ಸಾರಾಂಶ
ಬೆಳೆಗೆ ಉತ್ತಮ ಬೆಲೆ ದೊರೆತು ರೈತರ ಬಾಳು ಬಂಗಾರವಾಗಲಿದೆ ಎಂದು ಕಾರ್ಣಿಕದ ಭವಿಷ್ಯದ ನುಡಿಯನ್ನು ಜನರು ವ್ಯಾಖ್ಯಾನಿಸಿದರು.
ಕನ್ನಡಪ್ರಭ ವಾರ್ತೆ ಕುರುಗೋಡು
ತಾಲೂಕಿನ ಯರಿಂಗಳಿಗಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಮಂಗಳವಾರ ನಡೆದ ಕಾರ್ಣಿಕೋತ್ಸವದಲ್ಲಿ ನವೀನ್ ಬಡಿಗೇರ್ ‘ಉತ್ತಿಬಿತ್ತಿ ಬೆಳೆದ ಕೈಗೆ ಬಂಗಾರದ ಕಡಗಲೇ ಪರಾಕ್’ ಎಂದು ಭವಿಷ್ಯವಾಣಿ ನುಡಿದರು.ಬೆಳೆಗೆ ಉತ್ತಮ ಬೆಲೆ ದೊರೆತು ರೈತರ ಬಾಳು ಬಂಗಾರವಾಗಲಿದೆ ಎಂದು ಕಾರ್ಣಿಕದ ಭವಿಷ್ಯದ ನುಡಿಯನ್ನು ಜನರು ವ್ಯಾಖ್ಯಾನಿಸಿದರು.
ಯರಿಂಗಳಿಗಿ ಗ್ರಾಮವೂ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನರು ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು.ಸೋಮವಾರ ದೇವಸ್ಥಾನದಲ್ಲಿ ಸರಪಳಿ ಸೇವೆ ಜರುಗಿತು. ನವೀನ್ ಬಡಿಗೇರ್, ವಿಠ್ಠೋಬಪ್ಪ, ಕಾರ್ತಿಕ್ ಮತ್ತು ರಾಜು ಸ್ವಾಮಿ ಇವರು ಕಬ್ಬಿಣದ ಸರಪಳಿ ಎಳೆದು ತುಂಡು ಮಾಡುವ ಮೂಲಕ ನೆರೆದ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದರು.
ಕಾರ್ಣಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಸೋಮವಾರ ಮತ್ತು ಮಂಗಳವಾರ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಮೈಲಾರ ಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು ಹೂವು, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))