ಸಾರಾಂಶ
ಬ್ಯಾಂಕ್‌ನಲ್ಲಿ 13 ಸಾಲಗಾರರ ಕ್ಷೇತ್ರ ಹಾಗೂ ಸಾಲಗಾರರಲ್ಲದ ಒಂದು ಸಾಮಾನ್ಯ ಕ್ಷೇತ್ರಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅನರ್ಹ ಮತದಾರರಿಗೂ ಅಭ್ಯರ್ಥಿಗಳು ಕೋರ್ಟ್ ಮೂಲಕ ಮತದಾನದ ಹಕ್ಕು ತನ್ನಂದ ಮತ ಚಲಾಯಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್ ನ 14 ಸ್ಥಾನಗಳಿಗೆ ಶನಿವಾರ ಶಾಂತಿಯುತ ಮತದಾನ ನಡೆಯಿತು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮತದಾನ ನಡೆಯಿತು.
ಬ್ಯಾಂಕ್‌ನಲ್ಲಿ 13 ಸಾಲಗಾರರ ಕ್ಷೇತ್ರ ಹಾಗೂ ಸಾಲಗಾರರಲ್ಲದ ಒಂದು ಸಾಮಾನ್ಯ ಕ್ಷೇತ್ರಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅನರ್ಹ ಮತದಾರರಿಗೂ ಅಭ್ಯರ್ಥಿಗಳು ಕೋರ್ಟ್ ಮೂಲಕ ಮತದಾನದ ಹಕ್ಕು ತನ್ನಂದ ಮತ ಚಲಾಯಿಸಿದರು. ಅನರ್ಹ ಮತದಾರಿಗೂ ಮತದಾನದ ಹಕ್ಕು ನೀಡಿದ ಹಿನ್ನೆಲೆಯಲ್ಲಿ ಅರ್ಹ ಹಾಗೂ ಅನರ್ಹರಿಗೆ ಪ್ರತ್ಯೇಕ ಮತಪಟ್ಟೆಯಲ್ಲಿ ಮಾದರಿ ಮತಪತ್ರಗಳನ್ನು ಹಾಕಿಸಲಾಯಿತು.ಕೋರ್ಟ್ ಮತದಾನಕ್ಕೆ ಅವಕಾಶ ನೀಡಿ ಅಂತಿಮ ಆದೇಶ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಅಂತಿಮ ಆದೇಶ ಬರುವವರೆಗೂ ಚುನಾವಣೆಯ ಫಲಿತಾಂಶ ಪ್ರಕಟಿಸದೆ ಚುನಾವಣಾಧಿಕಾರಿ ಲೋಕೇಶ್ ಮೂರ್ತಿ ಅವರು ಮುಂದೂಡಿದರು. ಮತದಾನ ಮುಗಿದ ಬಳಿಕ ಚುನಾವಣಾಧಿಕಾರಿಗಳು, ಪೊಲೀಸರ ನೇತೃತ್ವದಲ್ಲಿ ಮತ ಪೆಟ್ಟಿಗೆಗಳನ್ನು ತಾಲೂಕು ಕಚೇರಿಯ ಖಜಾನೆಗೆ ರವಾನಿಸಿದರು.
ಬೆಳಗ್ಗೆಯಿಂದ ಬಿರುಸಿನ ಮತದಾನ ನಡೆಯಿತು. ಮತಗಟ್ಟೆಗೆ ಆಗಮಿಸಿ ಮತದಾರರು ತಮ್ಮ ಹಕ್ಕು ಚಲಾಹಿಸಿದರು. ಮತ ಕೇಂದ್ರ ಹೊರಗಡೆ ಅಭ್ಯರ್ಥಿಗಳು ಟೆಂಟ್ ಹಾಕಿಕೊಂಡು ಮತಗಟ್ಟೆ ಬರುವ ಮತದಾರರ ಬಳಿ ತಮಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಸಾಲಗಾರ ಕ್ಷೇತ್ರದ ಹಲವು ಕ್ಷೇತ್ರದಲ್ಲಿ ಶೇ.100 ಮತದಾನ ನಡೆದಿರುವುದು ವಿಶೇಷವಾಗಿದೆ.