ಪಾಂಡವಪುರ:

ಪಟ್ಟಣದ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜನತಾಭಂಡಾರ ರಾಮಕೃಷ್ಣೇಗೌಡರ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಆಚರಿಸಲಾಯಿತು.

ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎನ್.ಚಲುವೇಗೌಡರು, ಬೆಂಗಳೂರು ನಗರ ವಿಶ್ವ ವಿಖ್ಯಾತಿಯಾಗಲು ನಾಡಪ್ರಭು ಕೆಂಪೇಗೌಡರೇ ಪ್ರಮುಖ ಕಾರಣ. ಇಡೀ ವಿಶ್ವವೇ ಬೆರಗಾಗುವಂತೆ ದೊಡ್ಡ ನಗರವನ್ನಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದರು ಎಂದರು.

ಕೆಂಪೇಗೌಡರ ಆಡಳಿತ ಸುಧಾರಣಾ ಕ್ರಮಗಳು, ಅವರ ದೂರದರ್ಶಿತ್ವ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ವಿಶ್ವ ಪ್ರಸಿದ್ದಿ ಹೊಂದಿರುವ ಬೆಂಗಳೂರು ನಗರ ಕಾಂಕ್ರಿಟ್ ನಗರವಾಗಿ ಮಾರ್ಪಾಡಾಗುತ್ತಿದೆ ಎಂದರು.

ಈ ವೇಳೆ ಸಂಘದ ಅಧ್ಯಕ್ಷ ಜನತಾಭಂಡಾರ ರಾಮಕೃಷ್ಣೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪಿಸಿರುವ ಕೆಂಪೇಗೌಡ ಪತ್ತಿನ ಸಹಕಾರ ಸಂಘವನ್ನು ಶಾಶ್ವತವಾಗಿ ಉಳಿಸಲು ಸಂಘದ ಪ್ರತಿಯೊಬ್ಬ ನಿರ್ದೇಶಕರು ಹೆಚ್ಚು ಹೆಚ್ಚು ಷೇರುಗಳನ್ನು ಮಾಡಬೇಕಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಭಜೇಗೌಡ, ಅಡಳಿತ ಮಂಡಳಿ ನಿರ್ದೇಶಕರಾದ ಚಿನಕುರಳಿ ನರಸಿಂಹೇಗೌಡ, ಕನಗನಮರಡಿ ನಾಗರಾಜು, ಕೋಡಾಲ ರಾಜೇಗೌಡ, ರೂಪಾ, ಸೌಭಾಗ್ಯ, ಶಂಕನಹಳ್ಳಿ ಕುಮಾರ್, ವಿಶ್ವೇಶ್ವರ, ಇಂದ್ರೇಶ್, ಮಹೇಶ್, ವೀರಭದ್ರಸ್ವಾಮಿ, ಕಾರ್ಯದರ್ಶಿ ನಿಂಗೇಗೌಡ, ವಕೀಲ ಹೇಮಂತ್ ಕುಮಾರ್ ಸೇರಿದಂತೆ ಇತರರಿದ್ದರು.

ಕೆಂಪೇಗೌಡರ ಆದರ್ಶಗಳನ್ನು ಯುವ ಸಮೂಹ ಪಾಲಿಸಬೇಕು: ಎಂ.ಜಿ.ರಮೇಶ್

ಕನ್ನಡಪ್ರಭ ವಾರ್ತೆ ಮಳವಳ್ಳಿನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಯುವ ಸಮೂಹ ಪಾಲನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಎಂ.ಜಿ.ರಮೇಶ್ ತಿಳಿಸಿದರು.

ತಾಲೂಕಿನ ಕಿರುಗಾವಲು ಹೋಬಳಿಯ ಮಾದಹಳ್ಳಿಯಲ್ಲಿ ಮಂಗಳವಾರ ಸಂಜೆ ಗ್ರಾಮಸ್ಥರು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತದ ವೈಖರಿಯನ್ನು ಪ್ರಸ್ತುತದ ರಾಜಕಾರಣಿಗಳು ಅನುಸರಿಸಬೇಕಿದೆ ಎಂದರು.ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಪ್ರಾಮಾಣಿಕತೆ, ಆಡಳಿತ ದಕ್ಷತೆ ಹಾಗೂ ಜನಪರ ಸೇವಾ ಮನೋಭಾವದ ಆಡಳಿತದಿಂದಾಗಿ ನೂರಾರು ವರ್ಷಗಳು ಕಳೆದರೂ ಕೂಡ ಹೆಸರು ಶಾಶ್ವತವಾಗಿ ಉಳಿದಿದೆ. ಕೆಂಪೇಗೌಡರು ಕೇವಲ ಬೆಂಗಳೂರು ನಗರ ನಿರ್ಮಾಣಕ್ಕೆ ಮಾತ್ರ ಸೀಮಿತರಾಗದೆ, ಕೃಷಿ, ನೀರಾವರಿ, ವ್ಯಾಪಾರ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಮಾಜಿ ಅಭಿಲಾಷ್ ಗೌಡ, ಮುಖಂಡರಾದ ಎಂ.ಪಿ.ಉಮೇಶ್, ದೇವರಾಜು, ಮೊಗಣ್ಣ, ಬಾಲಾಜಿ, ಪ್ರಕಾಶ್,ಶ್ರೀನಿವಾಸ್, ಜಗದೀಶ್, ಎಂ.ಪಿ.ರಾಮಕೃಷ್ಣ, ಬಸವರಾಜು, ಚಂದ್ರು, ಎಂ.ಕೆ.ಕುಮಾರ್, ವಾಸು, ಶೇಖರ್, ವಿಕಾಶ್ ಸೇರಿದಂತೆ ಇತರರು ಇದ್ದರು.