ಸಾರಾಂಶ
ಕಳೆದ ಮೂರು ವರ್ಷಗಳಿಂದ ಪುರಸಭೆಯಲ್ಲಿ ದುರಾಡಳಿವಿತ್ತು. ಇದರಿಂದ ಪಟ್ಟಣದ ನಾಗರೀಕರು ಬೇಸತ್ತಿದ್ದರು. ನೂತನ ಅಧ್ಯಕ್ಷರು ಯಾವುದೇ ರೀತಿ ಪಕ್ಷ ರಾಜಕಾರಣ ಮಾಡದೆ ಪಟ್ಟಣದ ಎಲ್ಲಾ 23 ವಾರ್ಡ್‌ಗಳ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಜನರ ಮನಸ್ಸನ್ನು ಗೆಲ್ಲಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆನ್‌ನ ಪಂಕಜ ಪ್ರಕಾಶ್ ಆಯ್ಕೆಯಾಗುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಂಭ್ರಮಾಚರಣೆ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನೂತನ ಅಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಕಾಂಗ್ರೆಸ್ಸಿಗರು ವಿಜಯೋತ್ಸವ ಆಚರಿಸಿದರು.
ನಂತರ ನೂತನ ಅಧ್ಯಕ್ಷರು ಮತ್ತು ಅವರಿಗೆ ಬೆಂಬಲ ನೀಡಿದ ಸದಸ್ಯರನ್ನು ಅಭಿನಂದಿಸಿದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮಾತನಾಡಿ, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್‌ನ ಕೆಲ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದರು.ಕಳೆದ ಮೂರು ವರ್ಷಗಳಿಂದ ಪುರಸಭೆಯಲ್ಲಿ ದುರಾಡಳಿವಿತ್ತು. ಇದರಿಂದ ಪಟ್ಟಣದ ನಾಗರೀಕರು ಬೇಸತ್ತಿದ್ದರು. ನೂತನ ಅಧ್ಯಕ್ಷರು ಯಾವುದೇ ರೀತಿ ಪಕ್ಷ ರಾಜಕಾರಣ ಮಾಡದೆ ಪಟ್ಟಣದ ಎಲ್ಲಾ 23 ವಾರ್ಡ್‌ಗಳ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಜನರ ಮನಸ್ಸನ್ನು ಗೆಲ್ಲಬೇಕು ಎಂದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಬಿ.ಪ್ರಕಾಶ್, ಮುಖಂಡರಾದ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ಬಿ. ಈಶ್ವರಪ್ರಸಾದ್, ತಾಲೂಕು ಉಸ್ತುವಾರಿ ಚಿನಕುರುಳಿ ರಮೇಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಬಿ.ರವಿಕುಮಾರ್, ಬಸ್ತಿ ರಂಗಪ್ಪ, ರಾಜಯ್ಯ, ವಕೀಲ ಬಿ.ನಾಗೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.