ಸಾರಾಂಶ
ಕ್ರೀಡೆಗಳಿಂದ ಮಕ್ಕಳು ಮಾನಸಿಕ, ದೈಹಿಕವಾಗಿ ಸದೃಢವಾಗಿ ಬೆಳೆಯುತ್ತಾರೆ ಎಂದ ಬಳ್ಳಾರಿ ಕೆಪಿಟಿಸಿಎಲ್ ಅಭಿಯಂತರ ಶಿವಾನಂದ ಬಿರಾದಾರ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಮಕ್ಕಳಿಗೆ ಕ್ರೀಡೆ ಅತೀ ಮುಖ್ಯ. ಮೊಬೈಲ್ ಗೀಳಿನಿಂದ ಪಾರಾಗಲು ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಬಳ್ಳಾರಿ ಕೆಪಿಟಿಸಿಎಲ್ ಅಭಿಯಂತರ ಶಿವಾನಂದ ಬಿರಾದಾರ ಹೇಳಿದರು.ತಾಲೂಕಿನ ಕುಪಕಡ್ಡಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ರೋಣಿಹಾಳ ಪಂಚಾಯತ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು. ಕ್ರೀಡೆಗಳಿಂದ ಮಕ್ಕಳು ಮಾನಸಿಕ, ದೈಹಿಕವಾಗಿ ಸದೃಢವಾಗಿ ಬೆಳೆಯುತ್ತಾರೆ. ನಮ್ಮ ಗ್ರಾಮಕ್ಕೆ ಕ್ರೀಡಾ ಆಯೋಜನೆ ದೊರೆತಿರುವುದು ನಮ್ಮ ಸೌಭಾಗ್ಯ ಎಂದು ಹೆಮ್ಮೆಪಟ್ಟರು.
ಸರ್ಕಾರಿ ಆರ್.ಎಂ.ಎಸ್.ಎ ಪ್ರೌಢಶಾಲೆಯ ನಿಕಟಪೂರ್ವ ಅಧ್ಯಕ್ಷ ಉದಯಕುಮಾರ ಹಳ್ಳಿ ಕ್ರೀಡಾ ಧ್ವಜಾರೋಹಣ ನೇರವೇರಿಸಿದರು. ಮುರುಗೇಶ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಬಿರಾದಾರ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಉಮೇಶ ಕವಲಗಿ, ಸಿದ್ದನಗೌಡ ಪಾಟೀಲ, ಸತ್ಯಪ್ಪ ಮದಗುಣಕಿ, ದೊಡ್ಡನಗೌಡ ಬಿರಾದಾರ, ಶಿವಾನಂದ ಬಿರಾದಾರ, ಬಾವುರಾವ ಕುಲಕರ್ಣಿ, ಭೀಮಸಿ ಪಾಯಗೊಂಡ, ಶಾಂತಪ್ಪ ಹಲಗಲಿ, ಸಂಗನಗೌಡ ಬಿರಾದಾರ, ಶಿಕ್ಷಣ ಸಂಯೋಜಕ ವಿಜಯೇಂದ್ರ ಪುರೋಹಿತ, ಸಿಆರ್‌ಪಿಗಳಾದ ಸಂಗಮೇಶ ಜಂಗಮಶೆಟ್ಟಿ, ಜಿ.ಐ.ಗೋಡ್ಯಾಳ, ಶ್ರೀಕಾಂತ ಪಾರಗೊಂಡ, ಆನಂದ ಪವಾರ, ಅಮೀರ ಅಲಿ ನದಾಫ, ಬಸವರಾಜ ಚಿಂಚೊಳ್ಳಿ,ಶಾಲೆಯ ಮುಖ್ಯ ಶಿಕ್ಷಕ ಸಿದ್ದು ಕೋಟ್ಯಾಳ ಸಿಬ್ಬಂದಿಗಳಾದ ಹಣಮಂತ ಬಿರಾದಾರ, ಶಾಂತಪ್ಪ ನಾಗರಳ್ಳಿ, ಸಂಗಮೇಶ ಎಲಬಳ್ಳಿ, ಹೇಮಾವತಿ, ಕವಿತಾ ಹಿರೇಮಠ, ಲಕ್ಷ್ಮೀ ವನೇಶಿ, ಆನಂದ ಹೊಲ್ದೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಿ.ಆರ್.ಪಿ ಗಳಾದ ಸಂಗಮೇಶ ಸಂಗಮೇಶ ಜಂಗಮಶೇಟ್ಟಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಸಿ.ಆರ್.ಪಿ ಗಳಾದ ಜಿ.ಆಯ್.ಗೋಡ್ಯಾಳ ನಿರೂಪಿಸಿದರು. ಆನಂದ ಹೊಲ್ದೂರ ವಂದಿಸಿದರು.