ಸಾರಾಂಶ
ಒಟ್ಟು ಹನ್ನೆರಡು ರ್ಯಾಂಕ್‌ಗಳನ್ನು ಪಡೆಯುವ ಮೂಲಕ ನೇತ್ರ ಜ್ಯೋತಿ ವಿದ್ಯಾ ಸಂಸ್ಥೆಯು ಅಭೂತಪೂರ್ವ ಸಾಧನೆಯನ್ನು ತೋರಿಸಿದ್ದು, ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ವೃಂದವನ್ನು ಕಾಲೇಜಿನ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಅವರು ಅಭಿನಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು 2022 - 23ನೇ ಸಾಲಿನ ವಿವಿಧ ಅರೆ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ನಡೆಸಿದ ಪರೀಕ್ಷೆಗಳಲ್ಲಿ ಉಡುಪಿಯ ನೇತ್ರಜ್ಯೋತಿ ಅರೆವೈದ್ಯಕೀಯ ಕಾಲೇಜಿನ 12 ಮಂದಿ ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. 2023ರ ಡಿಸೆಂಬರ್‌ನಲ್ಲಿ ನಡೆದ ಸಾರ್ವಜನಿಕ ಆರೋಗ್ಯ ಪದವಿ ಪರೀಕ್ಷೆಯಲ್ಲಿ ಅಶಿತಾ (1ನೇ), ಕವಿತಾ ನಾಯಕ್ (3ನೇ), ರಫಿಯಾ ರಾಯ್‌ಭಾಗ್ (4ನೇ), ಪವನ್ ಕುಮಾರ್ (6ನೇ), ಪ್ರೀತಿ ಚಿಕ್ಕಮಠ್ (8ನೇ) ರ್ಯಾಂಕ್‌ಗಳನ್ನು ಪಡೆದಿರುತ್ತಾರೆ. ಆಸ್ಪತ್ರೆ ಆಡಳಿತ ಪದವಿ ಪರೀಕ್ಷೆಯಲ್ಲಿ ಶಾಂಭವಿ (1ನೇ), ಹಷಿ೯ತ್ ಕುಮಾರ್ (2ನೇ ), ನವ್ಯ (9ನೇ ) ರ್ಯಾಂಕ್‌ಗಳನ್ನು ಪಡೆದಿರುತ್ತಾರೆ. ಬಿಎಸ್ಸಿ ಆಪರೇಷನ್ ಥಿಯೇಟರ್ ಪರೀಕ್ಷೆಯಲ್ಲಿ ಕಾವ್ಯ (2ನೇ), ಚೈತ್ರ (5ನೇ), ತೇಜಸ್ವಿನಿ (6ನೇ) ಮತ್ತು ದೀಕ್ಷಿತಾ (7ನೇ) ರ್ಯಾಂಕ್‌ಗಳನ್ನು ಪಡೆದಿರುತ್ತಾರೆ. ಒಟ್ಟು ಹನ್ನೆರಡು ರ್ಯಾಂಕ್‌ಗಳನ್ನು ಪಡೆಯುವ ಮೂಲಕ ನೇತ್ರ ಜ್ಯೋತಿ ವಿದ್ಯಾ ಸಂಸ್ಥೆಯು ಅಭೂತಪೂರ್ವ ಸಾಧನೆಯನ್ನು ತೋರಿಸಿದ್ದು, ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ವೃಂದವನ್ನು ಕಾಲೇಜಿನ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಅವರು ಅಭಿನಂದಿಸಿದ್ದಾರೆ.ನೇತ್ರ ಜ್ಯೋತಿ ವಿದ್ಯಾಸಂಸ್ಥೆಯು ಸದ್ಯದಲ್ಲಿಯೇ ಉಡುಪಿಯ ಹೃದಯಭಾಗದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ವಿಶಾಲ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು, ಅಲ್ಲಿ ಸುಸಜ್ಜಿತ ಪ್ರಯೋಗಾಲಯ, ಡಿಜಿಟಲ್ ತರಗತಿ ಕೋಣೆ, ಗ್ರಂಥಾಲಯ ಮುಂತಾದ ವ್ಯವಸ್ಥೆಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಹೊಸ ಮಜಲನ್ನು ನೀಡಲಿದೆ ಎಂದು ರಶ್ಮಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.