಳ, ಮಲ್ಲಪ್ಪ ಶಿರಹಟ್ಟಿ, ಬಸಗೊಂಡ ಜಿಂಜರವಾಡ, ಅಜೀತ ಸಸಾಲಟ್ಟಿ, ಸುರೇಂದ್ರ ಸಿದ್ದವ್ವಗೋಳ, ಭೀಮಪ್ಪ ಹಿಪ್ಪರಗಿ, ಅಶೋಕ ಹಳಿಂಗಳಿ, ನಿಂಗಪ್ಪ ಹಿಪ್ಪರಗಿ, ಬಂಡು ಕೊಕಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹಿಷವಾಡಗಿ ಗ್ರಾಮದ 7 ಜನ ಜೈನ ಋಷಿ ಮುನಿಗಳನ್ನು ಈ ದೇಶಕ್ಕೆ ನಾಡಿಗೆ ಕೊಡುಗೆಯಾಗಿ ನೀಡಿದೆ. 7 ಜನ ಋಷಿಮುನಿಗಳು ಒಂದೇ ಗ್ರಾಮದಲ್ಲಿ ಜನ್ಮ ತಾಳಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿಯಾಗಿದೆ. ಈ ಐತಿಹಾಸಿಕ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಲಕ್ಷ್ಮಣ ಸವದಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮಾಜಿ ಸಂಸದ ಅಣ್ಣಸಾಹೇಬ ಜೊಲ್ಲೆ ವಿಶೇಷ ಅಮಂತ್ರಿತರಾಗಿ ಆಗಮಿಸಲಿದ್ದಾರೆ. ಹೀಗೆ 7 ದಿನಗಳವರೆಗೆ ಪ್ರತಿದಿನ ಸಂಜೆ ಸವಾಲ, ಗುರುಭಕ್ತಿ, ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.-ಆಚಾರ್ಯರತ್ನ 108 ಕುಲರತ್ನ ಭೂಷಣ ಮುನಿ ಮಹಾರಾಜರು,
ಹಳಿಂಗಳಿ ಭದ್ರಗಿರಿ ಬೆಟ್ಟ.