ಪಂಡ್ರಿ ಶ್ರೀನಿವಾಸ ರಾವ್ ನಿಧನ

| Published : Oct 30 2023, 12:30 AM IST

ಸಾರಾಂಶ

ಏಳು ದಶಕಗಳಿಂದ ಹೊಸಳ್ಳಿ ದಂಡಿನ ದೇವರ ಸೇವಾನಿರತರಾಗಿ ಗೆಜ್ಜೆ ಸೇವೆಯಲ್ಲಿ ಪಾತ್ರಿಗಳಾಗಿ ಗೆಜ್ಜೆ ಕಟ್ಟಿ ನರ್ತನ ಸೇವೆ
ಸಾಗರ: ತಾಲೂಕಿನ ಹಂಸಗಾರು- ಹೊಸಳ್ಳಿಯ ದಂಡಿನ ದೇವರ ಆರಾಧಕ ಕುಟುಂಬದ ಹಿರಿಯಚೇತನ ಪಂಡ್ರಿ ಶ್ರೀನಿವಾಸರಾವ್ (83) ಭಾನುವಾರ ನಿಧನರಾಗಿದ್ದಾರೆ. ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನಡೆಯಿತು. ಪಂಡ್ರಿ ಶ್ರೀನಿವಾಸರಾವ್ ಏಳು ದಶಕಗಳಿಂದ ಹೊಸಳ್ಳಿ ದಂಡಿನ ದೇವರ ಸೇವಾನಿರತರಾಗಿ ಗೆಜ್ಜೆ ಸೇವೆಯಲ್ಲಿ ಪಾತ್ರಿಗಳಾಗಿ ಗೆಜ್ಜೆ ಕಟ್ಟಿ ನರ್ತನ ಸೇವೆ, ಕಾಕಡ ಸೇವೆ, ಛಡಿ ಸೇವೆ ಮೊದಲಾದವುಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದರು. ಆಂಜನೇಯ, ಹುಚ್ಚರಾಯಸ್ವಾಮಿ, ಗೋವಿಂದ ಇನ್ನಿತರೆ ಹೆಸರಿನಿಂದ ಕರೆಯಲ್ಪಡುವ ದಂಡಿನ ದೇವರ ಆರಾಧನೆ ತುಂಬಾ ಕ್ಷಿಷ್ಟಕರವಾಗಿದ್ದು, ಶ್ರದ್ಧಾ-ಭಕ್ತಿಯಿಂದ ನಡೆಸಿಕೊಂಡು ಬರಬೇಕು. ಮಲೆನಾಡಿನ ವಿಶಿಷ್ಟವಾದ ಈ ಆರಾಧನಾ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕಣ್ಮರೆ ಆಗುತ್ತಿದ್ದರೂ ಪಂಡ್ರಿ ಶ್ರೀನಿವಾಸ ರಾವ್ ಮತ್ತವರ ಕುಟುಂಬ ಇದನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿತ್ತು. ಇವರ ಸೇವಾ ಶ್ರೇಷ್ಠತೆ ಪರಿಗಣಿಸಿ ಸಿರಿವಂತೆ ತ್ರಿಪುರಾಂತಕೇಶ್ವರ ದೇವಸ್ಥಾನ ಸಮಿತಿ, ಜಗದ್ಗುರು ಶಂಕರಾಚಾರ್ಯ ಸಂಸ್ಥಾನ, ರಾಮಚಂದ್ರಪುರ ಮಠ ಇನ್ನಿತರ ಧಾರ್ಮಿಕ ಸಂಸ್ಥೆಗಳು ಸನ್ಮಾನಿಸಿವೆ. - - - -29ಕೆಎಸ್.ಎಜಿ1: ಪಂಡ್ರಿ ಶ್ರೀನಿವಾಸ ರಾವ್‌