ಅಂಧರ ಬಾಳಿನ ಆಶಾಕಿರಣ ಪಂಡಿತ ಪುಟ್ಟರಾಜರು: ಧಡೇಸೂರಮಠ

| Published : Mar 05 2025, 12:30 AM IST

ಅಂಧರ ಬಾಳಿನ ಆಶಾಕಿರಣ ಪಂಡಿತ ಪುಟ್ಟರಾಜರು: ಧಡೇಸೂರಮಠ
Share this Article
  • FB
  • TW
  • Linkdin
  • Email

ಸಾರಾಂಶ

ಅಂಧರ ಬಾಳಿಗೆ ಆಶಾಕಿರಣವಾಗಿದ್ದ ಪಂಡಿತ ಪುಟ್ಟರಾಜರು ಈ ಭಾಗದ ನಡೆದಾಡುವ ದೇವರು. ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳು ನಡೆದಾಡಿದ ಈ ಭಾಗದಲ್ಲಿ ಜನ್ಮ ತಾಳಿದ್ದ ನಾವುಗಳೆಲ್ಲ ಪುಣ್ಯವಂತರು. ಅಂತಹ ಮಹನೀಯರ 111ನೇ ಜನ್ಮ ದಿನಾಚರಣೆಯಲ್ಲಿ ಭಾಗಿಯಾಗಿರುವ ನಾವೆಲ್ಲ ಪುಣ್ಯವಂತರು ಎಂದು ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ತಿಳಿಸಿದರು.

ನರೇಗಲ್ಲ: ಅಂಧರ ಬಾಳಿಗೆ ಆಶಾಕಿರಣವಾಗಿದ್ದ ಪಂಡಿತ ಪುಟ್ಟರಾಜರು ಈ ಭಾಗದ ನಡೆದಾಡುವ ದೇವರು. ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳು ನಡೆದಾಡಿದ ಈ ಭಾಗದಲ್ಲಿ ಜನ್ಮ ತಾಳಿದ್ದ ನಾವುಗಳೆಲ್ಲ ಪುಣ್ಯವಂತರು. ಅಂತಹ ಮಹನೀಯರ 111ನೇ ಜನ್ಮ ದಿನಾಚರಣೆಯಲ್ಲಿ ಭಾಗಿಯಾಗಿರುವ ನಾವೆಲ್ಲ ಪುಣ್ಯವಂತರು ಎಂದು ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ತಿಳಿಸಿದರು. ಅವರು ಸ್ಥಳೀಯ ಸ್ಥಳೀಯ ಕರವೇ ಘಟಕದಿಂದ ಪಂಡಿತ ಪುಟ್ಟರಾಜ ಗವಾಯಿಗಳವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಪುಷ್ಪಾರ್ಚನೆಗೈದು ಮಾತನಾಡಿದರು. ಜನತೆಯ ಅಂತರಂಗದ ಕಣ್ಣನ್ನು ತೆರೆಯುವಂತೆ ಮಾಡುವ ಮೂಲಕ ಈ ನಾಡಿಗೆ ಅಪಾರ ಕೊಡುಗೆ ನೀಡಿದ ಮಹಾತ್ಮರು, ಇವರು ಸಂಗೀತ ಕ್ಷೇತ್ರಕ್ಕೆ ಅಪಾರಕೊಡುಗೆ ನೀಡುವ ಮೂಲಕ ಈ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ ಪಾಟೀಲ, ಅಂಜುಮನ್ ಸಮಿತಿಯ ಮುಖಂಡ ಎ.ಎ. ನವಲಗುಂದ, ಪ.ಪಂ. ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಸಾದ ವ್ಯವಸ್ಥೆ ನಂತರ ಗಣ್ಯಮಾನ್ಯರನ್ನು ಸನ್ಮಾನಿಸಲಾಯಿತು. ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, ಪ ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಸದಸ್ಯರುಗಳಾದ ದಾವುದಲಿ ಕುದರಿ, ವೀರೇಶ ಜೋಗಿ, ಮುಖಂಡರುಗಳಾದ ಸಂತೋಷ ಹನುಮಸಾಗರ, ಸದ್ದಾಂ ನಶೇಖಾನ, ಕರವೇ ಪದಾಧಿಕಾರಿಗಳಾದ ಶರಣಪ್ಪ ಕರಮುಡಿ, ಹೇಮಣ್ಣ ಹಡಗಲಿ, ಶರಣಪ್ಪ ಉಪ್ಪಾರ, ಸುನೀಲ ಬಸವರಡ್ಡೇರ, ಮಲ್ಲಿಕಾರ್ಜುನ ಮುಧೋಳ, ರಾಜು ಆದೋನಿ, ಕೃಷ್ಣಾ ಮಣ್ಣೊಡ್ಡರ, ಮಂಜು ನಡವಲಕೇರಿ, ಪ್ರಶಾಂತ ನವಲಗುಂದ ಸೇರಿದಂತೆ ಹಲವಾರು ಮಹನೀಯರು ಭಾಗವಹಿಸಿದ್ದರು.