ಸಾರಾಂಶ
- ಶಾಸಕ ಕೆ.ಎಸ್.ಆನಂದ್ ಸಮಿತಿ ಕಾರ್ಯಕ್ರಮದ ಕೈಪಿಡಿ ಬಿಡುಗಡೆ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಗಣಪತಿ ಪೆಂಡಾಲ್‌ನ ಆಸ್ಥಾನದ ಮಂಟಪದಲ್ಲಿ 38 ನೇ ವರ್ಷದ ಗಣೇಶೋತ್ಸವ ಅಂಗವಾಗಿ ಶ್ರೀ ಗಣಪತಿಯನ್ನು ಬುಧವಾರ ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠಾಪನೆಗೂ ಮುನ್ನಾ ಸಾಂಪ್ರದಾಯಿಕವಾಗಿ ಪಟ್ಟಣದ ಅಮೃತ್‌ಲಾಲ್ ಅವರ ನಿವಾಸದಿಂದ ಬೆಳ್ಳಿ ಗೌರಿ-ಗಣಪತಿ ಮೂರ್ತಿಯೊಂದಿಗೆ ಸಮಿತಿಯವರು ಪಟ್ಟಣದ ಕೋರ್ಟ್ ಗಣಪತಿ ಮತ್ತು ಪೇಟೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ನಾದಸ್ವರದೊಂದಿಗೆ ಪೆಂಡಾಲ್ ಆವರಣದ ಆಸ್ಥಾನದ ಮಂಟಪದವರೆಗೆ ಮೆರವಣಿಗೆ ನಡೆಯಿತು.
ನಂತರ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸ್ವಾಮಿಯವರನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ ಶಾಸಕ ಕೆ.ಎಸ್.ಆನಂದ್ ಸಮಿತಿ ಕಾರ್ಯಕ್ರಮದ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿ, ಪೆಂಡಾಲ್ ಸಮಿತಿಯಿಂದ ಕಳೆದ 37 ವರ್ಷಗಳಿಂದ ವಿಶೇಷವಾಗಿ ಗಣೇಶೋ ತ್ಸವ ಆಚರಿಸಿಕೊಂಡು ಬರುತ್ತಿದ್ದು, ಸೌರ್ಹಾದಯುತವಾಗಿ ಹಬ್ಬದ ಸಂಭ್ರಮ ಹೆಚ್ಚಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ನಾಗರಿಕರ ಸಹಕಾರದಿಂದ ಸಮಿತಿ 30 ದಿನಗಳ ಕಾಲ ಆಸ್ಥಾನದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಗಣಪತಿ ಮಹೋತ್ಸವಕ್ಕೆ ಎಲ್ಲ ವರ್ಗದ ಭಕ್ತರು ಕೈ ಜೋಡಿಸುವುದು ಶಾಂತಿ ಸೌರ್ಹಾದತೆಗೆ ಹೆಸರಾಗಿರುವ ಪೆಂಡಾಲ್ ಗಣಪತಿ ತಾಲೂಕಿನ ಕೀರ್ತಿ ಹೆಚ್ಚಿಸಿದೆ ಎಂದರು. ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್, ಈರಳ್ಳಿ ರಮೇಶ್, ಸಮಿತಿ ಅಧ್ಯಕ್ಷ ಕೆ.ಜಿ. ಸೋಮಶೇಖರ್, ಗೌರವಾಧ್ಯಕ್ಷ ಹೂವಿನಮಂಡಿ ನಾಗರಾಜ್, ಸಮಿತಿ ಪದಾಧಿಕಾರಿಗಳಾದ ಕೆ.ಬಿ.ಸೋಮೇಶ್, ಕೆ.ಜಿ. ಶ್ರೀನಿವಾಸ್‌ಮೂರ್ತಿ, ಟಿ.ರಂಗಪ್ಪ, ಎನ್.ಎಚ್. ನಂಜುಂಡ ಸ್ವಾಮಿ, ಕೆ.ಜಿ.ಲೋಕೇಶ್ವರ್, ಕೆ.ಜಿ.ಕೃಷ್ಣಮೂರ್ತಿ, ಹೊಳೆಯಪ್ಪ, ಸಂದೀಪ್, ಮಂಜುನಾಥ್, ಎನ್.ಎಚ್. ಚಂದ್ರಪ್ಪ ಮತ್ತಿತರಿದ್ದರು.
28ಕೆಕೆಡಿಯು4. ಕಡೂರು ಪಟ್ಟಣದ ಸಾರ್ವಜನಿಕ ಶ್ರೀಪ್ರಸನ್ನ ಗಣಪತಿ ಸೇವಾಸಮಿತಿಯಿಂದ ಶ್ರೀ ಗಣಪತಿ ಯ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಶಾಸಕ ಕೆ.ಎಸ್.ಆನಂದ್ ಸಾಂಸ್ಕೃತಿಕ ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆಗೊಳಿಸಿದರು.