ಸರ್ಕಾರದ ವಿರುದ್ಧ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

| Published : Dec 14 2024, 12:46 AM IST

ಸಾರಾಂಶ

ಸಮುದಾಯವನ್ನು ಸಿದ್ದರಾಮಯ್ಯ ತುಳಿಯುವ ಹುನ್ನಾರ ನಡೆಸುತ್ತಿದ್ದಾರೆ.

ಕೂಡ್ಲಿಗಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ನಡೆಸುವ ಮೂಲಕ ಗೂಂಡಾವರ್ತನೆ ತೋರಿರುವ ರಾಜ್ಯ ಸರ್ಕಾರ ತೊಲಗಬೇಕು. ಸಮುದಾಯದವರು, ರೈತರ ವಿರುದ್ಧ ಹಾಕಿದ ಕೇಸ್ ವಾಪಸ್ ಪಡೆಯಲು ಆಗ್ರಹಿಸಿ ಪಟ್ಟಣದಲ್ಲಿ ಪಂಚಮಸಾಲಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕದಿಂದ ಹೊರಟ ಪ್ರತಿಭಟನಾಕಾರರು ಮುಖ್ಯರಸ್ತೆಯ ಮೂಲಕ ಡಾ.ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಅನುಮತಿ ನೀಡದೇ ದಮನಕಾರಿ ನೀತಿ ಅನುಸರಿಸಿದ ಸಿಎಂ ಸಿದ್ದರಾಮಯ್ಯ ಪ್ರತಿಭಟನಾ ಸ್ಥಳಕ್ಕೆ ಸೌಜನ್ಯಕೂ ಹೋಗಿಲ್ಲ. ಸಮುದಾಯವನ್ನು ಸಿದ್ದರಾಮಯ್ಯ ತುಳಿಯುವ ಹುನ್ನಾರ ನಡೆಸುತ್ತಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿ ಕಾಂಗ್ರೆಸ್ ಸರ್ಕಾರವು ಕೂಡಲೇ ಸಮುದಾಯದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಪಂಚಮಸಾಲಿ ಸಮುದಾಯದ ಮುಖಂಡರಾದ ಕೋಗಳಿ ಮಂಜುನಾಥ, ಮೊರಬ ಶಿವಣ್ಣ, ಬಣಕಾರ ವೀರಭದ್ರಪ್ಪ, ಅಮಲಾಪುರ ಮಂಜುನಾಥ, ದಿಬ್ಬದಹಳ್ಳಿ ಸಿದ್ದೇಶ್ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ವಿ.ಕೆ. ನೇತ್ರಾವತಿಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಹುರುಳಿಹಾಳ್ ರೇವಣ್ಣ, ಟಿ.ಜಿ. ನಾಗರಾಜಗೌಡ, ಸಾಸಲವಾಡ ಬಸವರಾಜಪ್ಪ, ವಿಭೂತಿ ವೀರಣ್ಣ, ಗುಳಿಗಿ ವೀರೇಶ್, ರಜನಿಕಾಂತ್, ಖಾನಾವಳಿ ಕೊಟ್ರೇಶ್, , ಹುಲಿಕೆರೆ ಎನ್.ಜಿ.ರಮೇಶ್‌ಗೌಡ, ಕಕ್ಕುಪ್ಪಿ ಪ್ರಶಾಂತ, ಹುರುಳಿಹಾಳು ರೇಖಾ ಮಲ್ಲಿಕಾರ್ಜುನ, ಎನ್.ಕರಿಬಸಮ್ಮ, ಗಿರಿಜಮ್ಮ,ಲಕ್ಷ್ಮೀದೇವಿ, ಬಣವಿಕಲ್ಲು ಯರಿಸ್ವಾಮಿ, ಕೆ.ಸುನಿಲ್‌ಗೌಡ, ವಕೀಲ ಗಿರೀಶ್, ಕುಪ್ಪಿನಕೆರೆ ಚಿನ್ನಾಪ್ರಪ್ಪ, ಕಾನಹೊಸಹಳ್ಳಿ ಮಂಜುನಾಥ ಗೌಡ, ಸಿದ್ದನಗೌಡ, ಕೆಂಚಮಲ್ಲನಹಳ್ಳಿ ಬಸವರಾಜ್, ಪೊಲೀಸ್ ಅಜ್ಜಪ್ಪ, ಗೌಡ್ರು ಸೋಮು ಇದ್ದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಿಗೆ ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.