ಪಂಚಮಸಾಲಿ ರಕ್ತ ಹರಿಸಿದ ಸಿದ್ದು, ಕಾಂಗ್ರೆಸ್‌ಗೆ ತಕ್ಕ ಪಾಠ

| Published : Dec 13 2024, 12:47 AM IST

ಪಂಚಮಸಾಲಿ ರಕ್ತ ಹರಿಸಿದ ಸಿದ್ದು, ಕಾಂಗ್ರೆಸ್‌ಗೆ ತಕ್ಕ ಪಾಠ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ, ಉದ್ಯೋಗಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಬೆಳಗಾವಿಯಲ್ಲಿ ಹೋರಾಟ ನಡೆಸಿದ್ದ ಪಂಚಮಸಾಲಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿದ ಸರ್ವಾಧಿಕಾರಿ ಧೋರಣೆಗೆ ಕಾಂಗ್ರೆಸ್ ಸರ್ಕಾರವು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಹಾಗೂ ಸಮಾಜದ ಹಿರಿಯ ಮುಖಂಡ ಅಕ್ಕಿ ಪ್ರಭು ಕಲ್ಬುರ್ಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆಶಿಕ್ಷಣ, ಉದ್ಯೋಗಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಬೆಳಗಾವಿಯಲ್ಲಿ ಹೋರಾಟ ನಡೆಸಿದ್ದ ಪಂಚಮಸಾಲಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿದ ಸರ್ವಾಧಿಕಾರಿ ಧೋರಣೆಗೆ ಕಾಂಗ್ರೆಸ್ ಸರ್ಕಾರವು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಹಾಗೂ ಸಮಾಜದ ಹಿರಿಯ ಮುಖಂಡ ಅಕ್ಕಿ ಪ್ರಭು ಕಲ್ಬುರ್ಗಿ ಹೇಳಿದ್ದಾರೆ. ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ ಮಾಡಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಹಿಟ್ಲರ್‌ನಂತೆ ವರ್ತಿಸಿದೆ. 2 ಎ ಮೀಸಲಾತಿ ಕಲ್ಪಿಸುವಂತೆ ಸಮಾಜವು ಸರ್ಕಾರಕ್ಕೆ ಡಿ.10ರವರೆಗೆ ಗಡುವು ನೀಡಿತ್ತು. ಡಿ.10ರ ಮಧ್ಯಾಹ್ನ 1ರವರೆಗೆ ಯೋಗ್ಯ ನಿರ್ಣಯ ನೀಡದಿದ್ದರೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದರೂ ಸಿಎಂ ಸಿದ್ದರಾಮಯ್ಯ ಸ್ಪಂದಿಸಲಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ. ನೆಪ ಮಾತ್ರಕ್ಕೆ ನಾಲ್ಕೈದು ಜನರಿಗೆ ಭೇಟಿಯಾಗಲು ಹೇಳಿದ್ದೆ. ಸಮಾಜದವರೇ ಬಂದಿಲ್ಲವೆಂಬ ಬೇಜವಾಬ್ದಾರಿ ಹೇಳಿಕೆ ಸಿದ್ದರಾಮಯ್ಯ ನೀಡಿದ್ದಾರೆ. ಇದರಿಂದ ಸಹಜವಾಗಿಯೇ ಬೇಸತ್ತಿದ್ದ ಸಮಾಜ ಬಾಂಧವರು ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದಾರೆ. ಆದರೆ, ಹೋರಾಟಗಾರರ ಮನವೊಲಿಸಬೇಕಾದ ಸರ್ಕಾರ ಲಾಠಿ ಪ್ರಹಾರ ಮಾಡಿಸಿ, ಅಮಾಯಕರ ಕೈ ಮುರಿದಿದೆ, ತಲೆಯೊಡೆಯುವಂತೆ ಹೊಡೆಸಿದೆ. ಈ ಮೂಲಕ ಪಂಚಮಸಾಲಿ ಸಮಾಜದ ಮೇಲೆ ಸಿದ್ದರಾಮಯ್ಯ ದಬ್ಬಾಳಿಕೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಈ ನೀಚ ಕೆಲಸವನ್ನು ಸಮಾಜ ಎಂದಿಗೂ ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಇದೇ ಕಾಂಗ್ರೆಸ್, ಸಿದ್ದರಾಮಯ್ಯನವರಿಗೆ ತಕ್ಕ ಪಾಠವನ್ನು ಸಮಾಜ ಕಲಿಸಲಿದೆ. 2 ಎ ಮೀಸಲಾತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ತಕ್ಷಣ ತಮ್ಮ ಉತ್ತರ ನೀಡಬೇಕು. ಕೃಷಿ ಹಿನ್ನೆಲೆಯ ಪಂಚಮಸಾಲಿಗಳು ಅನ್ನ ಹಾಕುವರು. ಅಂತಹವರ ಮೇಲೆ ಸಿದ್ದರಾಮಯ್ಯ ಪೊಲೀಸ್ ಬಲ ಪ್ರಯೋಗಿಸಿ, ಲಾಠಿ ಪ್ರಹಾರ ಮಾಡಿಸಿದ್ದು ಸಮಾಜದ ಸಹನೆಯ ಕಟ್ಟೆಯೊಡೆಯುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪಂಚಮಸಾಲಿ ಬಾಂಧವರು ಬಡ್ಡಿ, ಚಕ್ರ ಬಡ್ಡಿ ಸಮೇತ ಬೆಳವಾಗಿ ಘಟನೆಗೆ ಉತ್ತರ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ತೀವ್ರ, ಉಗ್ರ ಸ್ವರೂಪದ ಹೋರಾಟ ನಡೆಸುತ್ತೇವೆಂಬ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳ ಹೇಳಿಕೆಯೇ ಇಡೀ ಪಂಚಮಸಾಲಿಗಳ ಸಮುದಾಯದ ನಿರ್ಧಾರವ ಆಗಿದೆ. ತಕ್ಷಣ‍ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ಸಿನ ಸಚಿವರು, ಶಾಸಕರು ಪಂಚಮಸಾಲಿ ಶ್ರೀಗಳು ಹಾಗೂ ಸಮಾಜದ ಹೋರಾಟಗಾರರ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮಠ-ಪೀಠ ಮರೆತು, ಸಮಾಜಕ್ಕಾಗಿ ನಿಲ್ಲಿಪಂಚಮಸಾಲಿ ಸಮಾಜದ ವಿಚಾರ ಬಂದಾಗ ಸಮಾಜ ಬಾಂಧವವರು ಮಠ-ಪೀಠಗಳನ್ನು ಬದಿಗಿಟ್ಟು, ಸಮಾಜದ ಒಳಿತಿಗಾಗಿ ಹೋರಾಟ ಮಾಡುವವರ ಬೆನ್ನಿಗೆ ನಿಲ್ಲಬೇಕು. ಇದು ನಮ್ಮ ಸಮಾಜ ಬಾಂಧವರ ಆದ್ಯ ಕರ್ತವ್ಯವಾಗಿದೆ. ಸಮಾಜದ ಉಳಿವಿಗಾಗಿ ಹಾಗೂ ಸಮಾಜದ ಭವಿಷ್ಯವಾದ ಮಕ್ಕಳು, ಯುವ ಜನರ ಶಿಕ್ಷಣ, ಉದ್ಯೋಗ ಮೀಸಲಾತಿಗಾಗಿ 2 ಎ ಹೋರಾಟ ಅನಿವಾರ್ಯ, ಅತ್ಯಗತ್ಯವಾದುದಾಗಿದೆ. ಈ ಹೋರಾಟ ನಮ್ಮ ಹಕ್ಕು ಸಹ ಆಗಿದ್ದು, ಸಮಾಜ ಬಾಂಧವರು ಸ್ವಯಂ ಪ್ರೇರಣೆಯಿಂದ ಹೋರಾಟಕ್ಕೆ ಕೈಜೋಡಿಸಬೇಕು.ಅಕ್ಕಿ ಪ್ರಭು, ಪಂಚಮಸಾಲಿ ಮುಖಂಡ ಕಲ್ಬುರ್ಗಿ