ಡಾ.ಸಿ.ಎಂ.ಜೋಶಿಕನ್ನಡಪ್ರಭ ವಾರ್ತೆ ಗುಳೇದಗುಡ್ಡ ತಾಲೂಕಿನ ತೋಗುಣಸಿ ರಸ್ತೆಗೆ ಹೊಂದಿಕೊಂಡು ಹಾನಾಪೂರ ಎಸ್.ಪಿ. ಗ್ರಾಪಂ ವ್ಯಾಪ್ತಿಯ ವಿಶಾಲವಾದ ಪ್ರದೇಶದಲ್ಲಿ ಕಳೆದ ವರ್ಷ ಇಂದಿರಾಗಾಂಧಿ ವಸತಿ ಶಾಲೆ ಶಾಸಕರಿಂದ ಉದ್ಘಾಟನೆಯಾಗಿದೆ. ಒಂದೇ ವರ್ಷದಲ್ಲಿ ಇಲ್ಲಿನ ಅವ್ಯವಸ್ಥೆ ಕಂಡು ಪಾಲಕರು ರೋಷಿ ಹೋಗಿದ್ದಾರೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸುಧಾರಣೆಗೆ ಮುಂದಾಗಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಡಾ.ಸಿ.ಎಂ.ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡತಾಲೂಕಿನ ತೋಗುಣಸಿ ರಸ್ತೆಗೆ ಹೊಂದಿಕೊಂಡು ಹಾನಾಪೂರ ಎಸ್.ಪಿ. ಗ್ರಾಪಂ ವ್ಯಾಪ್ತಿಯ ವಿಶಾಲವಾದ ಪ್ರದೇಶದಲ್ಲಿ ಕಳೆದ ವರ್ಷ ಇಂದಿರಾಗಾಂಧಿ ವಸತಿ ಶಾಲೆ ಶಾಸಕರಿಂದ ಉದ್ಘಾಟನೆಯಾಗಿದೆ. ಒಂದೇ ವರ್ಷದಲ್ಲಿ ಇಲ್ಲಿನ ಅವ್ಯವಸ್ಥೆ ಕಂಡು ಪಾಲಕರು ರೋಷಿ ಹೋಗಿದ್ದಾರೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸುಧಾರಣೆಗೆ ಮುಂದಾಗಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ತಾಲೂಕಿನ ಮುರುಡಿ ಗ್ರಾಮದ ಸರ್ವೇ ನಂ.77ರಲ್ಲಿ 9.20 ಎಕರೆ ವಿಶಾಲವಾದ ಭೂಮಿಯಲ್ಲಿ ₹ 22.40 ಕೋಟಿ ಅನುದಾನದಲ್ಲಿ ಭವ್ಯವಾದ ಕಟ್ಟಡಗಳನ್ನೊಳಗೊಂಡ ಈ ವಸತಿಶಾಲೆ ನಿರ್ಮಾಣವಾಗಿದೆ. 125 ವಿದ್ಯಾರ್ಥಿನಿಯರು ಮತ್ತು 125 ವಿದ್ಯಾರ್ಥಿಗಳಿಗೆ ಹೀಗೆ ಒಟ್ಟು 250 ವಿದ್ಯಾರ್ಥಿಗಳಿಗೆ ಇಲ್ಲಿ ವಿದ್ಯಾರ್ಜನೆಗೆ ಮತ್ತು ವಸತಿಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಆವರಣದಲ್ಲಿ ಪ್ರಾಚಾರ್ಯರಿಗೆ ಮತ್ತು 13 ಜನ ಸಿಬ್ಬಂದಿಗೆ ಸುಸಜ್ಜಿತ ವಸತಿಗಳೂ ಇವೆ. ಶಾಲೆಯ ವಾತಾವರಣ ತುಂಬಾ ಚನ್ನಾಗಿದ್ದೂ, ವಸತಿ ನಿಲಯದಲ್ಲಿ ಮಾತ್ರ ವಿದ್ಯಾರ್ಥಿಗಳ ವಸ್ತುಗಳಿಗೆ ಭದ್ರತೆಯಿಲ್ಲ ಎಂದು ಪಾಲಕರು ಮತ್ತು ವಿದ್ಯಾರ್ಥಿಗಳು ಆರೋಪಿಸುತ್ತಾರೆ.