ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ರಾಜ್ಯ ಮಟ್ಟದ ಸಮಾಲೋಚನಾ ಸಭೆ ಕೊಡಗು ಜಿಲ್ಲಾ ಬಾಲ ಭವನದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.ಇತ್ತೀಚೆಗೆ ಗ್ರಾಮ ಪಂಚಾಯತಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಶ್ರೇಣಿ ನಿಗದಿಪಡಿಸ ಬೇಕು, ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡಬೇಕು, ನೌಕರರಿಗೆ ಮತ್ತು ನೌಕರರ ಅವಲಂಬಿತರಿಗೆ ಆರೋಗ್ಯ ಭದ್ರತೆ ಒದಗಿಸ ಬೇಕು, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು ಎಂದು ಸಭೆಯಲ್ಲಿ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟ, ಅ.4ರಂದು ಕರೆ ನೀಡಿರುವ ಪಂಚಾಯತ್ ರಾಜ್ ಕುಟುಂಬದ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವಂತೆ ಸಭೆಯಲ್ಲಿ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.ಸಂಘದಿಂದ ಈಗಾಗಲೇ ನ.4ರಿಂದ ರಾಜ್ಯ ಮಟ್ಟದ ಗ್ರಾಮ ಪಂಚಾಯತಿ ನೌಕರರ ಹೋರಾಟದ ಬಗ್ಗೆ ಕರೆ ನೀಡಲಾಗಿದ್ದು, ತಮ್ಮ ನ್ಯಾಯಯುತ ಹಕ್ಕಗಳನ್ನು ಪಡೆಯುವ ಬಗ್ಗೆ ರಾಜ್ಯದ ಎಲ್ಲಾ ಹಂತದ ನೌಕರರು ಒಟ್ಟಾಗಿ ಹೋರಾಟ ನಡೆಸಿಕೊಡುವ ಬಗ್ಗೆ ಚರ್ಚಿಸಲಾಯಿತು.
ಜಿಲ್ಲೆಯ ನೌಕರರ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘಟನೆ ರಚಿಸಲಾಯಿತು. ಶ್ರೇಯೋಭಿವೃದ್ಧಿ ಸಂಘದ ಧ್ಯೇಯೋದ್ದೇಶವನ್ನು ಒಪ್ಪಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಯಿತು.ಜಿಲ್ಲಾಧ್ಯಕ್ಷರಾಗಿ ಜಯಕುಮಾರ್ ಮಡಿಕೇರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ , ಉಪಾಧ್ಯಕ್ಷರಾಗಿ ರಶೀದ್ ಬೆಲೋರ್ ಸೋಮವಾರಪೇಟೆ, ರಂಜಿತ್ ಕುಶಾಲನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೇಯಸ್ , ಹಾಗೂ ಶಂಕರ್ ಸೋಮವಾರಪೇಟೆ, ಸಹ ಕಾರ್ಯದರ್ಶಿಯಾಗಿ ನಳಿನಿ ಮಡಿಕೇರಿ, ಹಾಗೂ ಶಶಿಕಲಾ ಮರಗೋಡು, ಸದಸ್ಯರುಗಳಾಗಿ ದಿನೇಶ್ ಹೆಚ್.ಡಿ. ಮೂರ್ನಾಡು ಇವರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು.
ಮಡಿಕೇರಿ ತಾಲೂಕು ಸಂಘ ರಚನೆ ಮಾಡಿ ತಾಲೂಕು ಅಧ್ಯಕ್ಷರಾಗಿ ರೇಷ್ಮಾ, ಕಾರ್ಯದರ್ಶಿಯಾಗಿ ಜೀವನ್, ಉಪಾಧ್ಯಕ್ಷರಾಗಿ ಗಗನ್ ಭಾಗಮಂಡಲ, ಹಾಗೂ ಉಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ವನಿತಾ ಮಕ್ಕಂದೂರು, ಸಹ ಕಾರ್ಯದರ್ಶಿಯಾಗಿ ತಂಗಮ್ಮ ನಾಪೋಕ್ಲು, ಸದಸ್ಯರುಗಳಾಗಿ ಶೈಲ, ಸಂಪತ್ ಹೈದರ್, ಪ್ರಶಾಂತ್, ಹರೀಶ್ ಇವರನ್ನು ಆಯ್ಕೆ ಮಾಡಲಾಯಿತು.ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್.ಕುಲಾಲ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಹೇಮಚಂದ್ರ ನಂದಳಿಕೆ, ಸಂಚಾಲಕ ಸತೀಶ್ ನಾರಾವಿ ಬೆಳ್ತಂಗಡಿ, ನಾರಾಯಣ ನಾವೂರ್, ವೀರಪ್ಪ ಹಡಪದ ಧರ್ಮಸ್ಥಳ, ಪ್ರಸನ್ನ ಕುಮಾರ್ ಪಟ್ರಮೆ ರುಕೇಶ್ ಕಲ್ಮoಜ, ಹಾಗೂ ಕೊಡಗು ಜಿಲ್ಲೆಯ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಪಂಪು ಆಪರೇಟರ್, ಸ್ವಚ್ಚತೆಗಾರರು, ಅಟೆಂಡರ್ ಇದ್ದರು.