ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಗಮನಹರಿಸಬೇಕು: ಡಾ. ಕೋರನ ಸರಸ್ವತಿ

| Published : Nov 22 2025, 03:00 AM IST

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಗಮನಹರಿಸಬೇಕು: ಡಾ. ಕೋರನ ಸರಸ್ವತಿ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರು ಉಪನ್ಯಾಸಕರ ಜೊತೆಗೆ ಸಂಪರ್ಕವನ್ನು ಇಟ್ಟುಕೊಂಡು ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಕುರಿತು ಗಮನಹರಿಸಬೇಕು ಎಂದು ಡಾ. ಕೋರನ ಸರಸ್ವತಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಉಪನ್ಯಾಸಕರ ಜೊತೆಗೆ ಸಂಪರ್ಕವನ್ನು ಇಟ್ಟು ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಕುರಿತು ಗಮನಹರಿಸುತ್ತಿರಬೇಕು ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೋರನ ಸರಸ್ವತಿ ರವರು ಅಭಿಪ್ರಾಯಪಟ್ಟರು.

ಅವರು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪೋಷಕ ಶಿಕ್ಷಕರ ಸಭೆ 2025 -26 ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.

ಪ್ರಸ್ತುತ ಕಾಲೇಜಿನಲ್ಲಿ 385 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಬಿ ಎ, ಬಿಕಾಂ ಹಾಗೂ ಬಿಬಿಎ ಕೋರ್ಸ್ ಗಳು ಲಭ್ಯವಿದೆ. ನುರಿತ ಪ್ರಾಧ್ಯಾಪಕ ವರ್ಗದಿಂದ ಉತ್ತಮ ಬೋಧನೆಯನ್ನು ನೀಡಲಾಗುತ್ತಿದೆ. ವಿವಿಧ ವಿದ್ಯಾರ್ಥಿ ವೇತನದ ಸೌಲಭ್ಯವು ಇದ್ದು, ಉತ್ತಮ ಗ್ರಂಥಾಲಯ ಆಪ್ತ, ಸಮಾಲೋಚನ ಕೇಂದ್ರ, ಮತ್ತು ಉದ್ಯೋಗ ಕೋಶ ಘಟಕದ ವ್ಯವಸ್ಥೆಯನ್ನು ಹೊಂದಿದೆ ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಸ್ಥೆ, ಬೋಧಕರು ಹಾಗೂ ಪೋಷಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಪೋಷಕರು ಆಗಿಂದಾಗ್ಗೆ ಕಾಲೇಜಿನೊಂದಿಗೆ ಸಂಪರ್ಕವನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಘಟಕದ ಸಂಚಾಲಕರಾದ ಡಾ. ದಯಾನಂದ ಕೆ. ಸಿ. ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಸಮಿತಿಯ ಸಂಚಾಲಕರಾದ ದಮಯಂತಿ ರವರು ಸ್ವಾಗತಿಸಿ, ಐಕ್ಯುಎಸಿ ಸಂಚಾಲಕರಾದ ಪ್ರೊ. ಬಸವರಾಜು ಕೆ ರವರು ವಂದಿಸಿದರು. ಪೋಷಕ ಸದಸ್ಯರಾದ ಜೋಸೆಫ್, ಉಪನ್ಯಾಸಕರು, ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳಿಂದ ಏಡ್ಸ್ ಜಾಗೃತಿಯ ಕುರಿತು ಕಿರು ಪ್ರಹಸನ ಕಾರ್ಯಕ್ರಮ ನಡೆಯಿತು.