ಶಿಕ್ಷಕರು ಸಮಾಜವನ್ನು ಕಟ್ಟುವಂತಹರಾಗಿದ್ದಾರೆ. ಶಾಲೆ ಕಟ್ಟಡ ಕಟ್ಟಿದರೆ ಸಾಲದು ಶಾಲೆಯಲ್ಲಿ ಉತ್ತಮ ಶಿಕ್ಷಕರು ಇರಬೇಕು. ಶಿಕ್ಷಣದಲ್ಲಿ ಹಣದ ದಾಹ ಸ್ವಾರ್ಥದಿಂದಾಗಿ ಸಂಬಂಧಗಳೇ ಕೆಟ್ಟು ಹೋಗುತ್ತಿವೆ. ಮಕ್ಕಳಿಗೆ ಶಿಕ್ಷಣದಲ್ಲಿ ಒತ್ತಡ ಹೆಚ್ಚುತ್ತಿದೆ. ಮಕ್ಕಳಿಗೆ ಆರೋಗ್ಯವು ಅತಿ ಮುಖ್ಯವಾಗಿದೆ. ಪಾಲಕರು ಪರೀಕ್ಷೆಯಲ್ಲಿ ೯೫% ಮತ್ತು 100%ಫಲಿತಾಂಶ ತರಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.ಪಾಲಕರು ಮಕ್ಕಳಿಗೆ ಒತ್ತಡವನ್ನು ಹಾಕಬೇಡಿರಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಶಿಕ್ಷಕರು ಸಮಾಜವನ್ನು ಕಟ್ಟುವಂತಹರಾಗಿದ್ದಾರೆ. ಶಾಲೆ ಕಟ್ಟಡ ಕಟ್ಟಿದರೆ ಸಾಲದು ಶಾಲೆಯಲ್ಲಿ ಉತ್ತಮ ಶಿಕ್ಷಕರು ಇರಬೇಕು. ಶಿಕ್ಷಣದಲ್ಲಿ ಹಣದ ದಾಹ ಸ್ವಾರ್ಥದಿಂದಾಗಿ ಸಂಬಂಧಗಳೇ ಕೆಟ್ಟು ಹೋಗುತ್ತಿವೆ. ಮಕ್ಕಳಿಗೆ ಶಿಕ್ಷಣದಲ್ಲಿ ಒತ್ತಡ ಹೆಚ್ಚುತ್ತಿದೆ. ಮಕ್ಕಳಿಗೆ ಆರೋಗ್ಯವು ಅತಿ ಮುಖ್ಯವಾಗಿದೆ. ಪಾಲಕರು ಪರೀಕ್ಷೆಯಲ್ಲಿ ೯೫% ಮತ್ತು 100%ಫಲಿತಾಂಶ ತರಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.ಪಾಲಕರು ಮಕ್ಕಳಿಗೆ ಒತ್ತಡವನ್ನು ಹಾಕಬೇಡಿರಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.

ಪಟ್ಟಣದ ವೀರೇಂದ್ರ ಪಾಟೀಲ ಶಿಕ್ಷಣ ಟ್ರಸ್ಟ ವತಿಯಿಂದ ವೀರೇಂದ್ರ ಪಾಟೀಲ ಪಬ್ಲಿಕ್‌ ಶಾಲೆ, ಕನ್ನಡ ಮಾಧ್ಯಮ ಹಾಗೂ ವಿಜ್ಞಾನ ಕಾಲೇಜು ೨೪ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟದ ಪ್ರದೇಶಕ್ಕೆ ಒಳಪಟ್ಟಂತಹ ನಮ್ಮ ಭಾಗವು ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಬಹಳ ಮುಂದುವರಿದ ಪ್ರದೇಶವಾಗಿದ್ದರೂ ಅನೇಕ ಕಾರಣಗಳಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನು ಬಹಳಷ್ಟು ಪ್ರಗತಿ ಸಾಧಿಸಬೇಕಾಗಿದೆ. ಈ ಭಾಗದಲ್ಲಿ ಶಾಲೆ ಕಾಲೇಜುಗಳು ಇರಲಿಲ್ಲ, ಮಾಜಿ ಸಿಎಂ ದಿ.ವೀರೇಂದ್ರ ಪಾಟೀಲರ ಹೆಸರಿನಲ್ಲಿ ಆಂಗ್ಲ. ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಿ ಮಕ್ಕಳಿಗೆ ಗುಣಾತ್ಮಕವಾದಂತಹ ಶಿಕ್ಷಣ ಸಿಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದಿನ ಮಕ್ಕಳೆ ಮುಂದಿನ ಭವಿಷ್ಯದ ಪ್ರಜೆಗಳು,ಪ್ರಾಥಮಿಕ ಶಿಕ್ಷಣವೇ ಬುನಾದಿ ಹಂತದಲ್ಲಿ ಭದ್ರವಾದ ಶಿಕ್ಷಣದ ಅಡಿಪಾಯ ಚೆನ್ನಾಗಿದ್ದರೆ ಮಾತ್ರ ಯಾವುದೇ ಭೂಕಂಪವಾದರೂ ಏನು ಆಗುವುದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕೊಟ್ಟರೆ ಒಳ್ಳೆಯ ನಾಗರಿಕರಾಗುತ್ತಾರೆ ಎಂದರು.

