ಭಾಷೆಯ ಬಳಕೆಗೆ ಪೋಷಕರ ಪಾತ್ರ ಅತಿ ಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Nov 28 2024, 12:30 AM IST

ಭಾಷೆಯ ಬಳಕೆಗೆ ಪೋಷಕರ ಪಾತ್ರ ಅತಿ ಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮಕ್ಕಳ ಭಾಷೆಯನ್ನು ಬಳಸುವಲ್ಲಿ ಪೋಷಕರ ಪಾತ್ರ ಅತಿ ಮುಖ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ ಘಟಕ, ಲಕ್ಕವಳ್ಳಿ ಹೋಬಳಿ ಘಟಕ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಮೀಪದ ಲಕ್ಕವಳ್ಳಿಯಲ್ಲಿ ಏರ್ಪಡಿಸಿದ್ದ ಸೇವಾ ದೀಕ್ಷೆ ಮತ್ತು ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಲಕ್ಕವಳ್ಳಿಯಲ್ಲಿ ಸೇವಾ ದೀಕ್ಷೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳ ಭಾಷೆಯನ್ನು ಬಳಸುವಲ್ಲಿ ಪೋಷಕರ ಪಾತ್ರ ಅತಿ ಮುಖ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆ ಘಟಕ, ಲಕ್ಕವಳ್ಳಿ ಹೋಬಳಿ ಘಟಕ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಮೀಪದ ಲಕ್ಕವಳ್ಳಿಯಲ್ಲಿ ಏರ್ಪಡಿಸಿದ್ದ ಸೇವಾ ದೀಕ್ಷೆ ಮತ್ತು ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.ಮಾತೃಭಾಷೆ ಕಲಿಕೆಯಲ್ಲಿ ಪೋಷಕರ ಪಾತ್ರ ಅತಿ ಮುಖ್ಯವಾಗಿದ್ದು, ಮಕ್ಕಳಿಗೆ ಮೊದಲು ನೇರವಾಗಿ ಸಂಸ್ಕಾರ, ತೊದಲು ನುಡಿಗಳು ಪೋಷಕರಿಂದಲೇ ಬರುತ್ತವೆ. ತಾಯಂದಿರಾದವರು ಮಕ್ಕಳ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿದ್ದು ಅವರ ಎಲ್ಲಾ ಚಟುವಟಿಕೆ ಮಕ್ಕಳು ಗಮನಿಸುತ್ತಾರೆ, ಮಗು ಹುಟ್ಟಿದಾಗಿನಿಂದ ಹಿಡಿದು. ಭಾವನೆಗಳ ಮುಖಾಂತರ ಪೋಷಕರೊಂದಿಗೆ ವರ್ತಿಸುತ್ತಾ ಬರುತ್ತವೆ ಎಂದು ಹೇಳಿದರು.ಬಹಳ ಸುಂದರ ಭಾಷೆ ಕನ್ನಡ ಕಲಿಕೆ ಮಕ್ಕಳಿಗೆ ಸರಳ. ಮಾತೃಭಾಷೆಯಲ್ಲಿ ಅವರಿಗೆ ವಿದ್ಯಾಭ್ಯಾಸ ದೊರೆಯುತ್ತಿದ್ದು ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನಗಳ ಆವಿಷ್ಕಾರದಿಂದ ಇತರೆ ಭಾಷೆಗಳ ಮೊರೆ ಹೋಗುತ್ತಿರುವುದು ವಿಷಾದನೀಯ ಸಂಗತಿ ಎಂದರು. ವೇದಿಕೆ ಮೇಲೆ ಇರುವ ಗಣ್ಯರು ಹಾಗೂ ನಾವೆಲ್ಲರೂ ಕನ್ನಡ ಶಾಲೆಯಲ್ಲಿ ಓದಿ ಇಂದು ಈ ಹಂತ ತಲುಪಿದ್ದೇವೆ. ಅಷ್ಟೇ ಏಕೆ ಇತರೆ ಭಾಷಿಗರು ಕನ್ನಡದಲ್ಲಿ ಅಧ್ಯಯನ ಮಾಡಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದು ಅದರಲ್ಲಿ ಮೊದಲನೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರು ಮೊಟ್ಟ ಮೊದಲಿಗೆ ಇಂಗ್ಲೀಷ್ ನಲ್ಲಿ ಬಿಗಿನರ್ಸ್ ಮ್ಯೂ ಕವನ ಬರೆದು ತಮ್ಮ ಅಚ್ಚುಮೆಚ್ಚಿನ ಇಂಗ್ಲೀಷ್ ಅಧ್ಯಾಪಕರಿಗೆ ತೋರಿಸಿದಾಗ ಅವರು ಹೇಳಿದ ಮಾತೆಂದರೆ ಮಾತೃಭಾಷೆಯಲ್ಲಿ ಕವನ ಬರೆಯುವ ಮೂಲಕ ಭಾವನೆ ವ್ಯಕ್ತಪಡಿಸಿದಾಗ ಇನ್ನೂ ಉತ್ತಮವಾಗಿ ಮೂಡಿ ಬರುತ್ತದೆ ಎಂದು ಸಲಹೆ ನೀಡಿದ್ದ ಎಂಬುದನ್ನು ಸ್ಮರಿಸಿದರು.