ಸಾರಾಂಶ
ವೀರ ಸಾಗರ ಮುನಿ ಮಾಹಿತಿ । ಮುನಿಸುವ್ರತ ಮೂರ್ತಿಯ ಪ್ರತಿಷ್ಠಾಪನೆ ನಿಮಿತ್ತ ಕಾರ್ಯಕ್ರಮ । 2-4 ಸಾವಿರ ಭಕ್ತರ ಆಗಮನ ಸಾಧ್ಯತೆ
ಕನ್ನಡಪ್ರಭ ವಾರ್ತೆ ಹಳೆಬೀಡುಪ್ರಸಕ್ತ ವರ್ಷದ ನ.೨೯ ರಿಂದ ಡಿ.೪ರ ವರೆಗೆ ೩೧ ಅಡಿ ಎತ್ತರದ ಭಗವಾನ್ ಶ್ರೀ ೧೦೦೮ ಮುನಿಸುವ್ರತ ತೀರ್ಥಂಕರ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಬೃಹತ್ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಜರಗಲಿದೆ ಎಂದು ವೀರ ಸಾಗರ ಮುನಿ ಮಹಾರಾಜರು ಹೇಳಿದರು.
ಹಳೆಬೀಡು ಸಮೀಪ ಶಿವಪುರ ಕಾವಲಿನ ಜೈನ ಗುತ್ತಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.ಈ ಹಿಂದೆ ಸುಮಾರು ೩೧ ಅಡಿ ಎತ್ತರದ ಶ್ರೀ ೧೦೦೮ ಶೀಥಲನಾಥ ತೀರ್ಥಂಕರರ ಜಿನ ಮೂರ್ತಿಯ ಪ್ರತಿಷ್ಠಾಪನೆಯನ್ನು ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಅದ್ಧೂರಿಯಾಗಿ ನೆರವೇರಿಸಲಾಗಿತ್ತು. ಇದು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ಶೀಥಲನಾಥ ತೀರ್ಥಂಕರ ಮೂರ್ತಿಯಾಗಿದ್ದು ನೂರಾರು ಭಕ್ತರು ಹರ್ಷ ಘೋಷದೊಂದಿಗೆ ಸಂಭ್ರಮಪಟ್ಟಿದ್ದರು. ಆ ಎರಡು ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಬೃಹತ್ ಪಂಚಕಲ್ಯಾಣ ಪ್ರತಿಷ್ಠ ಮಹೋತ್ಸವವನ್ನು ವೈಭವದಿಂದ ನಡೆಯಲಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಪುರಾತನ ಕಾಲದಿಂದಲ ಜೈನಧಾರ್ಮಿಕ ಮತ್ತು ಉಪಾಸನಾ ಕೇಂದ್ರ ಎನಿಸಿದೆ. ಕರ್ನಾಟಕದ ಅನೇಕ ರಾಜರ ಮತ್ತು ಪಾಳೆಗಾರ ಆಡಳಿತಕ್ಕೆ ಒಳಪಟ್ಟ ಈ ಕ್ಷೇತ್ರವು ಹಲವಾರು ಏಳು-ಬೀಳುಗಳನ್ನು ಕಂಡಿದೆ. ಇವುಗಳಲ್ಲಿ ಇಲ್ಲಿರುವ ಜೈನ ಬಸದಿಗಳು ಹಾಗೂ ದೊರತ ಜಿನ ವಿಗ್ರಹಗಳೇ ಈ ಕ್ಷೇತ್ರದ ಆಧಾರವಾಗಿವೆ ಎಂದು ತಿಳಿಸಿದರು.