ಕನ್ನಡಪ್ರಭ ವಾರ್ತೆ ಅಥಣಿ ಪಟ್ಟಣದ ಹಿರಿಯ ವೈದ್ಯ ಡಾ.ಅಣ್ಣಪ್ಪ ಪಾಂಗಿ ತಮ್ಮ 40 ವರ್ಷಗಳ ಸುದೀರ್ಘ ಆರೋಗ್ಯ ಸೇವಾಅನುಭವಗಳ ಜೊತೆಗೆ ಆರೋಗ್ಯ ಮತ್ತು ದೀರ್ಘಾಯುಷ್ಯದ ಸಂಶೋಧನೆಗಳನ್ನು ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಆರೋಗ್ಯವಂತ ಬದುಕು ನಡೆಸಲು ಅವರ ಎರಡು ಕೃತಿಗಳು ಪ್ರತಿಯೊಬ್ಬರಿಗೆ ಕೈಪಿಡಿಯಾಗಿವೆ ಎಂದು ಆರ್‌ಎಸ್‌ಎಸ್ ಮುಖಂಡ ಅರವಿಂದರಾವ ದೇಶಪಾಂಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಹಿರಿಯ ವೈದ್ಯ ಡಾ.ಅಣ್ಣಪ್ಪ ಪಾಂಗಿ ತಮ್ಮ 40 ವರ್ಷಗಳ ಸುದೀರ್ಘ ಆರೋಗ್ಯ ಸೇವಾಅನುಭವಗಳ ಜೊತೆಗೆ ಆರೋಗ್ಯ ಮತ್ತು ದೀರ್ಘಾಯುಷ್ಯದ ಸಂಶೋಧನೆಗಳನ್ನು ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಆರೋಗ್ಯವಂತ ಬದುಕು ನಡೆಸಲು ಅವರ ಎರಡು ಕೃತಿಗಳು ಪ್ರತಿಯೊಬ್ಬರಿಗೆ ಕೈಪಿಡಿಯಾಗಿವೆ ಎಂದು ಆರ್‌ಎಸ್‌ಎಸ್ ಮುಖಂಡ ಅರವಿಂದರಾವ ದೇಶಪಾಂಡೆ ಹೇಳಿದರು.ಪಟ್ಟಣದ ಹೊರವಲಯದ ಅನ್ನಪೂರ್ಣ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ಪಾoಗಿ ವೈದ್ಯಕೀಯ ಸೇವೆಗಳು ಹಾಗೂ ಸಂಶೋಧನಾ ಪ್ರತಿಷ್ಠಾನದಿಂದ ಡಾ.ಎ.ಎ.ಪಾಂಗಿ ಅವರ ನೀವೂ ಶತಾಯುಷಿಗಳಾಗಿ ಪುಸ್ತಕ ಲೋಕಾರ್ಪಣೆ ಹಾಗೂ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಎಂತಹ ಆಹಾರ ಸೇವಿಸಬೇಕು, ಆಹಾರ ಪದ್ಧತಿ ಜೊತೆಗೆ ವ್ಯಾಯಾಮ ಮತ್ತು ಒತ್ತಡ ರಹಿತ ಜೀವನದ ಅನೇಕ ಸಂಗತಿಗಳನ್ನು ಕೃತಿಗಳಲ್ಲಿ ಸಮಗ್ರವಾಗಿ ವಿವರಿಸಿದ್ದಾರೆ. ಅವರು ವೈದ್ಯಕೀಯ ವೃತ್ತಿಯ ಜೊತೆಗೆ ಇತ್ತೀಚಿನ ಕೋರೋನಾ ಸಮಯವನ್ನು ವೈದ್ಯಕೀಯ ಸಾಹಿತ್ಯ ರಚನೆಗೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ನೀವು ಶತಾಯುಷಿಗಳಾಗಿ ಕೃತಿ ಕೂಡ ಆರೋಗ್ಯ ಪೂರ್ಣ ಮಾಹಿತಿ ಒಳಗೊಂಡಿದೆ ಎಂದು ಹೇಳಿದರು.ಹಿರಿಯ ಲೇಖಕ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿ, ಹಿಂದಿನ ಕಾಲದ ಮತ್ತು ಇಂದಿನ ಕಾಲದ ಆಹಾರ ಪದ್ಧತಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಕಲುಷಿತ ವಾತಾವರಣದಲ್ಲಿ ನಾವೆಲ್ಲರೂ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಹಿತಮಿತ ಆಹಾರ ಸೇವನೆ ಅರೋಗ್ಯಕ್ಕೆ ಸೋಪಾನ. ಈ ನಿಟ್ಟಿನಲ್ಲಿ ಅನೇಕರ ಬದುಕಿಗೆ ಆರೋಗ್ಯ ಜೀವನದ ಮಾರ್ಗದರ್ಶನ ನೀಡಬಲ್ಲ ಕೃತಿಯನ್ನು ಡಾ.ಎ.ಎ.ಪಾಂಗಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅವರ ಕೃತಿ ಪ್ರತಿಯೊಬ್ಬರಿಗೆ ಮಾರ್ಗದರ್ಶಿಯಾಗಲಿ ಎಂದು ಶುಭ ಕೋರಿದರು. ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ನೀವೂ ಶತಾಯುಷಿಗಳಾಗಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರ. ಡಾ.ಅಣ್ಣಪ್ಪ ಪಾಂಗಿ ಅವರು ತಮ್ಮ 40 ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಅನುಭವ ಮತ್ತು ಜಗತ್ತಿನ ವಿವಿಧ ದೇಶಗಳ ಜನರ ಆರೋಗ್ಯದ ಗುಟ್ಟುಗಳನ್ನು ಸಂಶೋಧನೆ ಮಾಡಿ ಕನ್ನಡ ಸಾಹಿತ್ಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಎರಡು ಗ್ರಂಥಗಳನ್ನು ನೀಡಿದ್ದಾರೆ. ಅವುಗಳನ್ನು ಓದುವ ಮೂಲಕ ಆರೋಗ್ಯ ಸಲಹೆಗಳನ್ನು ತಿಳಿದು ಎಲ್ಲರೂ ಆರೋಗ್ಯವಂತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.ಸಾಹಿತ್ಯ ಸಾoಸ್ಕೃತಿಕ ಸಂಘದ ಅಧ್ಯಕ್ಷ ಡಾ.ಪ್ರಿಯಂವಧಾ ಹುಲಗಬಾಳಿ ಗ್ರಂಥ ಪರಿಚಯಿಸಿದರು. ಕೃತಿಕಾರ ಡಾ.ಅಣ್ಣಪ್ಪ ಪಾಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರವಿ ಪಾಂಗಿ ಸ್ವಾಗತಿಸಿದರು. ಕುಮಾರ ತಳವಾರ ನಿರೂಪಿಸಿದರು. ನಿಲೇಶ ಝರೆ ವಂದಿಸಿದರು.