ಹಾನಗಲ್ಲ ಪೊಲೀಸ್‌ರಿಂದ ರೌಡಿಶೀಟರ್‌ಗಳ ಪರೇಡ್: ಸಿಪಿಐ ಎನ್.ಎಚ್. ಆಂಜನೇಯ

| Published : Sep 09 2024, 01:39 AM IST / Updated: Sep 09 2024, 01:40 AM IST

ಹಾನಗಲ್ಲ ಪೊಲೀಸ್‌ರಿಂದ ರೌಡಿಶೀಟರ್‌ಗಳ ಪರೇಡ್: ಸಿಪಿಐ ಎನ್.ಎಚ್. ಆಂಜನೇಯ
Share this Article
  • FB
  • TW
  • Linkdin
  • Email

ಸಾರಾಂಶ

ಗಜಾನನೋತ್ಸವ ಹಾಗೂ ಈದ್‌ಮಿಲಾದ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಹಾನಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಪಟ್ಟಿಯಲ್ಲಿರುವವರ ಪರೇಡ್ ನಡೆಸಿ ಶಾಂತಿ ಕದಡಂತೆ ಕಟ್ಟೆಚ್ಚರ ನೀಡಿ, ಸಮಾಜದಲ್ಲಿ ಎಲ್ಲರಂತೆ ಶಾಂತಿ ಸುವ್ಯಸ್ಥೆಗೆ ಸಹಕಾರಿಯಾಗಿ ಬದುಕಿ ಎಂದು ಸಿಪಿಐ ಎನ್.ಎಚ್. ಆಂಜನೇಯ ತಿಳಿಸಿದ್ದಾರೆ.

ಹಾನಗಲ್ಲ: ಗಜಾನನೋತ್ಸವ ಹಾಗೂ ಈದ್‌ಮಿಲಾದ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಹಾನಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಪಟ್ಟಿಯಲ್ಲಿರುವವರ ಪರೇಡ್ ನಡೆಸಿ ಶಾಂತಿ ಕದಡಂತೆ ಕಟ್ಟೆಚ್ಚರ ನೀಡಿ, ಸಮಾಜದಲ್ಲಿ ಎಲ್ಲರಂತೆ ಶಾಂತಿ ಸುವ್ಯಸ್ಥೆಗೆ ಸಹಕಾರಿಯಾಗಿ ಬದುಕಿ ಎಂದು ಸಿಪಿಐ ಎನ್.ಎಚ್. ಆಂಜನೇಯ ತಿಳಿಸಿದ್ದಾರೆ.

ಹಾನಗಲ್ಲ ಪೊಲೀಸ್‌ ಠಾಣೆಯ ಆವರಣದಲ್ಲಿ ತಾಲೂಕಿನಲ್ಲಿ ರೌಡಿ ಪಟ್ಟಿಯಲ್ಲಿರುವವರನ್ನು ಕುರಿತು ಕಟ್ಟಪ್ಪಣೆ ಮಾಡಿದ ಸಿಪಿಐ ಎನ್.ಎಚ್.ಆಂಜನೇಯ ಹಾಗೂ ಪಿಎಸ್‌ಐ ಸಂಪತ್ ಆನಿಕಿವಿ ಅವರು, ಎಲ್ಲರಂತೆ ನೀವು ಒಬ್ಬರಾಗಿ ಬದುಕು ನಡೆಸಿರಿ. ಗುಂಪು ಕಟ್ಟಿಕೊಂಡು ಇತರರಿಗೆ ತೊಂದರೆ ಮಾಡಿದರೆ ಅನಿವಾರ್ಯವಾಗಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ನೀವು ಉತ್ತಮ ಜೀವನಕ್ಕೆ ಸಾಕ್ಷಿಯಾದರೆ ರೌಡಿ ಶೀಟರ್‌ನಿಂದ ಕಾನೂನು ಬದ್ಧವಾಗಿ ರಿಯಾಯಿತಿ ಸಿಗಲು ಸಾಧ್ಯ ಎಂದರು.

ಸಮಾಜದಲ್ಲಿ ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಬೇಕು. ಅದಕ್ಕೆ ಅಡತಡೆ ಒಡ್ಡಿದರೆ, ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಕಠಿಣ ಕ್ರಮ ಅನಿವಾರ್ಯ. ಕಾನೂನಿನಂತೆಯೇ ಹಬ್ಬಗಳಿಗಿಂತ ಮೊದಲೇ ಕಟ್ಟೆಚ್ಚರ ನೀಡಲಾಗುತ್ತಿದ್ದು, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದೇ ಗೌರವದಿಂದ ಬದುಕಲು ಬೇಕಾಗುವ ಗುಣಸ್ವಭಾವ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.