ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ: ಮಹಾಂತ ಶ್ರೀ

| Published : Feb 12 2024, 01:33 AM IST

ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ: ಮಹಾಂತ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಪ್ರಗತಿಗಾಗಿ ಗುರುಮಲ್ಲೇಶ್ವರ ಸಂಸ್ಥೆ ದುಡಿಯುತ್ತಿದೆ ಎಂದು ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅದ್ಯಕ್ಷ, ದೇವನೂರು ಮಠಾಧ್ಯಕ್ಷರಾದ ಮಹಾಂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಮಕ್ಕಳ ಪ್ರಗತಿಗಾಗಿ ಗುರುಮಲ್ಲೇಶ್ವರ ಸಂಸ್ಥೆ ದುಡಿಯುತ್ತಿದೆ ಎಂದು ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅದ್ಯಕ್ಷ, ದೇವನೂರು ಮಠಾಧ್ಯಕ್ಷರಾದ ಮಹಾಂತ ಸ್ವಾಮೀಜಿ ಹೇಳಿದರು. ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 9ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಮಕ್ಕಳ ಪ್ರಗತಿಗೆ ದುಡಿಯುತ್ತಿರುವ ಈ ಸಂಸ್ಥೆಗೆ ಭಕ್ತಾಧಿಗಳ ಸಹಕಾರ ಅತಿ ಮುಖ್ಯವಾಗಿದೆ. ಭಕ್ತಾಧಿಗಳ ಆಶೀರ್ವಾದ, ಗುರು, ಶಿಷ್ಯರ ಪರಂಪರೆಯಿಂದಾಗಿ ಈ ಮಠಕ್ಕೆ ಅನೇಕ ರೀತಿಯ ಕೊಡುಗೆಯೊಂದಿಗೆ ಸಹಕಾರ ನೀಡುತ್ತಾ ಬರಲಾಗುತ್ತಿದೆ. ಮಕ್ಕಳು ವಿದ್ಯಾವಂತರಾದರೆ ಅವರು ನಾಲ್ಕು ಮಂದಿಗೆ ಮುಂದಿನ ದಿನಗಳಲ್ಲಿ ಆಶ್ರಯದಾತರಾಗುತ್ತಾರೆ, ಹಾಗಾಗಿ ಪ್ರತಿಯೊಬ್ಬ ಪೋಷಕರು ತಪ್ಪದೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತನ್ನಿ, ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಿ ಕಲಿಕೆಗೆ ಮುಂದಾಗಿ ಎಂದರು. ಸಮಾರಂಭಕ್ಕೆ ಚಾಲನೆ ನೀಡಿದ ಬಿಇಒ ಮಂಜುಳ ಮಾತನಾಡಿ, ಶೈಕ್ಷಣಿಕ ವರ್ಷದ ಕೊನೆ ಹಂತದಲ್ಲಿ ಮಕ್ಕಳ ಪ್ರತಿಭೆ ಪ್ರೋತ್ಸಾಹಕ್ಕೆ ಶಾಲಾ ವಾರ್ಷಿಕೋತ್ಸವ ಆಯೋಜನೆ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಗುರುಮಲ್ಲೇಶ್ವರ ಸಂಸ್ಥೆ ಉತ್ತಮ ರೀತಿಯಲ್ಲಿ ಸಮಾರಂಭ ಆಯೋಜಿಸಿರುವುದು ಶ್ಲಾಘನೀಯ ಮಕ್ಕಳ ಪ್ರತಿಭೆ ಹೊರತರಲು ಈ ವೇದಿಕೆ ಸಹಕಾರಿಯಾಗಲಿದೆ ಎಂದರು. 600ಕ್ಕಿಂತ ಹೆಚ್ಚು ಮಕ್ಕಳು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಒಂದು ಸಂಸ್ಥೆ ಕಟ್ಟಿ ಆಸಂಸ್ಥೆಗೆ ಭದ್ರ ಬುನಾದಿ ಹಾಕಿ ಉತ್ತಮ ರೀತಿ ಬೆಳವಣಿಗೆಯಾಗುತ್ತಿದೆ. ತಾಲೂಕಿನ ಗೀತಾ ಪ್ರೈಮರಿಯ ಸಮೀಪದಲ್ಲಿ ಪುಟ್ಟ ಸಂಸ್ಥೆಯಾಗಿ ಬೆಳೆದು ಇಂದು ಪ್ರಗತಿಯತ್ತ ದಾಪುಗಾಲಿಡುತ್ತಿರುವುದು ಹೆಮ್ಮೆಯ ವಿಚಾರ, ಹಿಂದಿನ ಕಾಲಘಟ್ಟದಲ್ಲಿ ದಾನಿಗಳ ಸಂಖ್ಯೆ ಹೆಚ್ಚಿತ್ತು, ಆದರೆ ಈಗಿನ ದಿನಗಳಲ್ಲಿ ಬದಲಾದ ಕಾಲಘಟ್ಟದಲ್ಲಿ ದಾನಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಬಡ ಮಕ್ಕಳಿಗೋಸ್ಕರ ಕಟ್ಟಿದ ಈ ಸಂಸ್ಥೆಗೆ ದುಡಿದ ಮಹನೀಯರನ್ನು ನಾವೆಲ್ಲರೂ ಸ್ಮರಿಸೋಣ ಎಂದರು. ಈ ಸಂದರ್ಭದಲ್ಲಿ ದಾನಿಗಳ ಕುಟುಂಬದ ಹಲಗೇಶ್ ಗೌಡ್ರು, ವೀರಶೈವ ಮಹಾಸಭಾ ಅಧ್ಯಕ್ಷ ಮಹದೇವಪ್ರಸಾದ್, ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಚ್.ಎಂ. ವೃಷಬೇಂದ್ರ, ಮುಖ್ಯ ಶಿಕ್ಷಕಿ ಶಿವನಾಗಮ್ಮ, ಸಿಬ್ಬಂದಿ ದೊರೆರಾಜು ಇನ್ನಿತರಿದ್ದರು.