ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಪಪಂಯ 4ನೇ ವಾರ್ಡ್ನ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದ್ರಕಲಾ ರಾಜಣ್ಣ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.ಚುನಾವಣಾಧಿಕಾರಿ ಜಿ. ಪುರುಷೋತ್ತಮ್ ನಾಮಪತ್ರ ಸ್ವೀಕರಿಸಿದರು. 4ನೇ ವಾರ್ಡ್ ನ ಸದಸ್ಯರಾಗಿದ್ದ ಎಸ್.ಎಲ್. ರಾಜಣ್ಣ ಅವರು ನಿಧನರಾದ ಹಿನ್ನೆಲೆ ತೆರವಾದ ಪ. ಜಾತಿಗೆ ಮೀಸಲಾದ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರ ಸೂಚನೆಯ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ವಾರ್ಡ್ ನ ಮುಖಂಡರೊಂದಿಗೆ ಆಗಮಿಸಿದ ರಾಜಣ್ಣ ಪತ್ನಿ ಚಂದ್ರಕಲಾ ಅವರು ತಲಾ ಒಂದು ಸೆಟ್ ನಾಮಪತ್ರ ಸಲ್ಲಿಸಿದರು.ಎಸ್.ಕೆ. ಕೃಷ್ಣಯ್ಯ ಅವರು ಸೂಚಕರಾಗಿದ್ದರು. ಚುನಾವಣಾಧಿಕಾರಿ ಜಿ. ಪುರುಷೋತ್ತಮ್, ಸಹಾಯಕ ಚುನಾವಣಾಧಿಕಾರಿ ಎಚ್.ಡಿ. ಮಂಜುನಾಥ್ ನಾಮಪತ್ರ ಸ್ವೀಕರಿಸಿದರು. ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಟೌನ್ ಅಧ್ಯಕ್ಷ ಎಸ್.ಎನ್. ನಾಗರಾಜು, ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಎಸ್.ಪಿ. ಬಿಲ್ಲಯ್ಯ, ಭೀಮಯ್ಯ, ಎಸ್.ಕೆ. ಕೃಷ್ಣಯ್ಯ, ರಮೇಶ್, ದೊಡ್ಡಬೈರ, ಮಹದೇವಯ್ಯ, ಗೋಪಾಲಯ್ಯ, ಕೃಷ್ಣ, ಯಜಮಾನ ಬೋಗಯ್ಯ, ರಂಗಯ್ಯ,ರಾಜು, ಸೋಮಶೇಖರ್ ಇದ್ದರು. ಅವಿರೋಧ ಆಯ್ಕೆಯಾಗುವ ಸಾಧ್ಯತೆಪಪಂ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಕಡೆ ದಿನವಾದ ಸೋಮವಾರ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ ರಾಜಣ್ಣ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಸ್.ಎಲ್. ರಾಜಣ್ಣ ಅವರು ನಿಧನರಾದ ಹಿನ್ನೆಲೆ ಶಾಸಕ ಅನಿಲ್ ಚಿಕ್ಕಮಾದು, ವಾರ್ಡ್ ಮತದಾರರು, ಮುಖಂಡರು ನಿರ್ಧರಿಸಿ ಉಪ ಚುನಾವಣೆಯಲ್ಲಿ ಮತ್ಯಾರು ನಾಮಪತ್ರ ಸಲ್ಲಿಸದಂತೆ ಅನುಕಂಪ ತೋರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. -----------ಸರಗೂರು ಪಪಂ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ ಅವರು ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಚುನಾವಣೆ ನಡೆಯುವುದಿಲ್ಲ. ಬದಲಿಗೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಲಿದೆ. - ಜಿ. ಪುರುಷೋತ್ತಮ್, ಚುನಾವಣಾಧಿಕಾರಿ.