ರಸ್ತೆ ದುರಸ್ತಿಗಾಗಿ ವಿದ್ಯಾರ್ಥಿಗಳೊಂದಿಗೆ ಪಾಲಕರ ಪ್ರತಿಭಟನೆ

| Published : Jul 25 2025, 12:35 AM IST

ಸಾರಾಂಶ

ಹನುಮಸಾಗರದಿಂದ ಗ್ರಾಮದಿಂದ ಗಜೇಂದ್ರಗಡ ಪಟ್ಟಣ ಸಂರ್ಪಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ನಿರಂತರ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದೆ. ಕಾಲಿಟ್ಟರೆ ಜಾರಿ ಬೀಳುವ ಪರಿಸ್ಥಿತಿಯಲ್ಲಿ ರಸ್ತೆ ದುರಸ್ತಿಗೊಂಡಿದೆ.

ಹನುಮಸಾಗರ:

ಗ್ರಾಮದ ಗಜೇಂದ್ರಗಡ ಒಳರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ವಿದ್ಯಾರ್ಥಿಗಳು, ಪಾಲಕರು ಹಾಗೂ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮದಿಂದ ಗಜೇಂದ್ರಗಡ ಪಟ್ಟಣ ಸಂರ್ಪಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ನಿರಂತರ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದೆ. ಕಾಲಿಟ್ಟರೆ ಜಾರಿ ಬೀಳುವ ಪರಿಸ್ಥಿತಿಯಲ್ಲಿ ರಸ್ತೆ ದುರಸ್ತಿಗೊಂಡಿದೆ. ಇರುವ ರಸ್ತೆಯಲ್ಲಿ ಶಿಕ್ಷಣ ಸಂಸ್ಥೆ, ನಾನಾ ಭಾಗಗಳ ಹಳ್ಳಿ, ಹೊಲಗಳಿಗೆ ಸಂರ್ಪಕಿಸುವ ರಸ್ತೆಯಿದೆ. ಈ ರಸ್ತೆಯ ದುರಸ್ತಿಗಾಗಿ ಕಳೆದ ಎರಡ್ಮೂರು ವರ್ಷಗಳಿಂದ ಶಾಸಕರಿಗೆ ಹಾಗೂ ಸ್ಥಳೀಯ ಜನಪ್ರತಿನಿಗಳ ಗಮನಕ್ಕೆ ತರಲಾಗಿದ್ದರು. ಒಬ್ಬರು ಇದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಈ ರಸ್ತೆಯಲ್ಲಿ ಜನಪ್ರತಿನಿಧಿಗಳು ಸಂಚರಿಸಿದಾಗ ಮಾತ್ರ ನಿಮಗೆ ಈ ರಸ್ತೆಯ ಅನುಭವವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಟೆಂಡರ್ ಆಗಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ, ಈ ವರೆಗೆ ಕಾಮಗಾರಿ ಆರಂಭಿಸಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ದೂರವಾಣಿ ಮೂಲಕ ಪಾಲಕರನ್ನು ಸಂರ್ಪಸಿ ಆ. 7ರಂದು ರಸ್ತೆ ಟೆಂಡರ್ ಪ್ರಕ್ರಿಯಿದ್ದು ರಸ್ತೆ ದುರಸ್ತಿಯಾಗಲಿದೆ. ಆದರಿಂದ ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷರು ಆ. 7ರ ವರೆಗೆ ಕಾಲಾವಕಾಶ ನೀಡಿದ್ದು ಅಲ್ಲಿಯ ವರೆಗೆ ಕಾದು ನೋಡಲಾಗುವುದು. ಒಂದು ವೇಳೆ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದೆ ಇದ್ದರೆ ಪಾಲಕರು, ವಿದ್ಯಾರ್ಥಿಗಳು, ರೈತರು ಸೇರಿಕೊಂಡು ರಸ್ತೆ ಬಮದ್‌ ಮಾಡಿ ಹೋರಾಟ ನಡೆಸಲಾಗುವುದು ಎಂದು ಪಾಲಕರಾದ ಶೌಖತ್ ದಿಂಡೂರ ಹೇಳಿದರು.