ಸಾರಾಂಶ
ಕುಷ್ಟಗಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟಿಸಿರುವದನ್ನು ಖಂಡಿಸಿ ಮಾಜಿ ಸಿಎಂ ಬಿಎಸ್‌ವೈ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾವಚಿತ್ರಗಳನ್ನು ಪ್ರದರ್ಶನ ಮಾಡುತ್ತಾ ಪಟ್ಟಣದಲ್ಲಿ ವೀರಶೈವ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸ್ ನಿಲ್ದಾಣ, ಮಾರುತಿ ವೃತ್ತದ ಮಾರ್ಗವಾಗಿ ಬೃಹತ್ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ನಂತರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಪಂಚಮಸಾಲಿ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಬಸನಗೌಡ ಪಾಟೀಲರು ನಮ್ಮ ಸಮಾಜ ಪರ ಮತ್ತು ಹಿಂದೂ ಹೋರಾಟಗಾರನಾಗಿರುವುದಕ್ಕೆ ಹೆಮ್ಮೆ ಇದೆ ಮತ್ತು ಅವರ ನಿಷ್ಠರತೆ ಮತ್ತು ನೇರವಾಗಿ ಮಾತನಾಡಿ ಸತ್ಯಕ್ಕೆ ಹತ್ತಿರವಾದವರು ಅಂಥವರನ್ನು ಪಕ್ಷ ಉಚ್ಚಾಟನೆ ಮಾಡಿರುವುದು ದೊಡ್ಡ ಆಘಾತವಾಗಿದೆ, ಇಂತಹ ಘಟನೆ ಸಮಾಜ ಎಂದಿಗೂ ಸಹಿಸುವುದಿಲ್ಲ. ನಮ್ಮ ಸಮಾಜ ಯಾವಾಗಲೂ ಯತ್ನಾಳ ಜತೆಗೆ ಬೆಂಬಲವಾಗಿ ಇರುತ್ತದೆ ಎಂದರು.
ಸಮಾಜದ ಮುಖಂಡ ಮಹಾಂತೇಶ ಕುಷ್ಟಗಿ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಎಲ್ಲ ಸಮಾಜದ ಪರ ಮಾತನಾಡುವ ಒಬ್ಬ ಧೀಮಂತ ನಾಯಕನಿಗೆ ಈ ರೀತಿ ನಡೆದುಕೊಳ್ಳಬಾರದಿತ್ತು. ಇದರಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಲಿದೆ ಎಂದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಿಂಗಪ್ಪ ಮಂಗಳೂರು, ಶರಣಪ್ಪ ಜಿಗೇರಿ, ವೀರೇಶ ತುರಕಾಣಿ, ಶಂಕರಗೌಡ್ರು, ಬಸವರಾಜ ಹೊರಪ್ಯಾಟಿ, ಶೇಖರ ಹೊರಪ್ಯಾಟಿ, ಶರಣು ಹವಾಲ್ದಾರ, ರುದ್ರಗೌಡ, ಶಿವಪ್ಪ ಗೆಜ್ಜಲಗಟ್ಟಿ, ಸಿದ್ದರಾಮಪ್ಪ ಕೌದಿ, ಚನ್ನಬಸಪ್ಪ ನಾಯಕವಾಡಿ ಹಾಗೂ ವಕೀಲ ಸಂಘದಿಂದ ವೀರೇಶ ನಾಲತ್ವಾಡ, ಸಂಗನಗೌಡ ಪಾಟೀಲ್, ಪ್ರಭು ಸೂಡಿ, ಯುವ ಘಟಕದಿಂದ ನಿಂಗಪ್ಪ ಜಿಗೇರಿ, ಸಂಗಮೇಶ ಕಂದಗಲ್, ಸುರೇಶ ಕೌದಿ, ಶಿವು ಸೂಡಿ, ಸತೀಶ ಬ್ಯಾಳಿ, ಶಿವು ನಂದಿಹಾಳ, ಸೋಮು ಪುರದ, ರವಿಕುಮಾರ್, ಮಲ್ಲು, ಶಶಿ, ಮತ್ತಿತರು ಹಾಗೂ ಹನುಮಸಾಗರ, ಟೆಂಗುಂಟಿ, ಹುಲಗೇರ, ತಳುಗೇರಿ, ಕಂದಕೂರ, ಕೆ.ಗೋನಾಳ, ಬೀಜಕಲ್ ಮತ್ತಿತರ ಹಳ್ಳಿಯಿಂದ ಜನರು ಆಗಮಿಸಿದ್ದರು.