ಸಾರಾಂಶ
ಶ್ರೀರಂಗಪಟ್ಟಣ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಹಾಗೂ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವ ಸಲ್ಲಿಕೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಹಾಗೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ತಾಲೂಕು ಗಂಗಾಮತಸ್ಥರು (ಬೆಸ್ತರ) ಸಂಘದಿಂದ ನಡೆದ ಕಾರ್ಯಕ್ರಮಕ್ಕೆ ಜಿಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ ಚಾಲನೆ ನೀಡಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಶಿಕ್ಷಣ ಪಡೆದು ಮಕ್ಕಳು ಉತ್ತಮ ಸ್ಥಾನಗಳನ್ನು ಹೊಂದಬೇಕು. ಆಗ ಸಮಾಜದ ಏಳಿಗೆಗೆ ಪೂರಕವಾದ ಅಂಶಗಳು ದೊರೆಯುತ್ತವೆ ಎಂದರು.
ಸಮಾರಂಭದಲ್ಲಿ ತಾಲೂಕು ಗಂಗಾಮತಸ್ಥರು (ಬೆಸ್ತರ) ಸಂಘದ ಅಧ್ಯಕ್ಷ ಎಂ.ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಪ್ರಭಾವತಿ ಪ್ರಕಾಶ್, ಕುಪ್ಪೆದಡ ಬಣ್ಣದ ಮನೆ ಶಿವನಂಜು, ಪುರಸಭೆ ಸದಸ್ಯ ಎಸ್.ಟಿ.ರಾಜು, ಸಂಘದ ಕಾರ್ಯದರ್ಶಿ ಬಾಲರಾಜ್, ಖಜಾಂಚಿ ಹಾಲಪ್ಪ, ಕೆಆರ್‌ಎಸ್ ತಮ್ಮಣ್ಣ, ಮೇಳಾಪುರ ಭಕ್ತ ವತ್ಸಲ, ಬಸ್ತಿಪುರ ನಾಗರಾಜು, ಅರಕೆರೆ ನಿವೃತ್ತ ಪೊಲೀಸ್ ಸಿದ್ದಯ್ಯ, ಗಂಜಾಂ ಆಟೋ ಸಿದ್ದಪ್ಪ, ರವಿ, ಎಲ್. ನಾಗರಾಜು, ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರು ಸಮಾಜದ ಮುಖಂಡರು ಹಾಜರಿದ್ದರು.ಕೃಷಿಕ ಸಮಾಜ ಸಮಿತಿಗೆ 5 ವರ್ಷಗಳ ಅವಧಿಗೆ ಚುನಾವಣೆ
ಮಂಡ್ಯ: ಕರ್ನಾಟಕ ಪ್ರದೇಶ ಕೃಷಿಕ ಸಮಾಜವು ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 2025-26 ರಿಂದ 2029-30ನೇ ಸಾಲಿನ 5 ವರ್ಷಗಳ ಅವಧಿಗೆ ಚುನಾವಣೆಯನ್ನು ಡಿಸೆಂಬರ್ 15 ರಂದು ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))