ಪಾಲಕರು ಮಕ್ಕಳ ಎಟಿಎಂ ಆಗಬೇಡಿ: ಶಿವಾನಿ ಶಾಂತರಾಮ

| Published : Aug 22 2025, 01:01 AM IST

ಸಾರಾಂಶ

11ನೇ ವರ್ಷದ ಯಶೋದ ಕೃಷ್ಣ ಸ್ಪರ್ಧೆ 2025ರ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಭಟ್ಕಳ: ಪಾಲಕರು ಮಕ್ಕಳ ಎಟಿಎಂ ಆಗಬೇಡಿ. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿ. ಇದರಿಂದ ಮಕ್ಕಳಲ್ಲಿ ಧೈರ್ಯ, ಸ್ಥೈರ್ಯ ಉತ್ತಮ ಮನೋವೃತ್ತಿ ಹಾಗೂ ಜ್ಞಾನ ವಿಕಾಸ ಉಂಟಾಗುತ್ತದೆ ಎಂದು ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತರಾಮ್ ಭಟ್ಕಳ ಹೇಳಿದರು.

ಅವರು ಪಟ್ಟಣದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜ ಸೇವಾ ಟ್ರಸ್ಟ್, ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ, ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಭಟ್ಕಳ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಪ್ರಯುಕ್ತ ಆರು ವರ್ಷದೊಳಗಿನ ಮುದ್ದು ಮಕ್ಕಳಿಗಾಗಿ 11ನೇ ವರ್ಷದ ಯಶೋದ ಕೃಷ್ಣ ಸ್ಪರ್ಧೆ 2025ರ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗಾಣಿಗ ಸೇವಾ ಟ್ರಸ್ಟಿನ ಅಧ್ಯಕ್ಷ ಸುಭಾಷ್ ಎಂ. ಶೆಟ್ಟಿ ಮಾತನಾಡಿ, ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುತ್ತದೆ. ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ. ಮಕ್ಕಳನ್ನು ಸಂಸ್ಕಾರ ವಂತರನ್ನಾಗಿ ಮಾಡಿ ಸನಾತನ ಧರ್ಮವನ್ನು ಉಳಿಸಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮುಡೇಶ್ವರ ಲಯನ್ಸ್‌ ಕ್ಲಬ್ ಅಧ್ಯಕ್ಷ ಕಿರಣ್ ಕಾಯ್ಕಿಣಿ ಮಾತನಾಡಿದರು. ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ, ಮನೋಜ ಶೆಟ್ಟಿ ಗಜಾನನ ಶೆಟ್ಟಿ, ರಾಧಾ ಶೆಟ್ಟಿ, ಶರಣೇಶ ಶೆಟ್ಟಿ, ಸುಧಾಕರ ಶೆಟ್ಟಿ, ರಮೇಶ ಶೆಟ್ಟಿ, ವಿನೋಧ ಶೆಟ್ಟಿ, ರವಿಚಂದ್ರ ಶೆಟ್ಟಿ, ಅಜಯ ಶೆಟ್ಟಿ, ವಿಶಾಲಾಕ್ಷಿ, ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು.

ಯಶೋದ-ಕೃಷ್ಣ 2025ರ ವಿನ್ನರ್ ಸ್ನೇಹ ರಾಜೇಂದ್ರ ಮುರ್ಡೇಶ್ವರ ಹಾಗೂ ರುಹಾನಿ ರಾಜೇಂದ್ರ ಮುರ್ಡೇಶ್ವರ, ರನ್ನರ್ ಅಪ್ ಆಗಿ ಅನಿತಾ ರಾಜೇಶ ಶೆಟ್ಟಿ ಹಾಗೂ ಪುನರ್ವಿ ರಾಜೇಶ ಶೆಟ್ಟಿ ಮಿಂಚಿದರು. ವಿಶೇಷ ಪ್ರಶಸ್ತಿಯನ್ನು ಮಮತಾ ಉಮೇಶ ನಾಯ್ಕ, ದೃವಿತಾ ಉಮೇಶ ನಾಯ್ಕ, ಹೇಮಾ ಮೊಗೇರ, ದಿಶಾನಿ ಮೊಗೇರ, ಮಂಜುಳಾ ಶಿವಕುಮಾರ ಪಡೆದರು.

ಕಾರ್ಯಕ್ರಮದ ಸಂಯೋಜಕ ಪ್ರಕಾಶ್ ಶಿರಾಲಿ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು. ಸತ್ಯವತಿ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಉಷಾ ಶೆಟ್ಟಿ, ಗಾಯತ್ರಿ ಶೆಟ್ಟಿ ನಿರೂಪಿಸಿದರು. ಭಟ್ಕಳ ಡಾನ್ಸ್‌ ಸ್ಕೂಲಿನ ಮಕ್ಕಳ ಕೃಷ್ಣ ರೂಪಕ ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿತು.