ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ

| Published : Apr 25 2025, 11:46 PM IST

ಸಾರಾಂಶ

ಜಾತಿ, ಭಾಷೆ, ರಾಜ್ಯ ಕೇಳದೆ ಧರ್ಮ ಕೇಳಿ, ಅವರ ಬಟ್ಟೆ ಬಿಚ್ಚಿಸಿ ಹಿಂದೂವೆಂದು ತಿಳಿದ ಕೂಡಲೇ ಗುಂಡಿಟ್ಟು ಹತ್ಯೆಗೈದ ಉಗ್ರಗಾಮಿಗಳಿಗೆ ಪೋಷಿಸುತ್ತಿರುವ ಪಾಕಿಸ್ತಾನದ ಅಟ್ಟಹಾಸಕ್ಕೆ ಇತಿಶ್ರೀ ಆಡಬೇಕಿದೆ.

ಕನಕಗಿರಿ:

ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ ಉಗ್ರರು ಹಾಗೂ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನದ ನಡೆ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಮಾತನಾಡಿ, ಜಾತಿ, ಭಾಷೆ, ರಾಜ್ಯ ಕೇಳದೆ ಧರ್ಮ ಕೇಳಿ, ಅವರ ಬಟ್ಟೆ ಬಿಚ್ಚಿಸಿ ಹಿಂದೂವೆಂದು ತಿಳಿದ ಕೂಡಲೇ ಗುಂಡಿಟ್ಟು ಹತ್ಯೆಗೈದ ಉಗ್ರಗಾಮಿಗಳಿಗೆ ಪೋಷಿಸುತ್ತಿರುವ ಪಾಕಿಸ್ತಾನದ ಅಟ್ಟಹಾಸಕ್ಕೆ ಇತಿಶ್ರೀ ಆಡಬೇಕಿದೆ. ಎಷ್ಟೋ ಮಕ್ಕಳು ತಂದೆ ಕಳೆದುಕೊಂಡು ಅನಾಥರಾಗಿದ್ದಾರೆ. ಕಣ್ಣೆದುರೆ ತಮ್ಮ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವುದನ್ನು ನೋಡಿರುವ ಪತ್ನಿಯರಿಗೆ ಎಷ್ಟು ನೋವು-ಸಂಕಟವಾಗಿದೆ. ಆ ಸಹೋದರಿಯರಿಗೆ ನ್ಯಾಯ ಕೊಡಿಸಲು ಉಗ್ರರರಿಗೆ ತಕ್ಕ ಶಾಸ್ತಿ ಮಾಡಬೇಕಿದ ಎಂದರು. ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸಿ ಸರ್ವನಾಶ ಮಾಡುವುದರಿಂದ ಮಾತ್ರ ಉಗ್ರವಾದ ನಿಲ್ಲಿಸುವ ಕೊನೆಯ ದಾರಿಯಾಗಿದೆ ಎಂದರು.

ಇದಕ್ಕೂ ಮುನ್ನ ಸಂಘ ಪರಿವಾರದ ಮುಖಂಡ ಹನುಮಂತರೆಡ್ಡಿ ಮಹಲಿನಮನಿ ಮಾತನಾಡಿ, ಈ ಪೈಶಾಚಿಕ ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಿಟ್ಟ ಉತ್ತರ ನೀಡಬೇಕು ಎಂದರು.

ತೇರಿನ ಹನುಮಪ್ಪ ದೇವಸ್ಥಾನದಿಂದ ರಾಜಬೀದಿಯ ಮೂಲಕ ವಾಲ್ಮೀಕಿ ವೃತ್ತದ ವರೆಗೂ ಪಂಜಿನ ಮೆರವಣಿಗೆ ನಡೆಯಿತು. ಉಗ್ರರ ಗುಂಡಿಗೆ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಸಲ್ಲಿಸಲಾಯಿತು.

ಪೃಥ್ವಿಕುಮಾರ ಮ್ಯಾಗೇರಿ, ಹನುಮೇಶ ಗಂಗಾಮತ, ಚೇತನ ಯಾದವ, ಕಿರಣಕುಮಾರ, ಸಂಪತಕುಮಾರ, ಮಾರುತಿ ಗಂಗಾಮತ,

ಶ್ರೀಕಾಂತ ಹಿಂದೂ, ರಾಮ, ಗೋವಿಂದ, ಶರಣ ಬಸವರೆಡ್ಡಿ, ಮುತ್ತುರಾಜ್ ಮರಾಠಿ, ವೆಂಕಟೇಶ ಗಂಗಾಮತ ಸೇರಿದಂತೆ ಇತರರು ಇದ್ದರು.