ಇಂದಿನಿಂದ ಪಾಂಡವಪುರ ಸಂಭ್ರಮ

| Published : Dec 22 2023, 01:30 AM IST

ಸಾರಾಂಶ

ಸುವರ್ಣನ್ಯೂಸ್, ಕನ್ನಡಪ್ರಭ ಸಹಯೋಗದಲ್ಲಿ ‘ಪಾಂಡವಪುರ ಸಂಭ್ರಮ’ ಹೆಸರಿನಲ್ಲಿ ಮೂರು ದಿನಗಳ ಕಾಲ ಫುಡ್, ಫನ್, ಫ್ಯಾಷನ್ ಫೆಸ್ಟಿವಲ್‌ ಆಯೋಜನೆ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಂದ ಚಾಲನೆ, ನಿತ್ಯವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸುವರ್ಣ ನ್ಯೂಸ್, ಕನ್ನಡಪ್ರಭ ಸಹಯೋಗದಲ್ಲಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಡಿ.೨೨, ೨೩, ೨೪ರಂದು ಫುಡ್, ಫನ್, ಫ್ಯಾಷನ್ ಫೆಸ್ಟಿವಲ್ ಆಯೋಜಿಸಲಾಗಿದೆ.

ಡಿ.೨೨ರಂದು ಮಧ್ಯಾಹ್ನ ೨ ಗಂಟೆಯಿಂದ ಸಂಭ್ರಮ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮಧ್ಯಾಹ್ನ ೨ ರಿಂದ ೩ ಗಂಟೆಯವರೆಗೆ ಮಕ್ಕಳಿಗೆ ಮುದ್ದಾದ ಮಗು ಮತ್ತು ವೇಷಭೂಷಣ ಸ್ಪರ್ಧೆ, ೩ರಿಂದ ಸಂಜೆ ೬ ಗಂಟೆಯವರೆಗೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ ೬ ರಿಂದ ೬.೩೦ರವರೆಗೆ ಪಾಂಡವಪುರ ಪ್ರತಿಭೆಗಳಿಂದ ಫ್ಯಾಷನ್ ಶೋ, ನೃತ್ಯ, ಜಾನಪದ ಹಾಗೂ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಸಂಜೆ ೬.೩೦ ರಿಂದ ನಡೆಯುವ ಪಾಂಡವಪುರ ಸಂಭ್ರಮ ಉದ್ಘಾಟನಾ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸುವರು. ಸಂಜೆ ೭ ರಿಂದ ೭.೩೦ರವರೆಗೆ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ ೭.೩೦ರಿಂದ ೮.೩೦ರವರೆಗೆ ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಗುರು ಪಾಟೀಲ್ ಅವರಿಂದ ಸಂಗೀತ ಸಂಜೆ, ರಾತ್ರಿ ೮.೩೦ರಿಂದ ೯ ಗಂಟೆಯವರೆಗೆ ಮಿಮಿಕ್ರಿ ಸಾಗರ್ ಹಾಗೂ ರಾಘವೇಂದ್ರರಿಂದ ಮಿಮಿಕ್ರಿ ಕಾರ್ಯಕ್ರಮ, ರಾತ್ರಿ ೯.೩೦ರಿಂದ ಪಾಂಡವಪುರ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

ಡಿ.೨೩ರ ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧೨ರವರೆಗೆ ಮಕ್ಕಳಿಗಾಗಿ ಮುದ್ದಾದ ಮಗು ಮತ್ತು ವೇಷಭೂಷಣ ಸ್ಪಪರ್ಧೆ, ಮಧ್ಯಾಹ್ನ ೧೨ ರಿಂದ ೨ರವರೆಗೆ ಮಹಿಳೆಯರಿಗಾಗಿ ಅಡುಗೆ ಮಹಾರಾಣಿ ಸ್ಪರ್ಧೆ, ಮಧ್ಯಾಹ್ನ ೨ ರಿಂದ ಸಂಜೆ ೫ರವರೆಗೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ ೬ ರಿಂದ ೬.೩೦ರವರೆಗೆ ಸ್ಥಳೀಯ ಪ್ರತಿಭೆಗಳಿಂದ ಯೋಗ ಮತ್ತು ಮಾರ್ಷಲ್ ಆಟ್ಸ್ ಪ್ರದರ್ಶನ, ಸಂಜೆ ೬.೩೦ರಿಂದ ೭.೩೦ರವರೆಗೆ ಸಾಧಕರಿಗೆ ಸನ್ಮಾನ, ಸಂಜೆ ೭.೩೦ರಿಂದ ರಾತ್‌ರಿ ೮ರವರೆಗೆ ಡ್ಯೂಯಲ್ ವಾಯ್ಸ್ ಸಿಂಗರ್ ಮಂಜು ಹಾಸನ್‌ರಿಂದ ಗಾಯನ, ರಾತ್ರಿ ೮ ರಿಂದ ೯ರವರೆಗೆ ಬೀಟ್ ಬಾಕ್ಸಿಂಗ್ ಬ್ರಾಂಡ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೯ರಿಂದ ಪಾಂಡವಪುರ ಪ್ರತಿಭೆಗಳಿಂದ ಮನರಂಜನೆ, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಡಿ.೨೪ರಂದು ಬೆಳಗ್ಗೆ ೧೧ ರಿಂದ ೧೨ರವರೆಗೆ ಮಕ್ಕಳಿಗಾಗಿ ಮುದ್ದಾದ ಮಗು, ವೇಷಭೂಷಣ ಸ್ಪರ್ಧೆ, ಮಧ್ಯಾಹ್ನ ೧೨ರಿಂದ ೧ ಗಂಟೆಯವರೆಗೆ ಮಕ್ಕಳಿಗೆ ಬೆಂಕಿರಹಿತ ಅಡುಗೆ ಸ್ಪರ್ಧೆ, ಮಧ್ಯಾಹ್ನ ೨ ರಿಂದ ೪ರವರೆಗೆ ಮಹಿಳೆಯರಿಗೆ ಅಡುಗೆ ಮಹಾರಾಣಿ ಫಿನಾಲೆ ಸ್ಪರ್ಧೆ, ಸಂಜೆ ೪ರಿಂದದ ೫ರವರೆಗೆ ಚಿತ್ರಕಲಾ ಸ್ಪರ್ಧೆ, ೫ ರಿಂದ ೬ ಗಂಟೆಯವರೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ೬.೩೦ರಿಂದ ೭.೩೦ರವರೆಎ ಬಹುಮಾನ ವಿತರಣೆ, ರಾತ್ರಿ ೮.೩೦ರಿಂದ ೯.೩೦ರವರೆಗೆ ಬಾಲು ಮತ್ತು ತಂಡದಿಂದ ಇಂಡಿಯನ್ ಫೋಕ್ ಮ್ಯೂಸಿಕ್ ಬ್ಯಾಂಡ್ ಜಂಭೆ ಝಲಕ್ ನಡೆಯಲಿದೆ.