ಪಂಚಕಲ್ಯಾಣ ಮಹೋತ್ಸವಕ್ಕೆ ಜೈನ ಧರ್ಮಧ ತ್ರಯಾಚಾರ್ಯರಾದ ೧೦೮ ಆಚಾರ್ಯ ವಿಶುದ್ದ ಸಾಗರ ಮಹಾರಾಜರು, ಶ್ರೀ ೧೦೮ ಕುಲರತ್ನ ಭೂಷಣ ಮುನಿ ಮಹಾರಾಜರು, ಶ್ರೀ ೧೦೮ ಚಂದ್ರುಫ್ರಭು ಮುನಿ ಸಾಗರ್, ಜಿನ ಧರ್ಮ ಪ್ರಭಾವಕ ಯುವ ಸಂತ ಮುನಿ ಸಾಗರ್ ಮಹಾರಾಜರ ಸಾನಿಧ್ಯದಲ್ಲಿ ಪಂಚ ಕಲ್ಯಾಣ ಮಹೋತ್ಸವ ನಡೆಯಲಿದ್ದು ಅದರ ಜತೆಗೆ ರಾಜಕೀಯದ ಮುಖಂಡರು, ಸಾಹಿತಿಗಳು, ಸಮಾಜ ಸೇವಕರಿಗೆ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ೪೦ ಹೆಚ್ಚು ದಿಗಂಬರ ಜೈನ ಮುನಿಗಳು ಧಾರ್ಮಿಕ ಕಾರ್ಯಕ್ರಮಗಳು ಭಾಗವಹಿಸಲಿದ್ದಾರೆ. ಈ ಶ್ರವಣಬೆಳಗೂಳ ನೆಡೆದ ಕಾರ್ಯಕ್ರಮವನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಹೆಚ್ಚು ಜೈನ ಮುನಿಗಳು ಬರಲಿದ್ದಾರೆ. ಇದು ದಕ್ಷಿಣಾ ಭಾರತದ ವಿಶೇಷ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಇಲ್ಲಿಗೆ ೨ ಸಾವಿರ ದಿಂದ ೪ ಸಾವಿರ ಭಕ್ತರು ಸೇರುತ್ತಾರೆ. ಇದು ಬರೀ ಜೈನರ ಧಾರ್ಮಿಕ ಕ್ಷೇತ್ರವಲ್ಲ. ಎಲ್ಲಾ ಧರ್ಮದ ಕ್ಷೇತ್ರವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಯುಪಿಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಕೇಂದ್ರ ಸ್ಥಾಪನೆ, ಆತ್ಮ ಸಾಧನೆಯ ಧರ್ಮ ಸಾಧನೆ ಮಾಡುವ ಜೈನ ಮನೆಗಳಿಗೆ ಭವ್ಯ ತ್ಯಾಗ ಭವನ ನಿರ್ಮಾಣ ಹಾಗೂ ಯಾತ್ರಿಕರಿಗೆ ಭೋಜನಾಲಯ ನಿರ್ಮಾಣ, ವೃದ್ಧಾಶ್ರಮಗಳು, ಜೈನ ಗ್ರಂಥಾಲಯ, ಭವ್ಯ ಸಭಾ ಮಂಟಪವನ್ನು ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಜಿನ ಧರ್ಮ ಪ್ರಭಾವಕ ಯುವ ಸಂತ ವೀರ ಸಾಗರ ಮುನಿ ಮಹಾರಾಜ್. ಜೈನರ ಗುತ್ತಿ ಪಂಚಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ. ಕೋಶಾಧ್ಯಕ್ಷ ಜಯೇಂದ್ರ ಕುಮಾರ್, ಸಹ ಕಾರ್ಯದರ್ಶಿಗಳಾದ ಬ್ರಹ್ಮೇಶ್, ನಾಗೇಂದ್ರ ಪ್ರಸಾದ್, ಆಹಾರ ಸಮಿತಿ ಸಂಚಾಲಕ ಧಾವನ್ ಜೈನ್, ತಾಲೂಕು ಸಮಿತಿ ಸಂಚಾಲಕರಾದ ಎಸ್.ಎನ್.ಅಶೋಕ್ ಕುಮಾರ್. ಎಚ್.ಎಸ್.ಅನಿಲ್ ಕುಮಾರ್, ತಾ.ಪ್ರ.ಸಂಘ ಅದ್ಯಕ್ಷೆ ಭಾರತಿಗೌಡ, ಮೊದಲಾದವರು ಹಾಜರಿದ್ದರು.