ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನೀವು ಜೀವನದಲ್ಲಿ ಏನೆ ಯಶಸ್ಸು ಕಂಡಿದ್ದರೂ ಅದು ನೂರಕ್ಕೆ ತೊಂಬತ್ತು ಭಾಗ ನಿಮ್ಮ ತಂದೆ ತಾಯಿಯೆ ಕಾರಣವೇ ಹೊರತು ಎಲ್ಲವು ನನ್ನಿಂದಲೇ ಅಂದುಕೊಳ್ಳಬಾರದು ಎಂದು ಪೊಲೀಸ್ ಕಮಿಷನರ್ ಬೆಂಗಳೂರಿನ ಎಡಾ ಮಾರ್ಟಿನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ವಿಶ್ವಂ ಫೌಂಡೇಶನ್ ಮತ್ತು ಆಸ್ಟ್ರೇಲಿಯನ್ ವಿಸಾ ಮೈಗ್ತ್ಷನ್ ಕನ್ಸಲ್ಟೆನ್ಸಿ ಸರ್ವೀಸ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅತ್ಯುತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ವಿದೇಶದಲ್ಲಿ ಹೊಸ ಶೈಕ್ಷಣಿಕ ಪ್ರಯಾಣ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಾನು ಪೊಲೀಸ್ ಇಲಾಖೆಗೆ ಬಂದಾಗ ಹಾಸನದಲ್ಲಿ ಮೊದಲು ಕೆಲಸ ಮಾಡಿರುವುದು. ಈ ವೇಳೆ ನನಗೆ ಅಷ್ಟೊಂದು ಕನ್ನಡ ಬರುತ್ತಿರಲಿಲ್ಲ. ಯಾರಾದರೂ ನನ್ನ ಬಳಿ ಬಂದರೇ ಅವರಿಗೆ ನೋಡ್ತೀನಿ, ಮಾಡ್ತೀನಿ, ಕೇಳ್ತೀನಿ ಎಂದು ಉತ್ತರಿಸುತ್ತಿದ್ದೆನು. ಈ ವೇಳೆ ಮೂರು ಪದಗಳನ್ನು ಮಾತ್ರ ಉಪಯೋಗಿಸಿ ಕರ್ತವ್ಯ ನಿರ್ವಹಿಸಿದ್ದೆ. ಸುಮ್ಮನೆ ಚೈನೀಸ್ ತರಹ ಆಲಿಸುತ್ತಿದ್ದೆನು. ಹಾಸನದಲ್ಲಿ ನಾನು ಕೆಲಸ ಮಾಡದಿದ್ದರೇ ಕನ್ನಡ ಕಲಿಯುತ್ತಿರಲಿಲ್ಲ. ಇಲ್ಲೇ ಹೆಚ್ಚು ಕನ್ನಡ ಕಲಿತಿರುವುದು ಎಂದು ಹಾಸನದಲ್ಲಿ ಪೊಲೀಸ್ ಇಲಾಖೆ ಒಳಗೆ ಕೆಲಸ ಮಾಡಿರುವುದನ್ನು ಇದೇ ವೇಳೆ ನೆನಪಿಸಿಕೊಂಡರು.
ವಿದ್ಯಾರ್ಥಿಗಳು ಯಾರು ಜೀವನದಲ್ಲಿ ಚಾಲೆಂಜ್ ತೆಗೆದುಕೊಳ್ಳುತ್ತಾರೆ ಅಂತವರು ಯಶಸ್ವಿಗೊಳ್ಳುತ್ತಾರೆ. ಯಾವ ಕೆಲಸ ಮಾಡುತ್ತೀರಿ ಆ ಕೆಲಸದಲ್ಲಿ ಹೆಚ್ಚು ಗಮನ ಕೊಟ್ಟು ಉತ್ತಮ ಸೇವೆ ಕೊಟ್ಟು ಕೆಲಸ ಮಾಡಿದರೆ ಅದರಲ್ಲಿ ಪೂರ್ಣ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜೀವನದಲ್ಲಿ ನೀವು ಪಡೆಯುವ ಯಶಸ್ಸು ಹೇಗೆ ಬಂದಿತು ಎಂಬುದನ್ನು ಅರಿತು ನೀವು ನಿಮ್ಮ ತಂದೆ ತಾಯಿಯನ್ನು ಗೌರವಿಸಬೇಕು. ಆ ಯಶಸ್ಸಿನಲ್ಲಿ ನಿಮ್ಮ ಪೋಷಕರ ಪರಿಶ್ರಮವು ಸೇರಿದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು. ಏನೇ ಉನ್ನತ ವ್ಯಾಸಂಗ ಮಾಡಿದ್ದರೇ ಅದು ನಿಮ್ಮ ಪೋಷಕರಿಂದ ಎಂಬುದು ನೆನಪಿರಲಿ. ನಿಮ್ಮ ಶಿಕ್ಷಣ ಹಾಗೂ ಕೆಲಸ ಎಲ್ಲವೂ ನಮ್ಮ ಪರಿಶ್ರಮದಿಂದ ಎಂದುಕೊಂಡಿರಬಹುದು. ಆದರೆ ನೂರಕ್ಕೆ ತೊಂಬತ್ತು ಭಾಗ ನಿಮ್ಮ ತಂದೆ ತಾಯಿಯೇ ಕಾರಣ ಎಂಬುದು ನೆನಪಿರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಕಟ್ಟಾಯ ರಾಮಚಂದ್ರರವರ ಪುತ್ರ ಹಾಗೂ ವಿಶ್ವ ಫೌಂಡೇಶನ್ ಮುಖ್ಯಸ್ಥರಾದ ಹರ್ಷ, ಆಕಾಶವಾಣಿಯ ವಿಜಯ ಅಂಗಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ದಾಕ್ಷಾಯಿಣಿ, ಎಂಸಿಇ ಕಾಲೇಜು ಪ್ಲೇಸ್ಮೆಂಟ್ ಅಧಿಕಾರಿ ಗೀತಾ ಕಿರಣ್, ಸ್ಕೌಟ್ಸ್ ಅಂಡ್ ಗೈಡ್ಸ್ ಹಿರಿಯರು ಕಾಂಚನಾ ಮಾಲಾ, ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಹೆಚ್.ಆರ್. ಚಂದ್ರೇಗೌಡ, ಲಯನ್ಸ್ ಕ್ಲಬ್ ಹಗರೆಯ ಮಂಜೇಗೌಡ, ಅಮ್ಮಾ ಐ ಕೇರ್ ಸಂದೀಪ್, ದರ್ಶನ್ ಇತರರು ಉಪಸ್ಥಿತರಿದ್ದರು. ವಿ.ಎಚ್. ಚಂದನ್ ಕಾರ್ಯಕ್ರಮ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))