ಸಾರಾಂಶ
ಮಕ್ಕಳು ಹೆಚ್ಚು ಅಂಕ ಪಡೆದಿಲ್ಲವೆಂದು ಪೋಷಕರು ಚಿಂತಾಕ್ರಾಂತರಾಗದೇ ನಡೆ, ನುಡಿಗಳಲ್ಲಿ ಬದಲಾವಣೆಯಾಗಿದೆಯಾ ಎಂದು ಗಮನಿಸಬೇಕು. ಯಾವ ಕಾರಣಕ್ಕೂ ಪೋಷಕರು ಮಾರ್ಕ್ಸ್‌ವಾದಿಗಳಾಗಬೇಡಿ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ ಹೇಳಿದ್ದಾರೆ.
- ಕುಂಬಳೂರಿನ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಸಾಂಸ್ಕೃತಿಕ ಉತ್ಸವ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಮಕ್ಕಳು ಹೆಚ್ಚು ಅಂಕ ಪಡೆದಿಲ್ಲವೆಂದು ಪೋಷಕರು ಚಿಂತಾಕ್ರಾಂತರಾಗದೇ ನಡೆ, ನುಡಿಗಳಲ್ಲಿ ಬದಲಾವಣೆಯಾಗಿದೆಯಾ ಎಂದು ಗಮನಿಸಬೇಕು. ಯಾವ ಕಾರಣಕ್ಕೂ ಪೋಷಕರು ಮಾರ್ಕ್ಸ್‌ವಾದಿಗಳಾಗಬೇಡಿ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ ಹೇಳಿದರು.
ಇಲ್ಲಿಗೆ ಸಮೀಪದ ಕುಂಬಳೂರಿನ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ರಾತ್ರಿ ಹಮ್ಮಿಕೊಂಡ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡಿದರು. ಮಕ್ಕಳು ಓದಿನಿಂದ ದೊಡ್ಡವರಾಗಲ್ಲ, ಗಣಿತ, ವಿಜ್ಞಾನ ಬಾರದವರೂ ದೊಡ್ಡವರಾಗಿದ್ದಾರೆ. ಹಾಗಾಗಿ, ಪೋಷಕರು ಮಕ್ಕಳ ಅಂಕಗಳ ಬಗ್ಗೆ ಚಿಂತೆ ಮಾಡದೇ ಬೇರೆ ವಿಷಯಗಳಲ್ಲಿ ಆಸಕ್ತಿ ಹೇಗಿದೆ ಎಂದು ಗಮನಹರಿಸುವುದು ಸೂಕ್ತ ಎಂದು ತಿಳಿಸಿದರು.ಮಕ್ಕಳಿಗೆ ಮನೆಯಲ್ಲಿ ಓದಲು ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು. ಶಿಕ್ಷಕರು ಶಾಲೆಯಲ್ಲಿ ತಮ್ಮ ಮಕ್ಕಳಂತೆ ತಿಳಿದು ಬೋಧಿಸಬೇಕು. ಮೌಲ್ಯಗಳನ್ನೂ ಕಲಿಸಬೇಕಿದೆ. ಜೀವನ ಎಂದರೆ ಬರೀ ಓದು ಅಲ್ಲ. ಪ್ರತಿಭೆ ಇರುವತ್ತ ಪ್ರೋತ್ಸಾಹ ನೀಡುವುದಾಗಿದೆ. 3 ವರ್ಷದಿಂದ ಚಿಟ್ಟಕ್ಕಿ ಶಾಲೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆ ಆಡಳಿತಾಧಿಕಾರಿ ಎಸ್. ಕುಮಾರ್ ಮಾತನಾಡಿದರು. ಶಾಲೆ ಸಂಸ್ಥಾಪಕ ರಮೇಶ್ ಚಿಟ್ಟಕ್ಕಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಧಾ ಚಿಟ್ಟಕ್ಕಿ, ಕಾರ್ಯದರ್ಶಿ ಮಹಾಂತೇಶ್, ವರ್ತಕ ಸುಧೀರ್, ಪಾಟೀಲ್, ಪ್ರಾಂಶುಪಾಲೆ ಅಖಿಲೇಶ್ವರಿ, ಅಭಿಷೇಕ್ ಮತ್ತಿತರರು ಹಾಜರಿದ್ದರು. ಮಕ್ಕಳಿಂದ ದೇಶಭಕ್ತಿ ಗೀತೆಗಳ ಮನರಂಜನಾ ಕಾರ್ಯಕ್ರಮ ಜರುಗಿದವು.- - - -೨೭ಎಂಬಿಆರ್೧:
ಕುಂಬಳೂರಿನ ಚಿಟ್ಟಕ್ಕಿ ಶಾಲೆಯಲ್ಲಿ ಜರುಗಿದ ಸಾಂಸ್ಕೃತಿಕ ಉತ್ಸವವನ್ನು ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ ಉದ್ಘಾಟಿಸಿದರು.