ಸಾರಾಂಶ
ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ ಕಳೆದುಕೊಂಡಿದ್ದ ಮಾಂಗಲ್ಯ ಸರವನ್ನು ಮಹಿಳೆಗೆ ವಾಪಸ್ ತಲುಪಿಸುವಲ್ಲಿ ಬಸ್ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ. ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಶಿವಣ್ಣರ ಪತ್ನಿ ವೆಂಕಟಮ್ಮ ಕೆಎಸ್ ಆರ್ ಟಿಸಿ ಬಸ್‌ನಲ್ಲಿ ಮಾಂಗಲ್ಯ ಸರ ಕಳೆದುಕೊಂಡಿದ್ದ ಮಹಿಳೆಗೆ ಬಸ್ ಕಂಡಕ್ಟರ್ ನರಸಿಂಹೇಗೌಡ ವಾಪಸ್ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ ಕಳೆದುಕೊಂಡಿದ್ದ ಮಾಂಗಲ್ಯ ಸರವನ್ನು ಮಹಿಳೆಗೆ ವಾಪಸ್ ತಲುಪಿಸುವಲ್ಲಿ ಬಸ್ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ.ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಶಿವಣ್ಣರ ಪತ್ನಿ ವೆಂಕಟಮ್ಮ ಕೆಎಸ್ ಆರ್ ಟಿಸಿ ಬಸ್‌ನಲ್ಲಿ ಮಾಂಗಲ್ಯ ಸರ ಕಳೆದುಕೊಂಡಿದ್ದ ಮಹಿಳೆಗೆ ಬಸ್ ಕಂಡಕ್ಟರ್ ನರಸಿಂಹೇಗೌಡ ವಾಪಸ್ ನೀಡಿದ್ದಾರೆ.
ಮಾ.12ರಂದು ಬುಧವಾರ ಸಂಜೆ ವೇಳೆ ಮಂಡ್ಯದಿಂದ ಬಂದಿಳಿದ ವೆಂಕಟಮ್ಮ ಅವರು ಪಾಂಡವಪುರ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ (ಬಸ್ ಸಂಖ್ಯೆ ಕೆ.ಎ 09, ಎಫ್ 0122) ಸಂಬಂಧಿಕರ ಮನೆ ಡಿಂಕಾ ಶೆಟ್ಟಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಆ ವೇಳೆ ಟಿಕೆಟ್ ತೆಗೆದುಕೊಳ್ಳಲು ಆಧಾರ್ ಕಾರ್ಡ್ ತೆಗೆಯಬೇಕಾದರೆ ಮಾಂಗಲ್ಯ ಸರದ ಕೊಂಡಿ ಕಳಚಿ ಬಿದ್ದುಹೋಗಿದೆ. ಮಲ್ಲಿಗೆರೆ ಗೇಟ್ ಬಳಿ ಬಸ್ ಇಳಿದು ಕತ್ತಿನಲ್ಲಿ ಮಾಂಗಲ್ಯ ಸರ ಕಾಣದಿದ್ದಕ್ಕೆ ಗಾಬರಿಗೊಂಡು ಊಟ ನಿದ್ದೆ ಬಿಟ್ಟಿದ್ದರು.ಬಳಿಕ ಅದೇ ಬಸ್ ನಲ್ಲಿ ಸಂಚರಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಮಾಂಗಲ್ಯ ಸರ ಸಿಕ್ಕಿದೆ. ನಂತರ ಅದನ್ನು ಕಂಡಕ್ಟರ್ ನರಸಿಂಹೇಗೌಡರಿಗೆ ಒಪ್ಪಿಸಲಾಗಿದೆ. ವಿಳಾಸ ಪತ್ತೆ ಹಚ್ಚಿದ ಕಂಡಕ್ಟರ್ ನರಸಿಂಹೇಗೌಡ ಅವರು ಪಾಂಡವಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಾದ ಜಯರಾಂ ಅವರ ಸಮ್ಮುಖದಲ್ಲಿ ವೆಂಕಟಮ್ಮ ಅವರಿಗೆ ಮಾಂಗಲ್ಯ ಸರ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಾಂಗಲ್ಯ ಸರ ಸಿಕ್ಕಿದ ಹಿನ್ನೆಲೆಯಲ್ಲಿ ಮಹಿಳೆ ವೆಂಕಟಮ್ಮ ಸಂತಸಗೊಂಡು ಕಂಡಕ್ಟರ್ ಅವರನ್ನು ಮುಕ್ತಕಂಠದಿಂದ ಧನ್ಯವಾದ ತಿಳಿಸಿದರು. ಕಂಡಕ್ಟರ್ ನರಸಿಂಹೇಗೌಡರ ಬಗ್ಗೆ ಸಾರ್ವಜನಿಕರು ಹಾಗೂ ಕೆಎಸ್ ಆರ್ ಟಿಸಿ ಅಧಿಕಾರ ವರ್ಗದವರು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಬಸ್ ಚಾಲಕ ಪಾಂಡವಪುರ ಭರತ್ ಇತರರಿದ್ದರು.