ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಾಂಡುರಂಗನ ಆರಾಧನೆಯಿಂದ ನಮ್ಮ ಮನಸ್ಸುಗಳು ಶುದ್ಧಿಯಾಗಿ, ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದು ಮಹಾರಾಷ್ಟ್ರ ಪಂಡರಪೂರದ ಗೋಪಾಲ ಮಹಾರಾಜರು ಹೇಳಿದರು.ನೇಗಿನಹಾಳ ಗ್ರಾಮದ ಐತಿಹಾಸಿಕ ವಿಠ್ಠಲ-ರುಕ್ಮೀಣಿ ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸುಮಂಗಲೆಯರ ಕುಂಬಮೇಳ, ಹರಿಭಜನೆ, ಶಿವಭಜನೆ, ಕರಡಿ ಮಜಲು, ಡೊಳ್ಳು ಕುಣಿತ ಮಾಡುವುದರ ಮೂಲಕ ದೇವಸ್ಥಾನಕ್ಕೆ ತಂದು ಮೂರ್ತಿ ಶುದ್ಧೀಕರಿಸುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಶೈಲದ ಶಿವಲಿಂಗಯ್ಯ ಮಹಾಸ್ವಾಮಿಗಳು, ಮಡಿವಾಳೇಶ್ವರ ಮಠದ ಬಸವಪ್ರಕಾಶ ಮಹಾಸ್ವಾಮಿಗಳು, ಸಿದ್ಧಾರೂಢ ಮಠದ ಅದ್ವೈತ್ ಭಾರತಿ ಮಹಾಸ್ವಾಮಿಗಳು, ಶಾಸಕ ಬಾಬಾಸಾಹೇಬ್ ಪಾಟೀಲ, ವಿಠ್ಠಲ ರುಕ್ಮೀಣಿ ದೇವಸ್ಥಾನ ಕಮಿಟಿ ಅಧ್ಯಕ್ಷ ನಾನಾಸಾಹೇಬ ಪಾಟೀಲ, ವಿಕ್ರಮ ಇನಾಮದಾರ, ರೋಹಿಣಿ ಪಾಟೀಲ, ಲಕ್ಷ್ಮೀ ಇನಾಮದಾರ, ಕೃಷ್ಣಾಜಿ ಕುಲಕರ್ಣಿ, ರವಿ ಅಂಗಡಿ, ಸುಭಾಷ ರುಮೋಜಿ, ಶಿವಾಜಿ ಮುತ್ತಗಿ, ಈರಣ್ಣ ಉಳವಿ, ಮಹಾರುದ್ರಪ್ಪ ಬೋಳೆತ್ತಿನ, ಮಹಾದೇವ ನರಸಣ್ಣವರ, ಮಡಿವಾಳಪ್ಪ ಕಲ್ಲೋಳ್ಳಿ, ಹವಾಲ್ದಾರ ಸಿದ್ದಪ್ಪ ಕಾರಿಮನಿ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಕೋಟಗಿ, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ರಾಮಣ್ಣಾ ತೋರಣಗಟ್ಟಿ ಸ್ವಾಗತಿಸಿ, ನಿರೂಪಿಸಿದರು.