ಸಾರಾಂಶ
ವಾರ್ಷಿಕೋತ್ಸವ ಸಮಾರಂಭದಲ್ಲಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಕರಷ್ಟೇ ಗುರತರವಾದ ಜವಾಬ್ದಾರಿಯನ್ನು ಪಾಲಕರು ಕೂಡ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಮಕ್ಕಳನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಕರಷ್ಟೇ ಗುರತರವಾದ ಜವಾಬ್ದಾರಿಯನ್ನು ಪಾಲಕರು ಕೂಡ ನಿಭಾಯಿಸಬೇಕು ಎಂದು ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ಯಕ್ಸಂಬಾ ಪಟ್ಟಣದ ನಣದಿಯ ಬೀರೇಶ್ವರ ಭವನದಲ್ಲಿ ಆಯೋಜಿಸಿದ್ದ ಶಿವಶಂಕರ ಜೊಲ್ಲೆ ಇಂಗ್ಲಿಷ್ ಮಿಡಿಯಮ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮುದಾಯದ ಮಧ್ಯದಲ್ಲಿ ಉತ್ತಮವಾದ ಬಾಂಧವ್ಯವನ್ನು ಬೆಸೆಯುವುದಕ್ಕಾಗಿ ಪ್ರತಿವರ್ಷವೂ ಜೊಲ್ಲೆ ಕುಟಂಬವು ಪ್ರೇರಣಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಇದು ಪ್ರೇರಣಾ ಉತ್ಸವ ಮಾತ್ರವಲ್ಲ ಸಂಸ್ಕೃತಿಯ ಉತ್ಸವವೂ ಆಗಿದೆ ಎಂದರು.
ನಿಪ್ಪಾಣಿಯ ಶಾಸಕಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜೊಲ್ಲೆ ಶಿಕ್ಷಣ ಸಂಸ್ಥೆಯು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡುವುದರ ಮೂಲಕ ಸತ್ಪ್ರಜೆಗಳ ನಿರ್ಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಸರ್ವಾಂಗೀನ ವಿಕಾಸದತ್ತ ಸಂಸ್ಥೆಯು ಸದಾ ಬದ್ಧವಾಗಿದೆ ಎಂದು ತಿಳಿಸಿದರು.ಪ್ರಾಚಾರ್ಯ ಗೀತಾ ನಾಯ್ಡು ಮಾತನಾಡಿ, ಮಕ್ಕಳ ಬಗ್ಗೆ ಪಾಲಕರು ಯಾವಾಗಲೂ ಸಕರಾತ್ಮಕ ಮನೋಭಾವನೆಗಳನ್ನು ಹೊಂದಬೇಕು. ಬೇರೆ ಮಕ್ಕಳ ಜೊತೆಗೆ ತಮ್ಮ ಮಕ್ಕಳನ್ನು ಹೋಲಿಸಬಾರದು. ಮಕ್ಕಳೊಂದಿಗೆ ಶಿಸ್ತು, ಸಂಯಮದಿಂದ ವರ್ತಿಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕೆಂದರು.
ಸದಲಗಾ ಗೀತಾ ಆಶ್ರಮದಪ.ಪೂ ಶ್ರೀ ಶೃದ್ಧಾನಂದ ಸ್ವಾಮಿಜೀ, ಬನಹಟ್ಟಿಯ ಪ.ಪೂ.ಶ್ರೀ ಮಹಾಂತ ದೇವರು, ಪ.ಪೂ.ಶ್ರೀ ಸದಾಶಿವ ಸ್ವಾಮಿಜಿ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಬಸವ ಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ವಿಜಯ ರಾವೂತ ಉಪಸ್ಥಿತರಿದ್ದರು.ಸಪನಾ ವಾಳಕೆ ವಾರ್ಷಿಕ ವರದಿ ಮಂಡಿಸಿದರು. ವಾಣಿಶ್ರೀ ಹೆಗರೆ ಸ್ವಾಗತಿಸಿದರು. ಪೂಜಾ ಕುಲಕರ್ಣಿ ನಿರೂಪಿಸಿದರು. ಧನಶ್ರೀ ಸುತಾರ ವಂದಿಸಿದರು.