ವಸತಿ ಕೊಠಡಿಗಳಲ್ಲಿ ಸ್ವಚ್ಛತೆಯ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಇಲಾಖೆ ಪೂರೈಸಿದ ಟ್ರಂಕ್ (ತಗಡಿನ ಪೆಟ್ಟಿಗೆಗಳು) ಸುರಕ್ಷಿತವಾಗಿಲ್ಲ. ಸರಾಗವಾಗಿ ಕೀಲಿ ತೆಗೆಯಲು ಬರುವಂತಿವೆ. ಹೀಗಾಗಿ ಮೇಲಿಂದ ಮೇಲೆ ವಿದ್ಯಾರ್ಥಿಗಳು ಟ್ರಂಕ್ಗಳಲ್ಲಿ ಇಟ್ಟಿರುವ ಅನೇಕ ವಸ್ತುಗಳನ್ನು ಕೀಲಿ ಮುರಿದು ಕಳ್ಳತನ ಮಾಡಲಾಗುತ್ತಿದೆ ಎಂದು ಪಾಲಕರು ಮತ್ತು ವಿದ್ಯಾರ್ಥಿಗಳು ಹೇಳುತ್ತಾರೆ.
ಟ್ರಂಕ್ಗಳಲ್ಲಿಟ್ಟ ಪಾಲಕರು ಮಕ್ಕಳಿಗೆ ಕೊಟ್ಟ ಖರ್ಚಿನ ಹಣ, ಪುಸ್ತಕಗಳು, ತಿನಿಸು, ಬಟ್ಟೆ ಸೇರಿ ಇನ್ನೂ ಅನೇಕ ವಸ್ತುಗಳು ನಿರಂತರ ಕಳ್ಳತನವಾಗುತ್ತಿವೆ. ಶೂ, ಚಪ್ಪಲಿ ಇವುಗಳನ್ನೂ ಬಿಡುತ್ತಿಲ್ಲ. ಹೀಗಾದರೆ ನಾವು ಯಾರಮೇಲೆ ದೂರಬೇಕೆಂದು ಪಾಲಕರು ಪ್ರಾಚಾರ್ಯರಿಗೆ ಪ್ರಶ್ನಿಸಿದರೂ ಅವರಿಂದ ಸಮರ್ಪಕ ಉತ್ತರವಿಲ್ಲ. ತಪ್ಪಾಗಿದೆ ಸರಿ ಮಾಡುತ್ತೇವೆ ಎಂಬ ಹಾರಿಕೆ ಉತ್ತರಗಳನ್ನು ಕೊಡುತ್ತ ಬಂದಿದ್ದಾರೆ. ಯಾರಿಂದ ಈ ಕಾರ್ಯ ನಿರಂತರ ನಡೆಯುತ್ತಿದೆ ಎಂದು ಪಾಲಕರು ಪ್ರಾಚಾರ್ಯರಿಗೆ ಪ್ರಶ್ನೆಸಿದರೆ, ಎಸ್ಸೆಸ್ಸೆಲ್ಸಿ, ಮುಗಿಸಿ ಹೋದ ಬ್ಯಾಚಿನ ಕೆಲ ವಿದ್ಯಾರ್ಥಿಗಳು ಎಂದು ಪ್ರಾಚಾರ್ಯರು ಹೇಳುತ್ತಾರೆ. ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದಿರಿ ಎಂದು ಪ್ರಾಚಾರ್ಯರಿಗೆ ಕೇಳಿದರೆ ಅವರಿಂದ ಸಮರ್ಪಕ ಉತ್ತರ ಬರುತ್ತಿಲ್ಲ ಎಂದು ಪಾಲಕರು ಹೇಳುತ್ತಾರೆ.ಈ ವಸತಿ ಶಾಲೆಗೆ ಸಂಬಂಧಿಸಿದ ಮೇಲಧಿಕಾರಿಗಳು ಗಮನಹರಿಸಿ ಶಾಲೆ ವಾತಾವರಣವನ್ನು ಸುಧಾರಿಸಬೇಕು. ಬಡಮಕ್ಕಳ ಉತ್ತಮ ಶಿಕ್ಷಣ ಹಾಗೂ ಭವಿಷ್ಯಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಉತ್ತಮ ನಾಗರಿಕರಾಗುವ ಕನಸು ಹೊತ್ತು ಸರ್ಕಾರ ಕೋಟ್ಯಂತರ ರೂ. ಅನುದಾನದಲ್ಲಿ ನಿರ್ಮಿಸಿದ ವಸತಿ ಶಾಲೆಯಲ್ಲಿ ಕಲಿತ ಮಕ್ಕಳ ಭವಿಷ್ಯ ಉಜ್ವಲವಾಗಬೇಕೇ ವಿನ: ಕಳ್ಳತನ ಕಲಿಯಬಾರದೆಂದು ಪಾಲಕರಾದ ಮುರುಡಿ ಗ್ರಾಮದ ಹನಮಂತ ನೀರಲಕೇರಿ, ಲಾಯದಗುಂದಿ ಗ್ರಾಮದ ಬಸವರಾಜ ದೊಡ್ಡಮನಿ, ಹಳದೂರ ಗ್ರಾಮದ ರಮೇಶ ಮಾದರ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.
ಸೋಮವಾರ ಈ ವಿಷಯವನ್ನು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಗಮನಕ್ಕೂ ತಂದಿದ್ದೇವೆ. ನಮ್ಮ ಮಕ್ಕಳು ಈ ಶಾಲೆಯಲ್ಲಿ ರ್ಯಾಂಕ್ ಬರದಿದ್ದರೂ ಪರವಾಗಿಲ್ಲ. ಕಳ್ಳರಾಗುವುದು ಬೇಡ. ಉತ್ತಮ ಸಂಸ್ಕಾರ ಕಲಿತರೆ ಸಾಕು. ಆದರೆ ಇಲ್ಲಿನ ಮಕ್ಕಳು ಕಳ್ಳತನ ಮಾಡುವುದನ್ನು ಕಲಿಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ. ವಸತಿ ನಿಲಯದ ವಾರ್ಡನ್ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದೇ ಮುಂದುವರೆದರೆ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ. ಶಾಸಕರು ಹಾಗೂ ಮೇಲಾಧಿಕಾರಿಗಳು ತಕ್ಷಣ ಗಮನಹರಿಸಬೇಕು.
-ಬಸವರಾಜ ದೊಡ್ಡಮನಿ (ಪಾಲಕರು), ಲಾಯದಗುಂದಿ ಗ್ರಾಮ. ಈ ಘಟನೆಯಿಂದ ನಮಗೂ ಬೇಸರವಾಗಿದೆ. ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸಿ ಹೋದ ವಿದ್ಯಾರ್ಥಿಗಳಿಂದ ಈ ಘಟನೆ ನಡೆದಿದೆ. ಆ ಮಕ್ಕಳು ನಮ್ಮ ಗಮನಕ್ಕೂ ಬಂದಿದ್ದಾರೆ. ಅವರ ಪಾಲಕರ ಗಮನಕ್ಕೂ ತಂದಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ.-ರುಕ್ಮೀಣಿಬಾಯಿ ಪವಾರ ಪ್ರಾಚಾರ್ಯರು, ಇಂದಿರಾಗಾಂಧಿ ವಸತಿ ಶಾಲೆ, ಗುಳೇದಗುಡ್ಡ.
ಈ ಘಟನೆ ನಮ್ಮ ಗಮನಕ್ಕೆ ಪ್ರಾಚಾರ್ಯರು ತಂದಿಲ್ಲ. ಮಾಹಿತಿ ಪಡೆದು ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸುತ್ತೇವೆ.
-ಸದಾಶಿವ ಬಡಿಗೇರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು,