ಮಕ್ಕಳಿಗಿಂತ ಪೋಷಕರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ

| Published : May 20 2025, 11:59 PM IST

ಮಕ್ಕಳಿಗಿಂತ ಪೋಷಕರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಹಾಗೂ ಕನ್ನಡಪರ ಸಂಘಸಂಸ್ಥೆಗಳು ನಾಡು, ನುಡಿ ರಕ್ಷಣೆಗೆ ನೀಡುವ ಆದ್ಯತೆಯಂತೆ ಶಾಲಾ ಕಾಲೇಜುಗಳಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದೆ. ಆದರೆ ಬಾಲ್ಯದಿಂದಲೇ ಮಕ್ಕಳಲ್ಲಿ ಕನ್ನಡ ಅಭಿಮಾನ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಾಲೂಕು ಕಾರ್ಯ ನಿರತ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಕಣಕಟ್ಟೆ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅರಸೀಕೆರೆ ಘಟಕದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗಿಂತ ಪೋಷಕರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ಇಂಗ್ಲಿಷ್ ಭಾಷೆ ಕಲಿತರಷ್ಟೇ ನಮ್ಮ ಮಕ್ಕಳಿಗೆ ಭವಿಷ್ಯ ಎಂಬ ಮನಸ್ಥಿತಿ ಪೋಷಕರದಾಗಿರುವುದರಿಂದ ಕನ್ನಡ ಭಾಷೆಯ ಮಹತ್ವ ಮಕ್ಕಳು ಅರಿಯಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕನ್ನಡ ಭಾಷೆಯ ಮಹತ್ವ ಮತ್ತು ಶ್ರೀಮಂತಿಕೆಯನ್ನು ಮಕ್ಕಳಿಗೆ ಪರಿಚಯಿಸಿ ಕೊಡುವ ಕೆಲಸ ಪೋಷಕರು ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದು ಕಿವಿಮಾತು ಹೇಳಿದರು.ಕನ್ನಡದಲ್ಲಿ 125 ಅಂಕಗಳಿಗೆ 125 ಅಂಕ ಪಡೆದು ಉತ್ತೀರ್ಣನಾಗಿರುವ ಸುಹಾಸ್ ಭಾರದ್ವಜ್ ಮಾತನಾಡಿ, ನಮ್ಮ ಮನೆಯಲ್ಲಿ ನಾವು ಮಾತನಾಡುವುದೇ ಕನ್ನಡ ಹಾಗಾಗಿ ಬಾಲ್ಯದಿಂದಲೇ ನನಗೆ ಕನ್ನಡ ಭಾಷೆ ಎಂದರೆ ಅಚ್ಚುಮೆಚ್ಚು ಜೊತೆಗೆ ಅಪ್ಪ ಅಮ್ಮ ಮತ್ತು ನನ್ನ ಶಾಲೆಯ ಅಧ್ಯಾಪಕವರಿಂದ ನನಗೆ ನೀಡಿದ ಪ್ರೋತ್ಸಾಹ ಮಾರ್ಗದರ್ಶನದಿಂದ ನಾನು ಕನ್ನಡ ಭಾಷೆಗೆ ಸಂಬಂಧಿಸಿದಂತೆ ನೂರಕ್ಕೆ ನೂರು ಅಂಕ ಪಡೆಯಲು ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡನು.

ಸಮಾರಂಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕ್ ಅಧ್ಯಕ್ಷ ಮಂಜುನಾಥ್, ಸಂಘದ ಪದಾಧಿಕಾರಿಗಳಾದ ಪ್ರಶಾಂತ್ ಲಾಳನಕೆರೆ, ನಿವೃತ್ತ ಶಿಕ್ಷಕರಾದ ರಾಮಸ್ವಾಮಿ, ಜಿಪಂ ಮಾಜಿ ಸದಸ್ಯ ಸುಲೋಚನಾ ಬಾಯಿ,ತೇಜಸ್ ಯಾದಾಪುರ, ಉಪನ್ಯಾಸಕರಾದ ಡಾ,ಬಸವರಾಜ್ ಡಾ,ಹರೀಶ್ ಕುಮಾರ್, ಕರವೇ ಮುಖಂಡ ರವಿಶಂಕರ್, ಪತ್ರಕರ್ತರ ಸಂಘದ ಖಜಾಂಚಿ ಮುರುಂಡಿ ಪ್ರಸಾದ್ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು.