ಸಾರಾಂಶ
ನಮ್ಮ ನಾಯಕರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರ ಜತೆಗೂಡಿ ಗ್ರಾಪಂ ವ್ಯಾಪ್ತಿಯ ಹಳ್ಳಿಹಳ ಅಭಿವೃದ್ದಿಗೆ ಶ್ರಮಿಸುತ್ತೇನೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹಳೇಬೀಡು ಗ್ರಾಪ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ನರಹಳ್ಳಿ ಮಂಗಳಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಉಪಾಧ್ಯಕ್ಷೆ ಗೌರಮ್ಮರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಮಂಗಳಮ್ಮ ಹೊರತು ಪಡಿಸಿ ಉಳಿದ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಲ್. ಶಿವಪ್ರಸಾದ್ ಘೋಷಿಸಿದರು.
ಮಂಗಳಮ್ಮ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಅಧ್ಯಕ್ಷರು,ಸದಸ್ಯರು ಹಾಗೂ ಎಲ್ಲಾ ಮುಖಂಡರು ಅಭಿನಂದಿಸಿದರು. ನಂತರ ಮಂಗಳಮ್ಮ ಮಾತನಾಡಿ, ನಮ್ಮ ನಾಯಕರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರ ಜತೆಗೂಡಿ ಗ್ರಾಪಂ ವ್ಯಾಪ್ತಿಯ ಹಳ್ಳಿಹಳ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಎಚ್.ಸಿ.ಧನಂಜಯ, ಸದಸ್ಯರಾದ ಎಚ್.ಪಿ.ಪುಟ್ಟೇಗೌಡ, ಗೌರಮ್ಮ, ಎಚ್.ಪಿ. ಪದ್ಮರಾಜು, ಸೌಭಾಗ್ಯಮ್ಮ, ಚಿಕ್ಕತಾಯಮ್ಮ, ಜಯಲಕ್ಷ್ಮಮ್ಮ, ಸಿ.ಜೆ.ರಾಧ, ಎಂ.ಎ.ಶೋಭ, ಮಂಜುಳ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಹೊಸಕೋಟೆ ಪುಟ್ಟಣ್ಣ, ಮುಖಂಡರಾದ ಸಣ್ಣಪ್ಪ, ದಾಸಯ್ಯ, ಮೇನಾಗರ ಛೇರ್ಮನ್ ಪುಟ್ಟಸ್ವಾಮೀಗೌಡ, ಅನುವಿನಹಳ್ಳಿ, ಎಂ.ಶಿವಕುಮಾರ್, ಕೆಂಪೇಗೌಡ, ಪಿಡಿಒ ನಾಗರಾಜು, ಕಾರ್ಯದರ್ಶಿ ಪಾಪೇಗೌಡ ಸೇರಿದಂತೆ ಹಲವರು ಹಾಜರಿದ್ದರು.