ಬಿದ್ದುಸಿಕ್ಕಿದ ಐಫೋನ್‌ ವಾಪಸ್‌ ನೀಡಿ ಪ್ರಾಮಾಣಿಕತೆ ಮೆರೆದ ಪತ್ರಿಕಾ ವಿತರಕ

| Published : Mar 20 2025, 01:16 AM IST

ಬಿದ್ದುಸಿಕ್ಕಿದ ಐಫೋನ್‌ ವಾಪಸ್‌ ನೀಡಿ ಪ್ರಾಮಾಣಿಕತೆ ಮೆರೆದ ಪತ್ರಿಕಾ ವಿತರಕ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಬದಿ ಸಿಕ್ಕಿದ ಸುಮಾರು 1.25 ಲಕ್ಷ ರು. ಮೌಲ್ಯದ ಐಫೋನ್‌ನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ನಗರದ ಕಂಕನಾಡಿಯ ರೇಣುಕಾರಾಜ್‌ ನ್ಯೂಸ್‌ ಏಜೆನ್ಸಿಯ ಹಿರಿಯ ಪತ್ರಿಕಾ ವಿತರಕ ರಮೇಶ್‌ ಯಾದವ್‌ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪೇಪರ್‌ ವಿತರಣೆ ವೇಳೆ ರಸ್ತೆ ಬದಿ ಸಿಕ್ಕಿದ ಸುಮಾರು 1.25 ಲಕ್ಷ ರು. ಮೌಲ್ಯದ ಐಫೋನ್‌ನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ನಗರದ ಕಂಕನಾಡಿಯ ರೇಣುಕಾರಾಜ್‌ ನ್ಯೂಸ್‌ ಏಜೆನ್ಸಿಯ ಹಿರಿಯ ಪತ್ರಿಕಾ ವಿತರಕ ರಮೇಶ್‌ ಯಾದವ್‌ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸೋಮವಾರ ಬೆಳಗ್ಗೆ ಸೈಕಲ್‌ನಲ್ಲಿ ಪೇಪರ್ ವಿತರಣೆ ಮಾಡುತ್ತಿದ್ದಾಗ ಬಲ್ಲಾಳ್‌ಬಾಗ್‌ ರಸ್ತೆ ಬದಿ ಐಫೋನ್‌ ಸಿಕ್ಕಿತ್ತು. ಅದನ್ನು ಅವರು ರೇಣುಕಾ ರಾಜ್‌ ಏಜೆನ್ಸಿಯ ಮಾಲೀಕ ನಾಗರಾಜ್‌ ಅವರಿಗೆ ತಂದು ಕೊಟ್ಟಿದ್ದರು. ಆಗ ಅದು ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಮೊಬೈಲ್‌ ಸಿಕ್ಕಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಸಹಿತ ಪೋಸ್ಟ್‌ ಮಾಡಿದ್ದರು. ಇದನ್ನು ಗಮನಿಸಿದ ಮೊಬೈಲ್‌ ವಾರಸುದಾರ ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನ ಜೋಯೆಲ್ ಎಂಬ ವಿದ್ಯಾರ್ಥಿಯ ಬಂದು ಇವರಿಂದ ಮೊಬೈಲ್‌ ಪಡೆದುಕೊಂಡು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

......................ಉಚಿತ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ 48 ದಿನಗಳ ಉಚಿತ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಗುರುವಾರನಕೆರೆ ಪಾಂಡುರಂಗ ಮಂದಿರದಲ್ಲಿ ನಡೆಯಿತು.

ಮಂಗಳೂರು ಪತಂಜಲಿ ಯೋಗ ಶಿಕ್ಷಣ ಸಮಿತಿ ಮಕ್ಕಳ ವಿಭಾಗದ ಪ್ರಮುಖ ಪ್ರಸಾದ್ ದೀಪ ಬೆಳಗಿಸಿ ಬೌದ್ಧಿಕ್ ನೀಡಿ ಯೋಗದ ಮಹತ್ವ, ಯೋಗ ನಡೆದು ಬಂದ ದಾರಿ, ಪ್ರಸ್ತುತ ದಿನಗಳಲ್ಲಿ ಮಾನಸಿಕ ಹಾಗು ದೈಹಿಕ ಆರೋಗ್ಯಕ್ಕೆ ಯೋಗ ಶಿಕ್ಷಣದ ಅನಿವಾರ್ಯತೆಯ ಕುರಿತು ಮಾಹಿತಿ ನೀಡಿದರು.ನಾಗರಿಕ ಸೇವಾ ಟ್ರಸ್ಟೀ ವಿದ್ಯಾ ನಾಯಕ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಸ್ಕಾರ, ಸಂಘಟನೆ, ಸೇವೆಯಂತಹ ಶಿಕ್ಷಣ ನೀಡುವುದರೊಂದಿಗೆ ಉತ್ತಮ ನಾಗರಿಕರನ್ನು ರೂಪಿಸುವ ಕೆಲಸವನ್ನು ಸಮಿತಿ ಮಾಡುತ್ತಿದೆ ಎಂದರು.ನಮ್ಮ ಮನೆ ಯೋಗ ಶಿಕ್ಷಕ ಭುಜಂಗ ಅಧ್ಯಕ್ಷತೆ ವಹಿಸಿದ್ದರು.

ಯೋಗ ಶಿಕ್ಷಣ ಸಮಿತಿಯ ಮಂಗಳೂರು ಪ್ರಾಂತ ಪ್ರಮುಖ ರವೀಶ, ಯೋಗ ಶಿಕ್ಷಣ ಸಮಿತಿಯ ಆನಂದ, ಮಾರ್ಗದರ್ಶಕರು ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿ ತಾಲೂಕು , ಪ್ರದೀಪ ಯೋಗ ಶಿಕ್ಷಣ ಸಮಿತಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು ಸೇರಿ 105 ಮಂದಿ ಉಪಸ್ಥಿತರಿದ್ದರು.ನಮ್ಮ ಮನೆ ಶಾಖೆಯ ಶಿಕ್ಷಕ ಶಿವಣ್ಣ ಸ್ವಾಗತಿಸಿದರು. ಶಿಕ್ಷಕಿ ದಮಯಂತಿ ವಂದಿಸಿದರು. ಶಿಕ್ಷಕಿ ಭಾರತಿ ನಿರೂಪಿಸಿದರು. ನಮ್ಮ ಮನೆ ಯೋಗ ಬಂಧುಗಳಾದ ಪುರಂದರ, ಗಿರೀಶ , ಅಶೋಕ, ಪ್ರಿಯ ,ಆಶಾ ಯೋಗದ ಅನುಭವಗಳನ್ನು ಹಂಚಿಕೊಂಡರು. ನಮ್ಮ ಮನೆ ಗುರುವಾಯನಕೆರೆ ಶಾಖೆಯ ಯೋಗ ಶಿಕ್ಷಕ ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.