ಲಕ್ಕವಳ್ಳಿಯಲ್ಲಿ ಹಲವು ಧರ್ಮೀಯರಿದ್ದರೂ ಕನ್ನಡಕ್ಕೆ ವಿಶೇಷ ಪ್ರಾಧಾನ್ಯತೆ ನೀಡುತ್ತಾರೆ. ಕನ್ನಡ ಕಲಿತು ನೆಲ ಜಲದ ಬಗ್ಗೆ ಅಪಾರ ಗೌರವ ಬೆಳೆಸಿಕೊಂಡಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿ ಈ ನೆಲದ ಬೇರಾಗಿದ್ದು ಅವುಗಳನ್ನು ಪಸರಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯುತ್ತಿದೆ. ಕನ್ನಡ ತೇರನ್ನು ಎಳೆಯುವ ಕೆಲಸ ಎಲ್ಲರಿಂದ ಆಗಲಿ ಎಂದು ಶುಭ ಹಾರೈಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಲಕ್ಕವಳ್ಳಿ ಹೋಬಳಿ ಘಟಕ ಇಂದು ಅಸ್ತಿತ್ವಕ್ಕೆ ಬಂದಿದ್ದು ಕನ್ನಡ ತೇರು ಎಳೆಯುವ ಕೆಲಸ ಎಲ್ಲರಿಂದ ಕೂಡಿ ನಡೆಯಲಿ, ಇಲ್ಲಿ ಅನ್ಯ ಭಾಷಿಕರ ಪ್ರಭಾವ ಸಾಕಷ್ಟು, ಇದ್ದರೂ ಕನ್ನಡ ಮಾತನಾಡಿ ಕನ್ನಡ ಭಾಷಾ ಪ್ರೇಮ ಮೆರೆಯುತ್ತಿದ್ದಾರೆ. ಅದಕ್ಕೆ ತಮಿಳು ಶಾಲೆ ಮುಖ್ಯ ಶಿಕ್ಷಕ ಪಾಲಯ್ಯನರವರೇ ಉದಾಹರಣೆ. ಅವರು ತಮಿಳು ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಇಲಾಖೆ ಪತ್ರ ವ್ಯವಹಾರವನ್ನು ಕನ್ನಡದಲ್ಲಿ ಮಾಡಿ ಕನ್ನಡತನ ಉಳಿಸಿಕೊಂಡು, ಕನ್ನಡ ನೆಲ, ಜಲದ ಬಗ್ಗೆ ಕಾಳಜಿ ಹೊಂದಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘ, ಸಂಸ್ಥೆಗಳೊಂದಿಗೆ ರಾಜ್ಯೋತ್ಸವದ ಯಶಸ್ವಿಗೆ ದುಡಿಯುತ್ತಿದ್ದಾರೆ. ಇಂಥವರ ಉದಾಹರಣೆಗಳು ಇಲ್ಲಿ ಸಾಕಷ್ಟು ಇದ್ದು, ಹೋಬಳಿ ಘಟಕದ ಅಧ್ಯಕ್ಷರೇ ತಮಿಳು ಭಾಷಿಕರಾಗಿದ್ದು, ಕನ್ನಡದಲ್ಲಿ ಸಾಹಿತ್ಯ ಕೃತಿ ರಚಿಸಿ ಕನ್ನಡ ಭಾಷೆಗೆ ತನ್ನದೇ ಆದ ಕೊಡುಗೆ ಮೂಲಕ ಇಂದಿಗೂ ಸಾಹಿತ್ಯ ಕೃಷಿ ಮಾಡುತ್ತಲೇ ಇದ್ದಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸರ್ವಭೌಮ ಎಂದರು. ಲಕ್ಕವಳ್ಳಿ ಹೋಬಳಿ ಘಟಕ ಅಧ್ಯಕ್ಷ ಚಕ್ರವರ್ತಿ ಸಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಇಮ್ರಾನ್ ಅಹಮದ್ ಬೇಗ್. ಅನ್ಭು. ಪಾಂಡುರಂಗ ಜಾದವ್. ಗ್ರಾಪಂ ಅಧ್ಯಕ್ಷ ರೆಹೆಮಾನ್, ಡಾಕ್ಟರ್ ನವೀನ್, ನಾಗರಾಜ್, ಕೆ ಪಿ ಕುಮಾರ್, ಮಾತನಾಡಿದರು.

ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತ.ಮ. ದೇವಾನಂದ್, ಎ. ದಾದಾಪೀರ್, ಎಸ್. ಟಿ. ತಿಪ್ಪೇಶಪ್ಪ, ಮಹೇಶ್, ಕನ್ನಡಶ್ರೀ ಬಿ.ಎಸ್. ಭಗವಾನ್ ಕೋಡಿಹಳ್ಳಿ ಮಹೇಶ್, ಪಾರ್ವತಿ ಭಾಗವಹಿಸಿದ್ದರು.

27ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ನಡೆದ ಸೇವಾ ದೀಕ್ಷೆ ಮತ್ತು ಕನ್ನಡ ರಾಜ್ಯೋತ್ಸವವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಗ್ರಾಪಂ ಅಧ್ಯಕ್ಷ ರೆಹಮಾನ್ ಮತ್ತಿತರರು ಇದ್ದರು.