ಮಾತೃ ದೇವೂಭವ, ಪಿತೃದೇವೊಭವ ಎಂಬುದು ನಮ್ಮ ಸಂಸ್ಕೃತಿ, ತಂದೆ- ತಾಯಿಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನಾವು ದೇವರನ್ನು ಕಾಣಲು ಸಾಧ್ಯವಿಲ್ಲ. ಆದರೆ, ನಮ್ಮ ಬೆಳವಣಿಗೆಗಾಗಿ ಸರ್ವವನ್ನು ತ್ಯಾಗ ಮಾಡುವ ಪೋಷಕರಲ್ಲಿ ನಾವು ದೇವರನ್ನು ಕಾಣಬಹುದಾಗಿದೆ. ನಾವು ಯಾವುದೇ ಹಂತಕ್ಕೆ ಬೆಳೆದರೂ ನಮ್ಮ ಬೆಳವಣಿಗೆಗೆ ಕಾರಣರಾದ ಪೋಷಕರನ್ನು ಎಂದಿಗೂ ಮರೆಯಬಾರದು.
ಸಕಲೇಶಪುರ: ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಗಳನ್ನು ಗೌರವಿಸುವ ದಿನವನ್ನು ಪೋಷಕರ ದಿನ ಎನ್ನಲಾಗುವುದು ಎಂದು ಎಸ್.ವಿ.ಜಿ ಪಯೋನಿಯರ್ ಶಾಲೆಯ ಕಾರ್ಯದರ್ಶಿ ಶೃತಿ ಶಿವಣ್ಣ ಹೇಳಿದರು.
ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಾತೃ ದೇವೂಭವ, ಪಿತೃದೇವೊಭವ ಎಂಬುದು ನಮ್ಮ ಸಂಸ್ಕೃತಿ, ತಂದೆ- ತಾಯಿಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನಾವು ದೇವರನ್ನು ಕಾಣಲು ಸಾಧ್ಯವಿಲ್ಲ. ಆದರೆ, ನಮ್ಮ ಬೆಳವಣಿಗೆಗಾಗಿ ಸರ್ವವನ್ನು ತ್ಯಾಗ ಮಾಡುವ ಪೋಷಕರಲ್ಲಿ ನಾವು ದೇವರನ್ನು ಕಾಣಬಹುದಾಗಿದೆ. ನಾವು ಯಾವುದೇ ಹಂತಕ್ಕೆ ಬೆಳೆದರೂ ನಮ್ಮ ಬೆಳವಣಿಗೆಗೆ ಕಾರಣರಾದ ಪೋಷಕರನ್ನು ಎಂದಿಗೂ ಮರೆಯಬಾರದು. ಪೋಷಕರಿಗೆ ನಾವು ನೀಡುವ ಉಡುಗೊರೆಯೆಂದರೆ ಸದಾ ಗೌರವಿಸುವುದು, ಕಾಳಜಿ ವಹಿಸುವುದು ಹಾಗೂ ಅವರು ಹೆಮ್ಮೆಪಡುವಂತೆ ಬದುಕುವುದಾಗಿದೆ. ಆದ್ದರಿಂದ ಹೆತ್ತ ಒಡಲು ಹಾಗೂ ಹೊತ್ತ ಹೆಗಲ ಶಾಪಕ್ಕೆ ಯಾರೂ ಗುರಿಯಾಗ ಬೇಡಿ ಎಂದರು. ಕಾರ್ಯಕ್ರಮದ ಅಂಗವಾಗಿ ಪೋಷಕರಿಗೆ ವಿವಿಧ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಎಸ್‌ವಿಜಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಾಂತರಾಜ್ ಹೊನ್ನೇಕೋಡಿ, ಬಿರಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್, ಶಾಲೆಯ ಪ್ರಾಂಶುಪಾಲ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.