ಮಕ್ಕಳು ಸ್ಮಾರ್ಟ್‌ ಫೋನ್‌ ಬಳಕೆಯಿಂದಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮಕ್ಕಳು ಬೇರೆ ಕಡೆ ವಿದ್ಯಾಭ್ಯಾಸಕ್ಕಾಗಿ ಹೋದಾಗ ಅಲ್ಲಿ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಮಕ್ಕಳಿಗೆ ರಾಷ್ಟ್ರೀಯತೆ ದೇಶಭಕ್ತಿ ಬೆಳೆಸಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು.ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು. ಪರೀಕ್ಷೆಯಲ್ಲಿ ಫೇಲಾದಾಗ ಅವರಿಗೆ ತೊಂದರೆ ಕೊಡಬೇಡಿರಿ. ಚಿಂಚೋಳಿ ತಾಲೂಕವು ಒಳ್ಳೆಯ ಅರಣ್ಯಪ್ರದೇಶವನ್ನು ಹೊಂದಿದೆ.ಪ್ರಕೃತಿ ಮೇಲೆ ದೌರ್ಜನ್ಯ ನಡೆಯುತ್ತಿದೆ.ಅಕ್ಸಿಜನ ಇಲ್ಲದೇ ಇರುವುದರಿಂದ ಕೊರೊನಾದಲ್ಲಿ ರೋಗಿಗಳು ಆಕ್ಷಿಜನ ಇಲ್ಲದೇ ಪ್ರಾಣಕಳೆದುಕೊಂಡಿದ್ದಾರೆ ಎಂದರು.

ಮಾಜಿ ಶಾಸಕ ಕೈಲಾಶನಾಥ ಪಾಟೀಲ ಮಾತನಾಡಿದರು. ಶಾರದಾದೇವಿ ರಾಠೋಡ, ಮುಗುಳನಾಗಾವಿ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ವೀರಂದ್ರ ಪಾಟೀಲ ಪಬ್ಲಿಕ ಶಾಲೆ ಉಪಾಧ್ಯಕ್ಷ ಬಸವರಾಜ ಮಲಿ ಸ್ವಾಗತಿಸಿದರು. ವಿಶ್ವನಾಥ ನಾಯನೋರ ನಿರೂಪಿಸಿದರು. ವೀರಶಟ್ಟಿ ಸಜ್ಜನಶೆಟ್ಟಿ ವಂದಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೫ನೇ ರ್‍ಯಾಂಕ್‌ ಪಡೆದ ರಾಗಿಣಿ ಅವರನ್ನು ಸಚಿವರು ಬಹುಮಾನ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಅಭಿನಂದನ್ ಪಾಟೀಲ,ಧೂಳಪ್ಪಬೀರನಳ್ಳಿ,ಶಿವಪುತ್ರಪ್ಪ ಸೀಳಿನ್, ಬಿಇಒ ಲಕ್ಷ್ಮಯ್ಯ, ರವಿ ಸಾಹುಕಾರ ತಂಬಾಕೆ, ಅಬ್ದುಲ ಬಾಸೀತ, ಶರಣು ಪಾಟೀಲ, ಸಂಗಯ್ಯಸ್ವಾಮಿ, ಮಹೆಮೂದ ಪಟೇಲ ಸಾಸರಗಾಂವ,ರಾಜು ನಿಂಗದಳ್ಳಿ,ಆನಂದ ಟೈಗರ,ವಿಶ್ವನಾಥ ಬೀರನಳ್ಳಿ ಶಬ್ಬೀರ ಅಹೆಮದ,ಜಗನ್ನಾಥ ಇದಲಾಯ ಇತರರು ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.